Advertisement

ಬ್ರಹ್ಮಾವರ ಆಕಾಶವಾಣಿ ಜಂಕ್ಷನ್‌: ಗೊಂದಲದ ಗೂಡು

06:50 AM May 19, 2018 | |

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಹ್ಮಾವರ ಜಂಕ್ಷನ್‌ ಗೊಂದಲದ ಗೂಡು. ಬರೋಬ್ಬರಿ 6 ಮಾರ್ಗಗಳನ್ನು ಸಂಪರ್ಕಿಸುವ ಜಾಗ ಇದಾಗಿದ್ದು, ಅಪಘಾತಗಳ ಹಾಟ್‌ಸ್ಪಾಟ್‌ ಆಗಿದೆ.  

Advertisement

ರಾ.ಹೆ. ವಿಸ್ತರಣೆ ಬಳಿಕವಂತೂ ಆಕಾಶವಾಣಿ ತೀರ ಗೊಂದಲದ ಸ್ಥಳವಾಗಿದೆ. ಒಂದೆಡೆ ಬಾರಕೂರು ಕಡೆಯಿಂದ ಆಗಮಿಸಿ  ರಾ.ಹೆ.ಗೆ ಸೇರುವವರು. ಇನ್ನೊಂದೆಡೆ ಮಾರ್ಕೆಟ್‌ ರೋಡ್‌ನಿಂದ ಬರುವವರು. ಮತ್ತೂಂದೆಡೆ ಬ್ರಹ್ಮಾವರ ದಿಂದ ಬಾರಕೂರು ಕಡೆ ತೆರಳುವವರು. ಇದರ ನಡುವೆ ಸರ್ವಿಸ್‌ ರೋಡ್‌ನ‌ಲ್ಲೂ ಸಂಚರಿಸುವರಿಂದಾಗಿ ಗೊಂದಲ ಉಂಟಾಗುತ್ತಿದೆ .

ಸರ್ಕಲ್‌ ಇಲ್ಲ…!
ಇಷ್ಟೊಂದು ಗೊಂದಲವಾದರೂ ಆಕಾಶವಾಣಿ ಜಂಕ್ಷನ್‌ನಲ್ಲಿ ಸರ್ಕಲ್‌ ಇಲ್ಲ. ಪ್ರತಿನಿತ್ಯ, ಪ್ರತಿ ಕ್ಷಣ ಆತಂಕದ ಪರಿಸ್ಥಿತಿ ಇದ್ದರೂ ಸಮರ್ಪಕ ಸಂಚಾರಿ ವ್ಯವಸ್ಥೆ ಕಲ್ಪಿಸ ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸವಾರರ ಪರದಾಟ
ರಾ.ಹೆ. ವಿಸ್ತರಣೆ ಸಂದರ್ಭ ತೀರಾ ಅವೈಜ್ಞಾನಿಕ ಕಾಮಗಾರಿಯಿಂದ ಆಕಾಶವಾಣಿ ಬಳಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ರಸ್ತೆ ಒಂದೇ ಸಮನೆ ಎತ್ತರಿಸಿದ್ದ ರಿಂದ ಬಾರಕೂರು ಕಡೆಯಿಂದ ಬಂದ ವಾಹನ ಸವಾರರು ಪಟ್ಟ ಕಷ್ಟ ಹೇಳ ತೀರದು. ಅನಂತರ ಸ್ವಲ್ಪ ಮಟ್ಟಿಗೆ ರಸ್ತೆತಗ್ಗಿಸಿದ್ದರೂ ಘನವಾಹನ ಸವಾರರು ಈಗಲೂ ಸಮಸ್ಯೆ ಎದುರಿಸುತ್ತಿದ್ದಾರೆ.

ಒಮ್ಮೆಲೇ ಗಾಬರಿ
ಬಾರಕೂರು ಹಾಗೂ ಮಾರ್ಕೆಟ್‌ ಕಡೆಯಿಂದ ಬರುವವರು ವೇಗವಾಗಿ ಆಗಮಿಸುತ್ತಾರೆ. ಆದರೆ ಜಂಕ್ಷನ್‌ ಬಳಿ ಬರುತ್ತಲೇ ಒಮ್ಮೆಲೇ ನಾಲ್ಕಾರು ಕಡೆಗಳಿಂದ ವಾಹನಗಳು ಎದುರಾಗುತ್ತವೆ. ಗಾಬರಿಯಿಂದ ಅಪಘಾತಕ್ಕೆ ನೇರ ಆಹ್ವಾನ ನೀಡುತ್ತದೆ.

Advertisement

ಗೋಪುರದಿಂದ ಸಮಸ್ಯೆ  
ರಾ.ಹೆ.ಗೆ ತಾಗಿಕೊಂಡಿರುವ ಸ್ವಾಗತ ಗೋಪುರದಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ರಸ್ತೆ ಒಮ್ಮೆಲೇ ಎತ್ತರವಾಗಿ ರಚಿಸಲು ಮತ್ತು ಆ ಪರಿಸರದಲ್ಲಿ ಇಕ್ಕಟ್ಟಾದ ವಾತಾವರಣ ನಿರ್ಮಾಣವಾಗಲು ಗೋಪುರ ಕಾರಣವಾಗಿದೆ. 

ಆದ್ದರಿಂದ ಸ್ವಾಗತ ಗೋಪುರವನ್ನು ಸ್ವಲ್ಪ ಹಿಂದಕ್ಕೆ ಸ್ಥಳಾಂತರಿಸುವುದು ಅನಿವಾರ್ಯ 
ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಆಕಾಶವಾಣಿ ಬಳಿ ಸ್ಥಳಾವಕಾಶ ಕೊರತೆಯೂ ಇದ್ದು ಸಮಸ್ಯೆ ಬಿಗಡಾಯಿಸಿದೆ. ಸ್ವಾಗತ ಗೋಪುರ ಪೂರ್ವ ದಿಕ್ಕಿನಲ್ಲಿ ನೆಲ ಸಮತಟ್ಟು ಗೊಳಿಸಿ ಇಲ್ಲಿಂದಲೇ ಬಾರಕೂರು ರಸ್ತೆ ಮತ್ತು ಮಾರ್ಕೆಟ್‌ ರಸ್ತೆಗೆ ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. 

ಅಪಾಯಕಾರಿ ಬಸ್‌ ನಿಲುಗಡೆ
ಪ್ರಸ್ತುತ ಬಾರಕೂರು ಕಡೆಯಿಂದ ಹಾಗೂ ಕುಂದಾಪುರ ಕಡೆಯಿಂದ ಆಗಮಿಸಿದ ಎಲ್ಲಾ ಬಸ್‌ ಆಕಾಶವಾಣಿ ಜಂಕ್ಷನ್‌ನಲ್ಲೇ ನಿಲ್ಲುತ್ತವೆ. ಇದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಲ್ಬಣಿಸುತ್ತಿದೆ. ಆದ್ದರಿಂದ ಬಸ್‌ ನಿಲುಗಡೆಯನ್ನು ಈಗಿರುವ ಸ್ಥಳದಿಂದ ಸರ್ವಿಸ್‌ ರೋಡ್‌ನ‌ಲ್ಲೇ ಸ್ವಲ್ಪ ಮುಂದಕ್ಕೆ ಸ್ಥಳಾಂತರಿಸಬೇಕೆನ್ನುವ ಅಭಿಪ್ರಾಯವಿದೆ. ಬ್ರಹ್ಮಾವರ ಬಸ್‌ಸ್ಟಾ Âಂಡ್‌ ಹಾಗೂ ಮಹೇಶ್‌ ಆಸ್ಪತ್ರೆ ಡಿವೈಡರ್‌ ಅತ್ಯಂತ ಅಪಾಯಕಾರಿ ಸ್ಥಳಗಳಾಗಿವೆ.

ಮನವಿ ಮಾಡಿದ್ದೆವು
ಆಕಾಶವಾಣಿ ಜಂಕ್ಷನ್‌ ಬಳಿ ಸಂಚಾರಿ ಸಮಸ್ಯೆ ಬಗೆಹರಿಸಬೇಕೆಂದು ಇಲಾಖೆಗಳಿಗೆ ಮನವಿ ಮಾಡಿದ್ದೆವು. ಇನ್ನಾದರೂ ಸ್ಥಳಾವಕಾಶ ಕಲ್ಪಿಸಿ ಸರ್ಕಲ್‌ ನಿರ್ಮಿಸಬೇಕು. ಅಗತ್ಯತೆ ಇರುವಲ್ಲಿ ಬ್ಯಾರಿಕೇಡ್‌ ಅಳವಡಿಸಬೇಕು.
– ರಾಜು ಪೂಜಾರಿ , ಗೌರವಾಧ್ಯಕ್ಷರು, ರಿಕ್ಷಾ ಯೂನಿಯನ್‌, ಬ್ರಹ್ಮಾವರ

10 ಅಪಘಾತ
ಕಳೆದ 6 ತಿಂಗಳಲ್ಲಿ ಆಕಾಶವಾಣಿ ಜಂಕ್ಷನ್‌ ನಲ್ಲೇ 10 ಅಪಘಾತ ಪ್ರಕರಣಗಳು ದಾಖ ಲಾಗಿವೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದರೆ, 8 ಪ್ರಕರಣಗಳಲ್ಲಿ ಗಾಯಾಳುಗಳಾಗಿದ್ದಾರೆ.

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next