Advertisement

ಬ್ರಹ್ಮಾವರ : ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

03:30 PM Nov 06, 2021 | Team Udayavani |

ಬ್ರಹ್ಮಾವರ: ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ರೈತ ಹೋರಾಟಗಾರಾರು ಶನಿವಾರ ರಾಷ್ಟ್ರೀಯ ಹೆದ್ದಾರಿ 66 ತಡೆದು ಪ್ರತಿಭಟನೆ ನಡೆಸಿದರು.

Advertisement

10 ನಿಮಿಷಗಳ ಕಾಲ ತಡೆದ ಪ್ರತಿಭಟನಾಕಾರರು ಹೆದ್ದಾರಿಯಲ್ಲೇ ಹಡಿಮಂಚವನ್ನಿಟ್ಟು ಭತ್ತದ ತೆನೆಯನ್ನು ಬೇರ್ಪಡಿಸುವ ಮೂಲಕ ಶಕ್ತಿ ಪ್ರದರ್ಶಿಸಿದರು.ಬಳಿಕ  ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಭತ್ತವನ್ನು ಕಟಾವು ಮಾಡಿ ಮಿಲ್ ಗಳಿಗೆ ಸಾಗಿಸಿರುವುದರಿಂದ ಕೂಡಲೇ ಕ್ವಿಂಟಾಲ್‌ಗೆ ಕನಿಷ್ಠ 2,500 ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಸರಕಾರ ಗ್ರಾಮ ಮಟ್ಟದಲ್ಲಿ ಖರೀದಿ ಕೇಂದ್ರಗಳ ವ್ಯವಸ್ಥೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಆದ್ಯತೆ ಮೇರೆಗೆ ಖರೀದಿಸಬೇಕು ಎಂದು ಪ್ರತಿಭಟನಾನಿರತ ರೈತರು ಇಲ್ಲಿನ ಮಿಲ್ ಮಾಲೀಕರಿಗೆ ಒತ್ತಾಯಿಸಿದರು.

Advertisement

ಸುಮಾರು 400 ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಾಮಾಜಿಕ ಮುಖಂಡರಾದ ಜ್ಞಾನ ವಸಂತ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸತ್ಯನಾರಾಯಣ ಉಡುಪ , ಶಾಂತಾರಾಮ ಶೆಟ್ಟಿ ಬಾರ್ಕೂರು, ಭೋಜ ಪೂಜಾರಿ ಗಿಳಿಯಾರು, ಕೋಟ ರೈತಧ್ವನಿ ಸಂಘಟನೆ ಅಧ್ಯಕ್ಷ ಮಣೂರು ಜಯರಾಮ್ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ, ಡಾ| ಸುನಿತಾ ಶೆಟ್ಟಿ, ರೈತ ಸಂಘದ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ, ಶಿವಮೂರ್ತಿ ಉಪಾಧ್ಯಾಯ ಪಾರಂಪಳ್ಳಿ, ಶಾನ್ಕಟ್ಟು ಉಮೇಶ್ ಶೆಟ್ಟಿ, ಉಮಾನಾಥ ಶೆಟ್ಟಿ, ಮನು ಹಂದಾಡಿ, ಮಂಜಯ್ಯ ಶೆಟ್ಟಿ, ರಘು ಮಧ್ಯಸ್ಥ ಪಾರಂಪಳ್ಳಿ, ಶೇಡಿಕೋಡ್ಲು ವಿಠಲ ಶೆಟ್ಟಿ, ರವೀಂದ್ರ ಐತಾಳ ಪಡುಕರೆ, ಶಿವಾನಂದ ಅಡಿಗ ಮಣೂರು, ಭಾಸ್ಕರ ಶೆಟ್ಟಿ ಮಣೂರು, ರಮೇಶ್ ಪೂಜಾರಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಭರತ್ ಶೆಟ್ಟಿ ಗಿಳಿಯಾರು, ಜಯಕರ್ನಾಟಕ ಸತೀಶ್ ಪೂಜಾರಿ, ಜನನಿ ದಿವಾಕರ ಶೆಟ್ಟಿ, ಪ್ರವೀಣ್ ಯಕ್ಷಿಮಠ, ವಿನಯ ಕುಮಾರ್ ಕಬ್ಯಾಡಿ, ಉಮೇಶ್ ಶೆಟ್ಟಿ ಶಂಕರಣರಾಯಣ, ರವಿ ಕುಲಾಲ್, ಗೌತಮ್ ಹೆಗ್ಡೆ, ಪ್ರಕಾಶ್ ಶೆಟ್ಟಿ ಹೇರಾಡಿ, ದಿನೇಶ್ ಗಾಣಿಗ ಕೋಟ, ಕುಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ಉದಯ್ ಶೆಟ್ಟಿ ಪಡುಕರೆ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಜನಪರ ಹೋರಾಟ ಸಮಿತಿಯ ಸಂಚಾಲಕರಾದ ವಸಂತ್ ಗಿಳಿಯಾರ್ ಸರಕಾರಕ್ಕೆ ಸಲ್ಲಿಸುವ ಮನವಿಯ ಬಗ್ಗೆ ಮಾಹಿತಿ ನೀಡಿದರು. ಅನುಷಾ ನಾಯಕ್ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next