Advertisement

ಬ್ರಹ್ಮರಕೂಟ್ಲು : ಶುಚಿಗೊಂಡ ಹೈವೇ ನೆಸ್ಟ್‌

01:09 AM Feb 13, 2020 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಬಿ.ಸಿ.ರೋಡ್‌ ಸಮೀಪದ ಬ್ರಹ್ಮರಕೂಟ್ಲು ಟೋಲ್‌ ಪ್ಲಾಜಾ ಬಳಿ ನಿರ್ಮಾಣಗೊಂಡು ಹಲವು ಸಮಯಗಳೇ ಕಳೆದರೂ ಕಾರ್ಯಾಚರಿಸದಿದ್ದ ಹೈವೇ ನೆಸ್ಟ್‌(ಮಿನಿ) ಅನ್ನು ಶುಚಿಗೊಳಿಸುವ ಕಾರ್ಯ ಬುಧವಾರ ನಡೆದಿದೆ.

Advertisement

ಹೆದ್ದಾರಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮಿನಿ ಕಾಂಟೀನ್‌ ರೀತಿಯಲ್ಲಿ ಕಾರ್ಯಾಚರಿಸುವ ಹೈವೇ ನೆಸ್ಟ್‌ (ಮಿನಿ) ಅನುಷ್ಠಾನಗೊಂಡು 2 ವರ್ಷಗಳಾಗುತ್ತಾ ಬಂದರೂ ಕಾರ್ಯಾರಂಭಗೊಂಡಿರಲಿಲ್ಲ. ಈ ಕುರಿತು ಉದಯವಾಣಿ ಪತ್ರಿಕೆಯಲ್ಲಿ ಫೆ. 12ರಂದು “ವರ್ಷ ಎರಡಾದರೂ ತೆರೆಯದ ಹೈವೇ ನೆಸ್ಟ್‌’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶನದಂತೆ ಟೋಲ್‌ಪ್ಲಾಜಾದವರ ಮೂಲಕ ಹೈವೇ ನೆಸ್ಟ್‌ನ
ಬಾಗಿಲುಗಳನ್ನು ತೆರೆದು ಒಳಗೆ ಹಾಗೂ ಹೊರಗೆ ಶುಚಿಗೊಳಿಸುವ ಕಾರ್ಯ ನಡೆದಿದೆ. ಸುತ್ತಲೂ ಬೆಳೆದಿದ್ದ ಪೊದೆಗಳನ್ನೂ ತೆರವುಗೊಳಿಸಲಾಗಿದೆ.

ನೆಸ್ಟ್‌ ಕಾರ್ಯಾಚರಿಸದಿರುವ ಕುರಿತು ಎನ್‌ಎಚ್‌ಎಐಯ ಅಧಿಕಾರಿಗಳ ಬಳಿ ಕೇಳಿದರೆ, ಟೆಂಡರ್‌ ಅಂತಿಮಗೊಂಡ ಬಳಿಕ ಕಾರ್ಯಾರಂಭಗೊಳ್ಳಲಿದೆ ಎಂದಿದ್ದು, ಟೋಲ್‌ ಪ್ಲಾಜಾದ ಮೂಲಗಳ ಪ್ರಕಾರ 15-20 ದಿನಗಳಲ್ಲಿ ಕಾರ್ಯಾರಂಭಿಸಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next