Advertisement
ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿಪ್ರರು, ಬ್ರಾಹ್ಮಣರ ಕುರಿತು ಅನಗತ್ಯವಾಗಿ ಬ್ರಾಹ್ಮಣ ಸಮಾಜವನ್ನು ದೂರುಲಾಗುತ್ತಿದೆ. ಹೀಗಾಗಿ ಕೂಡಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮುದಾಯದ ಕ್ಷೇಮೆ ಕೋರುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Related Articles
Advertisement
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಅತಿಹೆಚ್ಚು ಬಲಿದಾನ ಗೈದವರು ಬ್ರಾಹ್ಮಣರು. ಸಾಮಾಜಿಕ ಚಳುವಳಿ ಚಳುವಳಿ, ಭಾಷೆ, ಧಾರ್ಮಿಕ ಸಂಗತಿಗಳಂಥ ವಿಷಯದಲ್ಲಿ ಬ್ರಾಹ್ಮಣ ಸಮುದಾಯದವರು ಮುಂಚೂಣಿಯಲ್ಲಿ ನಿಂತಿರುತ್ತಾರೆ. ಗಾಂಧಿಜೀ ಅವರನ್ನು ಕೊಂದಿರುವ ಗೋಡ್ಸೆ ಜಾತಿ ಮುಂದಿಟ್ಟುಕೊಂಡು ಇಡೀ ಬ್ರಾಹ್ಮಣ ಸಮಾಜವವನ್ನು ಅಪಮಾನಿಸಿದ ಕುರಿತು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಮುಕುಂದು ಕುಲಕರ್ಣಿ, ಉಪಾಧ್ಯಕ್ಷ ಭೀಮಸೇನ ನಾಯಕ, ಪ್ರಶಾಂತ ದೇಶಪಾಂಡೆ, ಸಮೀರ ಕುಲಕರ್ಣಿ, ಡಾ.ಆನಂದ ಕುಲಕರ್ಣಿ, ಶಂಕರ ಕುಲಕರ್ಣಿ, ಬಿ.ಜೆ ಪುರಾಣಿಕ, ಸಚಿನ ಫಡ್ನಿಸ್, ಪುರುಷೋತ್ತಮ ಕುಲಕರ್ಣಿ, ಡಾ.ರವಿ ಜಹಗೀರದಾರ, ರಾಘವೇಂದ್ರ ಕುಲಕರ್ಣಿ, ಕೃಷ್ಣ ಗುನ್ಹಾಳಕರ, ಮೀತಾ ದೇಸಾಯಿ, ಲಕ್ಷ್ಮೀ ಕುಲಕರ್ಣಿ, ಮೀನಾಕ್ಷಿ ಸಾವಳಗಿ, ಶ್ರೀರಕ್ಷಾ ಸೊನ್ನ, ಚೇತನ ದೇಶಪಾಂಡೆ, ರವಿ ಕುಲಕರ್ಣಿ, ದೀಪಕ ಕುಲಕರ್ಣಿ, ಶ್ರೀರಂಗ ಪುರಾಣಿಕ, ಸುಧೀಂದ್ರ ಇಳ್ಳಾಲ, ಗುರುರಾಜ ಇಳ್ಳಾಲ. ಶರದ್ ಅರ್ಜುಣಗಿ, ಸಂದೀಪ ಅರ್ಜುಣಗಿ, ಅರವಿಂದ ಜೋಶಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ