Advertisement
ಸುರತ್ಕಲ್ ಎನ್‌ಐಟಿಕೆ ಟೋಲ್ ದರ : ಕಾರು, ಜೀಪು, ವ್ಯಾನ್ ಅಥವಾ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 50 ರೂ. (ಪ್ರಸ್ತುತ ದರ 45 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ ಆಗುವ 70 ರೂ. ದರದಲ್ಲಿ ಬದಲಾವಣೆ ಇಲ್ಲ. 1 ತಿಂಗಳಲ್ಲಿ 50 ಬಾರಿ ಬಂದರೆ ಮಾಸಿಕ ಶುಲ್ಕ 1,600 ರೂ. (1,535 ರೂ.)ಆಗಲಿದೆ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಅಥವಾ ಮಿನಿ ಬಸ್ ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 115 ರೂ. (110)ಗೆ ಏರಲಿದೆ. ಮಾಸಿಕ ಪಾಸ್ 2585 ರೂ. (2,435 ರೂ.) ಹಾಗೂ ಜಿಲ್ಲೆಯ ಒಳಗೆ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 40 ರೂ. ನಿಗದಿ ಮಾಡಲಾಗಿದೆ. ಬಸ್ ಅಥವಾ ಟ್ರಕ್ (2 ಆ್ಯಕ್ಸೆಲ್) ಏಕಮುಖ ಸಂಚಾರಕ್ಕೆ 165 ರೂ, (155), ಅದೇ ದಿನ ವಾಪಸ್ ಬಂದರೆ 245 ರೂ. (235), 50 ಬಾರಿಗೆ ಮಾಸಿಕ ಪಾಸ್‌ಗೆ 5,420 ರೂ. (5105), ಮೂರು-ಆ್ಯಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ 175 ರೂ. (170), ಅದೇ ದಿನ ಮರಳಿ ಬಂದರೆ 265 ರೂ (255), ಮಾಸಿಕ ಪಾಸ್ 5,915 ರೂ. (5,670) ನಿಗದಿ ಮಾಡಲಾಗಿದೆ.
ಕಾರು, ಜೀಪು, ವ್ಯಾನ್ ಅಥವಾ ಲಘು ಮೋಟಾರ್ ವಾಹನಗಳಿಗೆ ಏಕಮುಖ ಸಂಚಾರದಲ್ಲೂ ಏರಿಕೆಯಾಗಿದೆ. 20 ರೂ. ನಿಗದಿಯಾ
ಗಿದ್ದ ಮುಂದೆ 25 ರೂ.ಗೆ ಏರಲಿದೆ. ಮರಳಿ ಬಂದರೆ ಪ್ರಸ್ತುತ ಇರುವ 35 ರೂ. ಅನ್ನೇ ಮುಂದುವರಿಸಲಾಗಿದೆ. 1 ತಿಂಗಳಿಗೆ (50 ಬಾರಿ ಯಂತೆ) ಮಾಸಿಕ ಪಾಸ್ 770 ರೂ. (ಪ್ರಸ್ತುತ ದರ 735) ಮಾಡಲಾಗಿದ್ದು, ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್‌ಗಳ – ಏಕಮುಖ ಸಂಚಾರಕ್ಕೆ ಚಾಲ್ತಿ ಯಲ್ಲಿರುವ 35 ರೂ. ಹಾಗೂ ಆದೇ ದಿನ ಮರಳಿದರೆ 50 ರೂ. ಅನ್ನು ಬದಲಾಯಿಸಲಿಲ್ಲ. ಮಾಸಿಕ ಪಾಸ್ 1240 ರೂ (1190) ನಿಗದಿ ಪಡಿಸಲಾಗಿದೆ.
Related Articles
Advertisement
ವೆಚ್ಚ 363 ಕೋ.ರೂ.; ಸಂಗ್ರಹ 31 ಕೋ.ರೂ..!ಸುರತ್ಕಲ್‌ನಿಂದ ಬಿ.ಸಿ ರೋಡ್ ವರೆಗಿನ ಹೆದ್ದಾರಿಯು ಒಂದೇ ಯೋಜನೆಯಲ್ಲಿ ನಡೆದಿದ್ದು, ಇದಕ್ಕೆ ಒಟ್ಟು ಬಂಡವಾಳ ವೆಚ್ಚ 363 ಕೋ.ರೂ. ಆಗಿದೆ. ಅದರಲ್ಲಿ 31 ಕೋ.ರೂ. (ಕಳೆದ ವರ್ಷ 22 ಕೋ.ರೂ) ಮರಳಿ ಪಡೆಯಲಾಗಿದೆ. ಹೀಗಾಗಿ ಬಂಡವಾಳ ವೆಚ್ಚ ಪೂರ್ಣ ವಸೂಲಾದ ಅನಂತರ ಬಳಕೆ ಶುಲ್ಕ ದರ (ಟೋಲ್)ವನ್ನು ಶೇ. 40ರಷ್ಟು ಕಡಿಮೆ ಮಾಡಲಾಗುತ್ತದೆ. ಪ್ರಸ್ತುತ ಈ ಎರಡೂ ಟೋಲ್‌ಫ್ಲಾಝಾದಿಂದ 20 ಕಿ.ಮೀ. ವಿಸ್ತೀರ್ಣದೊಳಗೆ ವಾಸಿಸುವ ಎಲ್ಲ ವಾಣಿಜ್ಯೇತರ ವಾಹನಗಳಿಗೆ 245 ರೂ. (ಪ್ರಸ್ತುತ 235 ರೂ.) ತಿಂಗಳ ಪಾಸ್ ಲಭ್ಯವಿದೆ. ಟೋಲ್‌ಫ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನ (ರಾಷ್ಟ್ರೀಯ ಪರವಾನಿಗೆ ಅಡಿಯಲ್ಲಿ ಚಲಿಸುವ ವಾಹನಗಳನ್ನು ಹೊರತುಪಡಿಸಿ) ಶೇ. 50 ರಿಯಾಯಿತಿ ದೊರೆಯಲಿದೆ ಎಂದು ಭಾರತೀಯ ರಾ.ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. 2 ಟೋಲ್ ರದ್ದು; 1 ವರ್ಷ ಬೇಕು!
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯ್ ಕುಮಾರ್ ಅವರು ಹೇಳುವ ಪ್ರಕಾರ, ದೇಶದಲ್ಲಿ ಸರಕಾರಿ ಟೋಲ್‌ಗಳನ್ನು ರದ್ದುಗೊಳಿಸಬೇಕು ಎಂಬ ಕೇಂದ್ರ ಸರಕಾರದ ನಿಯಮದಂತೆ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್ ಟೋಲ್ ಕೂಡ ರದ್ದುಗೊಳ್ಳುವ ಸಾಧ್ಯತೆ ಇದೆ. ಆದರೆ ಕೆಲವೇ ತಿಂಗಳಿನಲ್ಲಿ ಇದು ನಡೆಯುವುದು ಕಷ್ಟ. ಈ ಬಗ್ಗೆ ಪೂರಕ ಪ್ರಕ್ರಿಯೆಗಳು ಮೊದಲು ನಡೆಯಬೇಕಿದೆ. ಅದು ಪೂರ್ಣಗೊಳ್ಳಲು ಹೆಚ್ಚಾ-ಕಡಿಮೆ 1 ವರ್ಷ ಆಗಬಹುದು. ಆ ಬಳಿಕ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು. ಅಲ್ಲಿಯವರೆಗೆ ಟೋಲ್ ದರ ಪಡೆಯಲಾಗುತ್ತದೆ. ದಿನೇಶ್ ಇರಾ