Advertisement

Brahma Rakshasa: ಹಾಡಲ್ಲಿ ಆರ್ಭಟಿಸಿದ ಬ್ರಹ್ಮರಾಕ್ಷಸ – ತೆರೆಗೆ ಸಿದ್ದ

11:10 AM Aug 28, 2024 | Team Udayavani |

“ಬ್ರಹ್ಮರಾಕ್ಷಸ’ ಹೀಗೊಂದು ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಂಕರ್‌.ವಿ ನಿರ್ದೇಶನದ ಈ ಸಿನಿಮಾವನ್ನು ಕೆ.ಎಂ.ಪಿ. ಶ್ರೀನಿವಾಸ್‌ ನಿರ್ಮಿಸಿದ್ದಾರೆ.

Advertisement

1980-90ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಅಂಕುಶ್‌ ಏಕಲವ್ಯ ಹಾಗೂ ಪಲ್ಲವಿಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ, ವಿಶೇಷ ಪಾತ್ರದಲ್ಲಿ ವೈಜನಾಥ್‌ ಬಿರಾದಾರ್‌ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ 5 ಭಾಷೆಯಲ್ಲಿ ಈ ಚಿತ್ರ ತಯಾರಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಎಂ.ಎಸ್‌. ತ್ಯಾಗರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಆ ಪೈಕಿ ಒಂದು ಹಾಡು ಇದೀಗ ರಿಲೀಸ್‌ ಆಗಿದೆ.

ನಿರ್ಮಾಪಕ ಕೆಎಂಪಿ ಶ್ರೀನಿವಾಸ್‌ ಮಾತನಾಡಿ, ನನ್ನ ಮೊದಲ ಚಿತ್ರ ಕಲಿವೀರ. ಬ್ರಹ್ಮರಾಕ್ಷಸ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಬಂದಿದೆ. ಯಾವುದೇ ತಪ್ಪುಗಳಿಲ್ಲದಂತೆ ಸಿನಿಮಾ ಮಾಡಿದ್ದಾರೆ. ಹೀರೋ ಸ್ಟಂಟ್‌ ಗಳನ್ನು ರಿಯಲ್ಲಾಗಿ ಮಾಡಿದ್ದರಿಂದ ಸಾಕಷ್ಟು ಪೆಟ್ಟು ತಿಂದಿದ್ದಾರೆ. ಈ ಸಿನಿಮಾ ನಮಗೆ ತೃಪ್ತಿ ಕೊಟ್ಟಿದೆ. ಬ್ರಹ್ಮ ಸೃಷ್ಟಿ ಮಾಡಿದ ಮನುಷ್ಯ ಹೇಗೆ ರಾಕ್ಷಸ ಆಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.

ನಿರ್ದೇಶಕ ಶಂಕರ್‌ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಲಾಕ್‌ಡೌನ್‌ ಸಂದರ್ಭದಲ್ಲಿ ಈ ಕಥೆ ಹೊಳೆಯಿತು. ಉಡುಪಿ, ಕುಂದಾಪುರ ಹಾಗೂ ಸೆಟ್‌ ಗಳಲ್ಲಿ ಹೆಚ್ಚಿನ ಭಾಗದ ಶೂಟಿಂಗ್‌ ಮಾಡಿದ್ದೇವೆ. ಚಿತ್ರಕ್ಕೆ ಶೇ 80 ಮಳೆ ಹಾಗೂ ರಾತ್ರಿ ವೇಳೆಯಲ್ಲೇ ಶೂಟಿಂಗ್‌ ಮಾಡಿದ್ದೇವೆ. ಒಂದು ಸೋಶಿಯಲ್‌ ಮೆಸೇಜ್‌ ಚಿತ್ರದಲ್ಲಿದ್ದು, ತಪ್ಪು ಮಾಡದೆ ಇಬ್ಬರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ. ಅದೇ ಸೇಡಿನಿಂದ ಹೇಗೆ ದ್ವೇಷ ತೀರಿಸಿಕೊಳ್ಳಲು ಹೊರಡುತ್ತಾರೆ ಎನ್ನುವುದೇ ಈ ಚಿತ್ರ. ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next