Advertisement

ಅದ್ದೂರಿಯಾಗಿ ನೆರವೇರಿದ ಬ್ರಹ್ಮಾನಂದ ಪರಮಹಂಸರ 85ನೇ ಜಾತ್ರಾ ಮಹೋತ್ಸವ

09:36 PM Jan 01, 2023 | Team Udayavani |

ಕುಳಗೇರಿ ಕ್ರಾಸ್: ಮಲಪ್ರಭಾ ತಟದಲ್ಲಿರುವ ಸುಕ್ಷೇತ್ರ ಗೋವನಕೊಪ್ಪ ಬ್ರಹ್ಮಾನಂದ ಪರಮಹಂಸರ 85ನೇ ಜಾತ್ರಾ ಮಹೋತ್ಸವ ಬಾರಿ ವಿಜೃಂಬನೆಯಿಂದ ನೆರವೇರಿತು.

Advertisement

ಹರ-ಗರು ಚರಮೂರ್ತಿಗಳ ಸಾನಿಧ್ಯ ‘ಬ್ರಹ್ಮಾನಂದರ ಜೋಳಿಗೆ ದೇಶಕ್ಕೆಲ್ಲ ಹೋಳಿಗೆ’ ಎಂಬ ಭಕ್ತಿಯ ಹರ್ಷೋದ್ಗಾರ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಹಿಗೆ ಜಾತ್ರೆಯ ವೃಭವ ಕಂಡು ಸಂತಸಪಟ್ಟ ಭಕ್ತರು ಸುಂದರವಾಗಿ ಅಲಂಕಾರವಾಗಿದ್ದ ರಥವನ್ನು ಎಳೆದು ಧನ್ಯತಾಭಾವ ಅರ್ಪಿಸಿದರು.

ನರಸಾಪೂರ ಹಿರೇಮಠದ ಮರುಳ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಸಾನಿದ್ಯದಲ್ಲಿ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಸ್ವಾಮಿಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಹೊಳೆ ಆಲೂರಿನ ಯಚ್ಚರೇಶ್ವರ ಸ್ವಾಮಿಜಿ, ದೇವರ ಸಿಗೇಹಳ್ಳಿ ವೀರೇಶ್ವರ ಸ್ವಾಮಿಜಿ ಸಾನಿದ್ಯ ವಹಿಸಿದ್ದರು.

ಜಾತರೆಗೆ ಬಂದ ಭಕ್ತರು ಮಠದ ಆವರಣದಲ್ಲಿ ರಸಬೂರಿ ಬೋಜನದ ಸವಿರುಚಿ ಸವಿದರು. ರಥೋತ್ಸವದಲ್ಲಿ ಪಾಲ್ಗೊಂಡ ಭಂದುಗಳು, ಸ್ನೇಹಿತರು, ಭಕ್ತರು ಜಾತ್ರೆಗೆ ಮೆರಗು ತಂದರು.

ಜಾತ್ರೆಯ ಅಂಗವಾಗಿ ಬೈರನಹಟ್ಟಿ ಶಾಂತವೀರ ಧಾರ್ಮಿಕ ಪಾಠಶಾಲೆಯ ವಟುಗಳಿಂದ ಬ್ರಹ್ಮಾನಂದರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಧರ್ಮಸಭೆ, ಆಧ್ಯಾತ್ಮಿಕ ಪ್ರವಚನ, ಗರುಡ ಪಟ ಕಟ್ಟುವದು, ಪಲ್ಲಕ್ಕಿ ಉತ್ಸವ, ಹರಕೆ ತಿರಿಸುವದು ಹಿಗೆ ಹತ್ತು ಹಲವು ಕಾರ್ಯಕ್ರಮಗಳು ವಿಧಿ-ವಿಧಾನಗಳಿಂದ ನಡೆದವು.

Advertisement

ಇಳಕಲ್ಲ ಪ್ರವಚನಕಾರ ಆರ್ ಶರಣಬಸವ ಶಾಸ್ತ್ರೀಗಳು, ಕಮಿಟಿ ಅಧ್ಯಕ್ಷ ಕಿಷ್ಟಣ್ಣ ಬಿಜಾಪೂರ, ನಿವೃತ್ತ ಶಿಕ್ಷಕ ಆರ್ ಎಚ್ ಯಾವಗಲ್, ನಿಂಗನಗೌಡ ಪಾಟೀಲ್, ಹನಮಂತಗೌಡ ಪಾಟೀಲ, ಶಿವಬಸಪ್ಪ ಹೆರಕಲ್, ಮುರಳಿಧರ ಯಡನ್ನವರ, ದಾವಲ್‌ಸಾಬ ಹೊಸಮನಿ, ಲಕ್ಷ್ಮಣ ದೊಡಮನಿ, ಆನಂದಪ್ಪ ಗಿಡ್ನಂದಿ, ಆರ್ ಕೆ ಪಾಟೀಲ, ಸಂಗೀತಗಾರರಾದ ಬಾದಾಮಿ ಮಂಜುನಾಥ ಗವಾಯಿಗಳು, ಶಹಾಪೂರ ಸಿದ್ದಯ್ಯಸ್ವಾಮಿ ಸೇರಿದಂತೆ ಗ್ರಾಮಸ್ಥರು ಇದ್ದರು. ಶಿಕ್ಷಕ ರಾಘವೇಂದ್ರ ಕಂದಗಲ್ ಸ್ವಾಗತಿಸಿ ನೀರೂಪಿಸಿದರು, ಶಿಕ್ಷಕ ಶರಣು ಕರಕಿಕಟ್ಟಿ ವಂದಿಸಿದರು.

ಇದನ್ನೂ ಓದಿ: ಅರಭಾವಿ ಆಂಜನೇಯ, ಕಲ್ಲೊಳ್ಳಿ ಮಾರುತೇಶ್ವರ ದೇವಸ್ಥಾನಕ್ಕೆ ಕೆಎಂಎಫ್ ಅಧ್ಯಕ್ಷರ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next