Advertisement

ಬ್ರಹ್ಮಕಲಶ‌, ಅತಿರುದ್ರ ಮಹಾಯಾಗ: ಶಿವೋಪಾಸನ ನೃತ್ಯ ವೈವಿಧ್ಯ

11:55 PM Feb 27, 2020 | Sriram |

ವಿದ್ಯಾನಗರ: ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಅತಿರುದ್ರ ಮಹಾ ಯಾಗದ ಪ್ರಯುಕ್ತ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್‌ ನಾಟ್ಯನಿಲಯಂ ಮಂಜೇಶ್ವರ ಅವರ ಶಿಷ್ಯ ವೃಂದದಿಂದ ಶಾಸ್ತ್ರೀಯ, ಜಾನಪದ ನೃತ್ಯ , ಮೋಹಿನಿಯಾಟಂ, ಕೂಚುಪುಡಿಗಳನ್ನೊಳಗೊಂಡ ಶಿವೋಪಾಸನ ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತು.

Advertisement

ಶ್ರೀಶೈಲೇಶ್ವರ ಮಂಟಪದಲ್ಲಿ ಆಶ್ಲೇಷಾ ಬಲಿ, ಬಿಂಬಶುದ್ಧಿ ಕಲಶಾಭಿಷೇಕ, ಪ್ರಾಯಶ್ಚಿತ್ತ ಹೋಮಗಳು, ಪ್ರೋಕ್ತ ಹೋಮಗಳು, ಅಂಕುರಪೂಜೆ, ರುದ್ರ ಜಪ ಘನಪಾರಾಯಣ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಇಂದಿನ ಕಾರ್ಯಕ್ರಮಗಳು
ಶ್ರೀಶೈಲೇಶ್ವರ ಮಂಟಪದಲ್ಲಿ ಬೆಳಗ್ಗೆ 6ರಿಂದ ಗಣಪತಿ ಹೋಮ, 8 ಗಂಟೆಗೆ ಚಂಡಿಕಾ ಹವನ, ಅಂಕುರ ಪೂಜೆ, ಶ್ರೀ ಗಣಪತಿ ಹಾಗೂ ಶಾಸ್ತಾ ದೇವರ ಪುನಃಪ್ರತಿಷ್ಠೆ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕ ಜರಗಲಿವೆ. ಶ್ರೀ ಶಿವಶೈಲಂ ಯಾಗಶಾಲೆಯಲ್ಲಿ ರುದ್ರ ಪಾರಾಯಣ, ಶ್ರೀ ರುದ್ರಕಲಶ ಪೂಜೆ, ಶ್ರೀ ರುದ್ರ ಹೋಮ, ಶ್ರೀ ರುದ್ರ ಜಪ, ರುದ್ರಜಪ ಘನಪಾರಾಯಣ ನಡೆಯಲಿದೆ.

ಶ್ರೀ ಮಹಾದೇವ ಮಂಟಪದಲ್ಲಿ ಬೆಳಗ್ಗೆ 9ರಿಂದ ಮಲ್ಲಿಕ ಶಂಕರ ಮತ್ತು ಬಳಗದಿಂದ ಭಕ್ತಗಾನ ಸುಧಾ, ಎಂ. ಪ್ರಸನ್ನ ವೆಂಕಟೇಶ ಕೆದಿಲಾಯ ಇರುವೈಲ್‌ ಮತ್ತು ಬಳಗದವರಿಂದ ಭಕ್ತಗಾನ ಸುಧಾ, ಭಗವತೀ ಮಹಿಳಾ ವೇದಿಕೆ ಕುಕ್ಕಾಡಿ ಬಳಗ ಪ್ರಸ್ತುತ ಪಡಿಸುವ ಮಹಿಳಾ ಯಕ್ಷಗಾನ ಬಯಲಾಟ-ಶ್ರೀಕೃಷ್ಣ ಕಾರುಣ್ಯ ಹಾಗೂ ಅಪರಾಹ್ನ 2.30ರಿಂದ ಶ್ರೀ ಚಿದಾನಂದ ಪುರಿ ಸ್ವಾಮೀಜಿ ಅದ್ವೆ„ತಾಶ್ರಮ, ಕೊಳತ್ತೂರು ಇವರಿಂದ ಸತ್ಸಂಗ ಮತ್ತು ಸಂಜೆ 4ಕ್ಕೆ ಮಾತƒಸಂಗಮ ಜರಗಲಿದೆ.

ಮಾತƒಸಂಗಮದ ಅಧ್ಯಕ್ಷತೆಯನ್ನು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ.

Advertisement

ಹಿಂದೂ ಐಕ್ಯವೇದಿ ಕೇರಳ ಅಧ್ಯಕ್ಷೆ ಶಶಿಕಲಾ ಟೀಚರ್‌, ಆರ್ಶ ವಿದ್ಯಾ ಸಮಾಜ ಕೇರಳ ಪ್ರಾಂತ್ಯ ಸಂಚಾಲಕಿ ಶ್ರುತಿ ಹಾಗೂ ಸನಾತನ ಸಂಸ್ಥೆಯ ಸಾಧಕಿ ಲಕ್ಷ್ಮೀ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಜೆ 6ರಿಂದ ಸಂಗೀತ ವಿದ್ಯಾನಿಧಿ ಡಾ| ವಿದ್ಯಾಭೂಷಣ ಬೆಂಗಳೂರು ಇವರಿಂದ ಶ್ರೀಶೈಲ ಫ್ರೆಂಡ್ಸ್‌ ಗಂಗೆ ಪ್ರಾಯೋಜಕತ್ವದಲ್ಲಿ ಭಕ್ತಿ ಸಂಗೀತ ಸೌರಭ ಮತ್ತು 8 ಗಂಟೆಯಿಂದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರ‌ಬೇತಿ ಕೇಂದ್ರ ಕೂಡ್ಲು ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next