Advertisement

ಬ್ರಹ್ಮ ರಾಕ್ಷಸನಲ್ಲಿ ಬ್ರಹ್ಮನ ನಾಲ್ಕನೇ ಮುಖ!

03:45 PM Apr 27, 2018 | |

ಚಿತ್ರ -ವಿಚಿತ್ರ ಶೀರ್ಷಿಕೆಗಳನ್ನಿಟ್ಟುಕೊಂಡು ಸೆಟ್ಟೇರುತ್ತಿರುವ ಸಿನಿಮಾಗಳಿಗೇನು ಕೊರತೆಯಿಲ್ಲ. ಸಿನಿಮಾದ ಶೀರ್ಷಿಕೆ ವಿಭಿನ್ನವಾಗಿದ್ದರೆ ಬೇಗನೇ ಜನರ ಗಮನ ಸೆಳೆಯಬಹುದು ಎಂಬ ಉದ್ದೇಶ ಚಿತ್ರತಂಡದ್ದಾಗಿರುತ್ತದೆ. ಈಗ ಇದೇ ರೀತಿ ಹೊಸಬರ ತಂಡವೊಂದು ಟೈಟಲ್‌ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಅದು “ಬ್ರಹ್ಮ ರಾಕ್ಷಸ’. 

Advertisement

ಹೌದು, “ಬ್ರಹ್ಮ ರಾಕ್ಷಸ’ ಎಂಬ ಸಿನಿಮಾವೊಂದು ಸೆಟ್ಟೇರಿದೆ. ಇದು ಸಂಪೂರ್ಣ ಹೊಸಬರ ಸಿನಿಮಾ. ಹಲವು ಚಿತ್ರಗಳಲ್ಲಿ ಲೈಟ್‌ ಮ್ಯಾನ್‌, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಶಂಕರ್‌ ವಿ. ಈ ಚಿತ್ರದ ನಿರ್ದೇಶಕರು. ರಾಕೇಶ್‌ ಎನ್ನುವವರು ಈ ಚಿತ್ರದ ನಿರ್ಮಾಣದ ಜೊತೆಗೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ರಕ್ಷಿತಾ ಚಿತ್ರದ ನಾಯಕಿ.

ಪ್ರೇಮ್‌, ಖುಷಿ, ಅರುಣ್‌ ಕುಮಾರ್‌ ಹಾಗೂ ರಾಮಲಿಂಗ ಎಂಬ ಮೂವರು ಪ್ರಮುಖ ಖಳನಾಯಕರಾಗಿ ನಟಿಸುತ್ತಿದ್ದಾರೆ. ಎಲ್ಲಾ ಓಕೆ, “ಬ್ರಹ್ಮ ರಾಕ್ಷಸ’ ಮೂಲಕ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಚಿತ್ರದ ಬಗ್ಗೆ ವಿವರ ನೀಡುವ ನಿರ್ದೇಶಕರು, “ಬ್ರಹ್ಮನ ಮೂರು ಮುಖಗಳನ್ನು ನಾವು ನೋಡಿದ್ದೇವೆ. ಆದರೆ, ನಾಲ್ಕನೇ ಮುಖವನ್ನು ಯಾರೂ ನೋಡಿಲ್ಲ.

ಯಾರೂ ನೋಡದ ಆ ಮುಖವನ್ನು ಈ ಚಿತ್ರದಲ್ಲಿ ತೋರಿಸಲಿದ್ದೇವೆ. ಮನುಷ್ಯನ ಮುಖವಾಡವನ್ನು ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ನಡೆಯಲಿದೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ ಶಂಕರ್‌. ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಕಾಮಿಡಿ ಹಾಗೂ ಫ್ಯಾಮಿಲಿ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆಯಂತೆ.  ಕ್ಲೈಮ್ಯಾಕ್ಸ್‌ನಲ್ಲಿ ರಾಕ್ಷಸ ಯಾರು, ಮನುಷ್ಯ ಯಾರು ಎಂಬುದನ್ನು ತೋರಿಸಲಿದ್ದಾರಂತೆ. 

ನಿರ್ಮಾಣದ ಜೊತೆಗೆ ನಾಯಕರಾಗಿ ನಟಿಸುತ್ತಿರುವ ನಾಯಕರಾಗಿ ನಟಿಸುತ್ತಿರುವ ರಾಕೇಶ್‌ ಅವರಿಗೆ ಚಿತ್ರದ ಕಥೆ ಇಷ್ಟವಾಯಿತಂತೆ. ಅವರು ಕೂಡಾ ಈ ಚಿತ್ರದಲ್ಲಿ ಬ್ರಹ್ಮನ ನಾಲ್ಕನೇ ಮುಖ ನೋಡಬಹುದು ಎಂದರು. ನಾಯಕಿ ರಕ್ಷಿತಾ ಇಲ್ಲಿ ಗೃಹಿಣಿಯಾಗಿ ನಟಿಸುತ್ತಿದ್ದಾರೆ. ಮಂಗಳೂರು ಸಕಲೇಶಪುರ ಹಾಗೂ ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಕಾರ್ತಿಕ್‌.ಜಿ. ಕಿರಣ್‌ ಅವರ ಛಾಯಾಗ್ರಹಣ,  ಎಂ.ಎಸ್‌.ತ್ಯಾಗರಾಜ್‌ ಸಂಗೀತವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next