Advertisement

ಬ್ರಹ್ಮಾವರ ಬೋರ್ಡ್‌ ಶಾಲೆ; ಎಸೆಸೆಲ್ಸಿಗೆ 333 ವಿದ್ಯಾರ್ಥಿಗಳು…!

10:07 PM Mar 15, 2020 | Sriram |

ಬ್ರಹ್ಮಾವರ: ಇಲ್ಲಿನ ಬೋರ್ಡ್‌ ಶಾಲೆಯಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವವರ ಸಂಖ್ಯೆ ಬರೋ ಬ್ಬರಿ 333. ಸರಕಾರಿ ಶಾಲೆಯೊಂದರಲ್ಲಿ ಇಷ್ಟೊಂದು ಮಕ್ಕಳ ಸಂಖ್ಯೆ ದಾಖಲೆಯಾಗಿದೆ. ಕಳೆದ ವರ್ಷ 285 ಮಂದಿ ಹಾಜರಾಗಿದ್ದರು.

Advertisement

30 ವರ್ಷಗಳ ಹಿಂದೆ ಪ್ರಾರಂಭವಾದ ಬ್ರಹ್ಮಾವರ ಬೋರ್ಡ್‌ ಶಾಲೆಯಲ್ಲಿ ಮೊದಲ ವರ್ಷದ ದಾಖಲಾತಿ ಕೇವಲ 18. ಬರುಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಕಳೆದ 10 ವರ್ಷಗಳಿಂದ ಗುಣಮಟ್ಟದ ಶಿಕ್ಷಣದಿಂದ ಸಾಕಷ್ಟು ಪ್ರಖ್ಯಾತಿಯಾಗಿದೆ. ಪ್ರಸ್ತುತ ಪ್ರೌಢಶಾಲಾ ವಿಭಾಗದಲ್ಲೇ 900ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ.

ಉತ್ತಮ ಫಲಿತಾಂಶ
ಕಳೆದ ಸುಮಾರು 6 ವರ್ಷಗಳಿಂದ ಎಸೆಸೆಲ್ಸಿಯಲ್ಲಿ 270ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿದ್ದರೂ ಶೇ.95ಕ್ಕಿಂತ ಹೆಚ್ಚು ಫಲಿತಾಂಶ ದಾಖಲಾಗುತ್ತಿರುವುದು ವೈಶಿಷ್ಟ್ಯವಾಗಿದೆ.ಸುಸಜ್ಜಿತ ಕಟ್ಟಡ, ಅಟಲ್‌ ಟಿಂಕಲ್‌ ಲ್ಯಾಬ್‌ ಸೌಲಭ್ಯವಿದೆ. ವಿಶೇಷವಾಗಿ ಆಟೋಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌ ತರಬೇತಿಗಳಿವೆ. ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವಿದೆ.

ಜನಪ್ರತಿನಿಧಿಗಳು, ಎಸ್‌ಡಿಎಂಸಿಯವರ ಉತ್ತಮ ಸ್ಪಂದನೆಯಿಂದ ವೇಗವಾಗಿ ಬೆಳೆವಣಿಗೆ ಕಂಡುಕೊಂಡಿದೆ. 2008ರಲ್ಲಿ ಪ.ಪೂ. ವಿಭಾಗ ಪ್ರಾರಂಭಗೊಂಡಿದ್ದು, ಸುಮಾರು 250 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.

ಆಕರ್ಷಣೀಯ
ಸುಸಜ್ಜಿತ ಮೂಲಭೂತ ವ್ಯವಸ್ಥೆ, ಗುಣಮಟ್ಟದ ಶಿಕ್ಷಣದಿಂದ ಇತ್ತೀಚಿನ ವರ್ಷಗಳಲ್ಲಿ ಬೋರ್ಡ್‌ ಶಾಲೆ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.
-ಬಿ.ಟಿ. ನಾಯ್ಕ, ಪ್ರೌಢ ಶಾಲಾ ಮುಖ್ಯಸ್ಥರು

Advertisement
Advertisement

Udayavani is now on Telegram. Click here to join our channel and stay updated with the latest news.

Next