Advertisement

ಬ್ರಹ್ಮಾವರ ಜಂಕ್ಷನ್‌: ಬೇಕಿದೆ ಶಾಶ್ವತ ಸರ್ಕಲ್‌​​​​​​​

06:05 AM Jun 09, 2018 | |

ಬ್ರಹ್ಮಾವರ: ಇಲ್ಲಿನ ಹೃದಯ ಭಾಗದ 4 ರಸ್ತೆಗಳನ್ನು ಸಂದಿಸುವ ಸ್ಥಳದಲ್ಲಿ ವೈಜ್ಞಾನಿಕ ಸರ್ಕಲ್‌ ರಚನೆಯ ಅಗತ್ಯವಿದೆ. ಕುಂಜಾಲು ರಸ್ತೆ, ತಾಲೂಕು ಆಫೀಸ್‌ ರಸ್ತೆ, ರಾ.ಹೆ. ಮತ್ತು ಬಸ್‌ಸ್ಟ್ಯಾಂಡ್  ದಾರಿಯ ಕೂಡು ಸ್ಥಳವಾಗಿದೆ.

Advertisement

ಕಳೆದ ವರ್ಷ ರಸ್ತೆ ಕಾಮಗಾರಿ ವೇಳೆ ಸಾರ್ವಜನಿಕರೇ ಈ ಜಂಕ್ಷನ್‌ನಲ್ಲಿ ಒಂದು ಸಿಮೆಂಟ್‌ ರಿಂಗ್‌ ಹಾಕಿದ್ದರು. ವೈಜ್ಞಾನಿಕವಾಗಿ ಇಲ್ಲದಿದ್ದರೂ ತತ್ಕಾಲಿಕ ವ್ಯವಸ್ಥೆಯಾಗಿ ಬಳಕೆಯಾಗುತ್ತಿದೆ.

ಸರ್ಕಲ್‌ ಬೇಕು
ವಾಹನ ಸಂಚಾರ ಹೆಚ್ಚುತ್ತಿರುವ ಈ ಪ್ರದೇಶದಲ್ಲಿ ಶಾಶ್ವತ ಸರ್ಕಲ್‌ ಅತೀ ಅವಶ್ಯ. ನಾಲ್ಕು ದಿಕ್ಕುಗಳಿಂದ ವಾಹನಗಳು ಆಗಮಿಸುವುದರಿಂದ ಸವಾರರು ಗೊಂದಲ ಕ್ಕೊಳಗಾಗಿ ಅಪಘಾತಕ್ಕೀಡಾಗುವ ಭಯವಿದೆ.

ತ್ಯಾಜ್ಯದ ತೊಟ್ಟಿ..!
ಪೇಟೆಯ ಮಧ್ಯಭಾಗದಲ್ಲಿರುವ ತಾತ್ಕಾಲಿಕ ವೃತ್ತ ತ್ಯಾಜ್ಯದ ತೊಟ್ಟಿಯಾಗಿದೆ. ಪರಿಸರದ ಕೆಲವು ಗೂಡಂಗಡಿ, ಕ್ಯಾಂಟೀನ್‌ನವರು ಉಳಿದ ತ್ಯಾಜ್ಯವನ್ನು ಇಲ್ಲಿಯೇ ಎಸೆಯುತ್ತಿದ್ದಾರೆ. ವಾರಂಬಳ್ಳಿ ಗ್ರಾಪಂ ವತಿಯಿಂದ ಜೂ.8ರಂದು ತೊಟ್ಟಿಯನ್ನು ಸ್ವತ್ಛಗೊಳಿಸಲಾಯಿತು.

ಸಂಚಾರಿ ನಿಯಮ ಲೆಕ್ಕಕ್ಕಿಲ್ಲ
ತತ್ಕಾಲಿನ ರಿಂಗ್‌ ಚಿಕ್ಕ ಸರ್ಕಲ್‌ನಂತೆ ಇದ್ದರೂ ಕೆಲವು ಸವಾರರು ಸಂಚಾರೀ ನಿಯಮಗಳನ್ನು ಪಾಲಿಸುತ್ತಿಲ್ಲ. ಇನ್ನು ಹಲವು ಮಂದಿ ಜಂಕ್ಷನ್‌ ಎನ್ನುವ ಗೊಡವೇ ಇಲ್ಲದೆ ವೇಗವಾಗಿ ಸಂಚರಿಸುತ್ತಿದ್ದಾರೆ.

Advertisement

ಸುಂದರ ವೃತ್ತ
ದೇವಸ್ಥಾನ, ಚರ್ಚ್‌, ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳಿರುವ ಈ ಭಾಗದಲ್ಲಿ ಸುಂದರ ವೃತ್ತ ನಿರ್ಮಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಸರ್ಕಲ್‌ ನಿರ್ಮಿಸಿ ಈ ಜಂಕ್ಷನ್‌ನಲ್ಲಿ ವೈಜ್ಞಾನಿಕ ವಾಗಿ ಸರ್ಕಲ್‌ ನಿರ್ಮಿಸ ಬೇಕು.ಇದು ಮುಂದಿನ ದಿನಗಳಲ್ಲಿ ಕುಂಜಾಲು ರಸ್ತೆ ವಿಸ್ತರಣೆಗೆ ಪೂರಕವಾಗಿರಲಿ.
– ಕೆ.ನವನೀತ್‌ ಬ್ರಹ್ಮಾವರ,

ಆದ್ಯತೆ ಮೇಲೆ ನಿರ್ಮಾಣ ಮುಂದಿನ ಅನುದಾನ ಬಿಡುಗಡೆ ಸಂದರ್ಭ ಸ್ಥಳೀಯ ಶಾಸಕರ ಶಿಫಾರಸಿನ ಮೇರೆಗೆ ಆಧ್ಯತೆಯಲ್ಲಿ ಸರ್ಕಲ್‌ ನಿರ್ಮಿಸುತ್ತೇವೆ.
– ಜಗದೀಶ್‌ ಭಟ್‌
ಸಹಾಯಕ ಕಾರ್ಯವಾಹಕ ಎಂಜಿನಿಯರ್‌, ಪಿಡಬ್ಲ್ಯುಡಿ

Advertisement

Udayavani is now on Telegram. Click here to join our channel and stay updated with the latest news.

Next