ಕುಂಬಳೆ: ಪಾವೂರು ಮುಡಿಪು ಬ್ರಹ್ಮಶ್ರೀ ನಾರಾಯಣ ಗುರು ಯುವವೇದಿಕೆಯ 15ನೇ ವಾರ್ಷಿಕೋತ್ಸವವು ಶ್ರೀ ಮಲರಾಯ ಕ್ಷೇತ್ರದ ವಠಾರದಲ್ಲಿ ಜರಗಿತು.
ರಾಮದಾಸ ಆಚಾರ್ಯ ಕಡಂಬಾರು ಇವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ತದಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಯುವವೇದಿಕೆ ಜಿಲ್ಲಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಇವರು ಮಾತನಾಡಿ, ಶ್ರೀ ನಾರಾಯಣ ಗುರುಗಳ ದಿವ್ಯ ಸಂದೇಶದಡಿಯಲ್ಲಿ ವೇದಿಕೆಯ ಕಾರ್ಯಚಟುವಟಿಕೆಗಳು ಸಾಗುತ್ತಿರುವುದು ಶ್ಲಾಘನೀಯವಾಗಿದೆ. ಎಲ್ಲಿ ಸಂಘಟನೆಯಿಂದ ಒಂದು ಸಂಸ್ಥೆಯ ಬಲಯುತವಾಗಿರುವುದೋ ಅಲ್ಲಿ ಯಾವುದೇ ಮನಕ್ಲೇಶವಾಗಲಿ, ದ್ವೇಷವಾಗಲೀ ಚಿರಸ್ಥಾಯಿಯಾಗಿ ನಿಲ್ಲಲು ಸಾಧ್ಯವಿಲ್ಲವೆಂದರು.
ಸಭೆಯ ಉದ್ಘಾಟನೆಯನ್ನು ಅಂಬಾರು ದೇವಸ್ಥಾನದ ಮೊಕ್ತೇಸರ ದೇರಂಬಳ ಕೃಷ್ಣಪ್ಪಪೂಜಾರಿ ದೀಪಬೆಳಗಿಸಿ ನೆರವೇರಿಸಿ ದರು. ಅತಿಥಿಗಳಾಗಿ ಸ್ಫೂರ್ತಿ ವಿದ್ಯಾನಿಕೇತನ ಮಂಜೇಶ್ವರ ಇವರ ವ್ಯವಸ್ಥಾಪಕ ಮಧುಸೂದನ ಬಳ್ಳಕ್ಕುರಾಯ, ನೋಟರಿ ನ್ಯಾಯವಾದಿ ನವೀನ್ ರಾಜ್ ಹೊಸಂಗಡಿ ಮುಖ್ಯೋಪಾಧ್ಯಾಯ ಬೋಜಮಾಸ್ಟರ್, ನಿವೃತ್ತ ಪಂಚಾಯತ್ ಕಾರ್ಯದರ್ಶಿ ರವೀಂದ್ರ ಜೋಡುಕಲ್ಲು, ನಿವೃತ್ತ ಬ್ಯಾಂಕ್ ಉದ್ಯೋಗಿ ಹರೀಶ್ ಕುಮಾರ್‌ಹೊಸಬೆಟ್ಟು , ವರ್ಕಾಡಿ ಕಾವೀ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ರೈ, ಕಾಸರಗೋಡು ವೆಲ್ಫೇರ್ ಅಸೋಸಿಯೇಷಯನ್ ಅಧ್ಯಕ್ಷ ವಿಶ್ವನಾಥ ರೈ ಶಿಕ್ಷಕಿ ಶಶಿಕಲಾ ದೇವದಾಸ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಕುಶಾಲಾಕ್ಷಿ ಪದ್ಮನಾಭ, ಶೀನ ಶೆಟ್ಟಿ ಕೆದುಂಬಾಡಿ, ಚಂದ್ರಹಾಸ ಪೂಜಾರಿ ಮುಡಿಮಾರು, ಬಿ. ತ್ಯಾಂಪಣ್ಣ ರೈ ಪಾವೂರು ಉಪಸ್ಥಿತರಿದ್ದರು. ಸಮಾರಂಭ ದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸೇಸಪ್ಪ ಪೂಜಾರಿ ದಂಪತಿಯನ್ನು ಸಮ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ರವಿ ಮುಡಿಮಾರು ಸ್ವಾಗತಿಸಿದರು. ಮಾಧವ ಪೂಜಾರಿ ಕುದುಕೋರಿ ವಂದಿಸಿದರು. ಪ್ರಶಾಂತ್ ಕುಮಾರ್ ಕಂದೂರು ನಿರೂಪಿಸಿದರು.