ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಬ್ರಹ್ಮಾಸ್ತ್ರ’ ಇಂದು ಬಿಡುಗಡೆಯಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರವು ಇಂದು ವಿಶ್ವದಾದ್ಯಂತ 8913 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ.
ಬ್ರಹ್ಮಾಸ್ತ್ರ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ ಶಿವ ದಲ್ಲಿ ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದಾರೆ.
ಬಾಲಿವುಡ್ ನ ಈ ಬಹು ನಿರೀಕ್ಷಿತ ಚಿತ್ರವನ್ನು ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಅವರು ರಿವೀವ್ ನೀಡಿದ್ದು, ಚಿತ್ರದಿಂದ ನಿರಾಶೆಯಾಗಿದೆ ಎಂದಿದ್ದಾರೆ. “ಬ್ರಹ್ಮಾಸ್ತ್ರವು ಕಿಂಗ್ ಸೈಜ್ ನಿರಾಶೆ. ಹೆಚ್ಚು ವಿಎಫ್‌ಎಕ್ಸ್, ಕಂಟೆಂಟ್ ಕಡಿಮೆ. ಬ್ರಹ್ಮಾಸ್ತ್ರವು ಒಂದು ಗೇಮ್ ಚೇಂಜರ್ ಆಗಬಹುದಿತ್ತು, ಆದರೆ ಅವಕಾಶ ತಪ್ಪಿದೆ. ಚಿತ್ರದಲ್ಲಿ ಎಲ್ಲವೂ ಹೊಳೆಯುತ್ತಿದೆ, ಆದರೆ ಆತ್ಮವಿಲ್ಲ” ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಕಣ್ಣುಗಳನ್ನು ಉಳಿಸಬೇಕಾದರೆ ಈ ಚಿತ್ರವನ್ನು ನೋಡಬೇಡಿ. ಲೇಸರ್ ಶೋನಲ್ಲಿ ನಿಮ್ಮ ಕಣ್ಣುಗಳಿಗೆ ಏಟು ಬೀಳಬಹುದು ಎಂದು ಒಬ್ಬರು ಬರೆದು ಕೊಂಡಿದ್ದಾರೆ.
“ಬ್ರಹ್ಮಾಸ್ತ್ರ”ಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ. ವಿಎಫ್ ಎಕ್ಸ್ ಹೆಸರಿನಲ್ಲಿ ಲೇಸರ್ ಶೋ ಫಿಲ್ಮ್. ಅಸ್ತ್ರ ವರ್ಸ್ ಬದಲಿಗೆ ಚಿತ್ರವು ನೇರವಾಗಿ ಬ್ಲ್ಯಾಕ್ ಹೋಲ್ ನಲ್ಲಿ ಬಿದ್ದಿದೆ ಎಂದು ನೆಟ್ಟಿಗರೊಬ್ಬರು ಬರೆದು ಕೊಂಡಿದ್ದಾರೆ.
“ಕೊನೆಗೂ ಸಿನಿಮಾ ನೋಡಿದೆ. ಇಷ್ಟು ಕೆಟ್ಟ ಮಟ್ಟದ ಚಿತ್ರಕಥೆಯನ್ನು ನಿರೀಕ್ಷಿಸಿರಲಿಲ್ಲ. ಕಥೆ ಹೇಳಿಕೊಳ್ಳುವಂತಿಲ್ಲ. ಚಿತ್ರದಲ್ಲಿನ ಅತ್ಯುತ್ತಮ ವಿಷಯವೆಂದರೆ ಶಾರುಕ್ ಅವರ ಅತಿಥಿ ಪಾತ್ರ. ಚಿತ್ರವನ್ನು 20-25 ನಿಮಿಷ ಟ್ರಿಮ್ ಮಾಡಬಹುದಿತ್ತು” ಎಂದು ಸೋಮ್ಮು ಎಂಬರೊಬ್ಬರು ಬರೆದುಕೊಂಡಿದ್ದಾರೆ.
ಬಾಯ್ಕಾಟ್ ನ ಬಗ್ಗೆ ಚಿಂತಿಸಬೇಡಿ. ಭಯಾನಕ, ಹಳತಾದ, ಕಥಾವಸ್ತುವಿಲ್ಲದ ಸಿನಿಮಾವು ಒಂದು ಡಿಸಾಸ್ಟರ್ ಎಂದು ಈಗಾಗಲೇ ಖಚಿತವಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.