ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾವನ್ನು ವೀಕ್ಷಿಸಬೇಕು. ಉಳಿದೆಡೆ ಟೋಲ್ ಸಂಗ್ರಹಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಗಳಿದ್ದರೆ ಇಲ್ಲಿ ಅವ್ಯವಸ್ಥೆಯಲ್ಲೇ ಟೋಲ್ ಸಂಗ್ರಹ ನಡೆಯುತ್ತಿದೆ.
Advertisement
ಒಂದು ಟ್ರಸ್ ಮಾದರಿಯ ಮೇಲ್ಛಾವಣಿಯನ್ನು ನಿರ್ಮಿಸಿ ಎರಡು ಬೂತ್‌ಗಳನ್ನಿಟ್ಟು ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಸರಕಾರಕ್ಕೆ ದುಡ್ಡು ಮಾಡುವ ಯೋಚನೆ ಇದೆಯೇ ವಿನಾ ಜನರಿಗೆ ಸೇವೆ ನೀಡಬೇಕೆಂಬ ಎಳ್ಳಷ್ಟು ಇಚ್ಛೆಯೂ ಇಲ್ಲ ಎಂಬುದು ಅವ್ಯವಸ್ಥೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಉಳಿದ ಟೋಲ್ ಫ್ಲಾಜಾಗಳ ವ್ಯವಸ್ಥೆ ಗಳನ್ನು ಕಾಣುವಾಗ ಶುಲ್ಕ ಪಾವತಿಸಬೇಕು ಅನ್ನಿಸುತ್ತದೆ. ಆದರೆ ಬ್ರಹ್ಮರಕೂಟ್ಲುನಲ್ಲಿ ಅಂತಹ ಯಾವುದೇ ವ್ಯವಸ್ಥೆಗಳಿಲ್ಲ. ದಶಕಗಳ ಹಿಂದೆ ಅನುಷ್ಠಾನಗೊಳಿಸಿದ ವ್ಯವಸ್ಥೆಗಳನ್ನೇ ಮುಂದುವರಿಸಲಾಗಿದೆ. ಬೂತ್‌ಗಳಿಗೆ ಟರ್ಪಾಲು ಹಾಕಿ ಸಿಬಂದಿ ರಕ್ಷಣೆ ಪಡೆದುಕೊಳ್ಳಬೇಕಾದ ವ್ಯವಸ್ಥೆ ಇದೆ. ಇಲ್ಲಿನ ಮೇಲ್ಛಾವಣಿಯ ಕಬ್ಬಿಣಗಳು ತುಕ್ಕು ಹಿಡಿದು ಯಾವಾಗ ಮೇಲೆ ಬೀಳುತ್ತದೆ ಎಂದು ಹೇಳುವಂತಿಲ್ಲ! ಸರತಿ ನಿಲ್ಲವುದು ತಪ್ಪಲಿಲ್ಲ
ಟೋಲ್‌ಗಳಲ್ಲಿ ಜನರನ್ನು ಕಾಯಿಸಬಾರದು ಎಂದು ಸರಕಾರವು ಹಲವು ವ್ಯವಸ್ಥೆಗಳನ್ನು ಟೋಲ್ ಫ್ಲಾಜಾಗಳಲ್ಲಿ ಅನುಷ್ಠಾನಗೊಳಿಸಿದ್ದು, ಇತ್ತೀಚೆಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿತ್ತು. ಆದರೆ ಬ್ರಹ್ಮರಕೂಟ್ಲು ಟೋಲ್ ಫ್ಲಾಜಾದಲ್ಲಿ ಫಾಸ್ಟ್ಯಾಗ್ ಬರಲಿ, ಇನ್ನೊಂದು ವ್ಯವಸ್ಥೆಯೇ ಬರಲಿ; ವಾಹನಗಳು ಸರತಿಯಲ್ಲಿ ನಿಂತು ಕಾಯುವುದು ಮಾತ್ರ ತಪ್ಪಿಲ್ಲ.
ಟೋಲ್ ಸಂಗ್ರಹಕ್ಕೆ ಎರಡೇ ಬೂತ್‌ಗಳಿದ್ದು, ಹೀಗಾಗಿ ಕಾಯುವುದು ಅನಿವಾರ್ಯವಾಗಿದೆ. ಬೆಳಗ್ಗಿನಿಂದ ಹೊತ್ತು ಬಿ.ಸಿ. ರೋಡು ಭಾಗದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳ ಸರತಿ ಕಂಡುಬಂದರೆ, ಸಂಜೆಯ ಹೊತ್ತು ಮಂಗಳೂರು ಕಡೆಯಿಂದ ಬಿ.ಸಿ. ರೋಡು ಭಾಗಕ್ಕೆ ಬರುವ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
Related Articles
Advertisement
ಶೌಚಾಲಯ ವ್ಯವಸ್ಥೆ ಇಲ್ಲಪ್ರತಿ ಟೋಲ್ ಫ್ಲಾಜಾಗಳಲ್ಲೂ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ಇರುವುದು ನಿಮಯ. ಆದರೆ ಈ ಟೋಲಿಗೆ ಅಂತಹ ಯಾವುದೇ ನಿಯಮ ಅನ್ವಯಿ ಸುವುದಿಲ್ಲ. ಆರಂಭದಲ್ಲಿ ಮಾಡಿದ ಶೌಚಾಲಯ ಅವ್ಯವಸ್ಥೆ ಯಿಂದ ಕೂಡಿದೆ. ಪ್ರತಿವರ್ಷ ಟೋಲ್‌ನಲ್ಲಿ ಕೋಟ್ಯಂತರ ರೂ.ಸಂದಾಯ ವಾಗುತ್ತಿದೆಯೇ ವಿನಾ ಅದರಿಂದ ಕನಿಷ್ಠ ಮೊತ್ತವೂ ನಿರ್ವಹಣೆಗೆ ವಿನಿಯೋಗವಾಗದೇ ಇರುವುದು ವಿಪ ರ್ಯಾಸವೇ ಸರಿ. ಕಾಳಗಕ್ಕೆ ವೇದಿಕೆಯಾಗಿತ್ತು !
ಬ್ರಹ್ಮರಕೂಟ್ಲು ಟೋಲ್ ಫ್ಲಾಜಾವು ಒಂದು ಕಾಲದಲ್ಲಿ ಹಲವು ಕಾಳಗಕ್ಕೆ ವೇದಿಕೆಯಾಗಿತ್ತು. ಅಧಿಕಾರಿಗಳ ಅವ್ಯವಸ್ಥೆಯಿಂದ ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಮಾಯಕ ಸಿಬಂದಿ ಪೆಟ್ಟು ತಿಂದ ಘಟನೆಗಳೂ ನಡೆದಿದ್ದವು. ಈಗಲೂ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಲೇ ಇರುತ್ತದೆ.