Advertisement

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ-ವಿಜ್ಞಾನಕ್ಕೆ ಮರು ಸೇರ್ಪಡೆ

07:05 PM Jul 11, 2022 | Team Udayavani |

ಬೆಂಗಳೂರು : ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯಕ್ಕೆ ಮರು ಸೇರಿಸಲು ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ವಿ. ಸುನಿಲ್ ಕುಮಾರ್ ಅವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರನ್ನು ಭೇಟಿ ಮಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯಕ್ಕೆ ಸೇರಿಸುವಂತೆ ಮನವಿ ಮಾಡಿದ್ದರು.

ಮನವಿಯನ್ನು ಪುರಸ್ಕರಿಸಿ ಕನ್ನಡ ಭಾಷೆಯ ಬದಲು ಸಮಾಜ-ವಿಜ್ಞಾನದಲ್ಲಿ ತತ್ ಕ್ಷಣ ಮರು ಸೇರ್ಪಡೆ ಮಾಡಲು ಸರಕಾರಿ ಆದೇಶ ನೀಡಲಾಗಿದೆ.

ಬಿಲ್ಲವ ಸಂಘಟನೆಗಳು ಪಠ್ಯ ಕೈಬಿಟ್ಟ ವಿಚಾರದಲ್ಲಿ ಹೋರಾಟಕ್ಕೆ ಇಳಿದಿದ್ದವು ಮತ್ತು ಸುನಿಲ್ ಕುಮಾರ್ ಅವರ ಮೇಲೆ ತೀವ್ರ ಒತ್ತಡವನ್ನು ತಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next