Advertisement
ಮನೆ ಕಳ್ಳತನ ಪ್ರಕರಣದ ಆರೋಪಿಗಳು ಹಾಗೂ ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾ ವಹಿಸಲಾಗಿತ್ತು. ಅದರಂತೆ ಸೋಮವಾರ ಸಂಜೆ ನೀಲಾವರ ಕ್ರಾಸ್ ಬಳಿ ಕಳ್ಳತನ ಪ್ರಕರಣದ ಹಳೆಯ ಆರೋಪಿ ವಿಜಯ ಕುಮಾರ್ ಶೆಟ್ಟಿಯನ್ನು ತಡೆದು ನಿಲ್ಲಿಸಿ ಆತನ ದ್ವಿಚಕ್ರ ವಾಹನ ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಪತ್ತೆಯಾಗಿವೆ.
2022ರ ಮಾರ್ಚ್ ಎಪ್ರಿಲ್ ತಿಂಗಳ ಮಧ್ಯಾವ ಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ಅವರ ಹಳೆ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280ಕೆ.ಜಿ. ತೂಕದ ರೂ.1,40,000 ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿರುತ್ತಾನೆ. ಜುಲಾೖಯಲ್ಲಿ ನಡೂರು ಪ್ರಾ. ಶಾಲೆಯ ಬೀಗ ಮುರಿದು ಒಂದು ಗ್ಯಾಸ್ ಸಿಲಿಂಡರ್ ಕಳವು, ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರುವ ವಾಣಿ ಭಂಡಾರಿ ಅವರ ಮನೆಯಲ್ಲಿ ಸುಮಾರು 5,04,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ರೂ.15,000 ನಗದು ಕಳವು, ನವಂಬರ್‌ನಲ್ಲಿ ಬಿಲ್ಲಾಡಿ ಮಾನ್ಯ ಶಾಲೆಯ ಎದುರು ಸುಜಾತ ಶೆಟ್ಟಿ ಅವರ ಮನೆ ಕಳ್ಳತನ, ಆರೂರು ಗ್ರಾಮದ ಮೇಲಡು³ ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ ರೂ.31,000 ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ, ಸೀರೆ ಹಾಗೂ ನಗದು ರೂ. 5,000 ಕಳವು ಮಾಡಿದ್ದನು.
Related Articles
Advertisement
ಸ್ವಾಧೀನಪಡಿಸಿದ ಸೊತ್ತುಗಳ ವಿವರ:ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್ ಮೌಲ್ಯ ರೂ. 30,000, ಕಳವು ಮಾಡಿದ ರೂ. 4,64,700 ಮೌಲ್ಯದ ಚಿನ್ನಾಭರಣ, ರೂ. 2,080 ಮೌಲ್ಯದ ಬೆಳ್ಳಿ ನಾಣ್ಯ,ರೂ. 9,000 ಮೌಲ್ಯದ ಸೀರೆ, ಕಾಳುಮಣಸಿನ ಮಾರಾಟದಿಂದ ಪಡೆದ ನಗದು ರೂ. 84,000 ಹಾಗೂ ಗ್ಯಾಸ್ ಸಿಲಿಂಡರ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಎಸ್‌ಪಿ ಅಕ್ಷಯ ಎಂ.ಎಚ್., ಎಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ, ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ ಅವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಪನಿರೀಕ್ಷಕರಾದ ರಾಜಶೇಖರ ವಂದಲಿ, ಮುಕ್ತಾಬಾಯಿ, ಮಧುಬಿ.ಇ. ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.