Advertisement

ಮಲ್ಲಿಕಾರ್ಜುನನ  ಸನ್ನಿಧಿಯಲ್ಲಿ ಧ‌ನ್ಯರಾದ ಭಕ್ತ ಜನಸಾಗರ

04:12 AM Mar 17, 2019 | Team Udayavani |

ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಹಾಗು ಸದ್ಯೋಜಾತ, ವಾಮದೇವ, ಅಘೋರ, ತತು³ರುಷ ಮತ್ತು ಈಶಾನ ಎಂಬ ಪಂಚಮುಖಗಳಿಂದ ಶೋಭಿಸುವ ಸಾಕ್ಷಾತ್‌ ಪರಮಶಿವನಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಮಾ.19 ರಿಂದ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ.

Advertisement

ದೇಗುಲದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಕವಾಟೋದ್ಘಾಟನೆ, ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ತೈಲಾಭ್ಯಂಜನ, ಉಷ:ಫೂಜೆ, ಧ್ವಜ ಪ್ರತಿಷ್ಠೆ, ಹೋಮ ಕಲಶಾಭಿಷೇಕಗಳು, ಶತರುದ್ರ ಪಾರಾಯಣ, ಪರಿಕಲಶಾಭಿಷೇಕ, ಮಧ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಜರಗಿತು. ರಾತ್ರಿ ಪೂಜೆ, ಶ್ರೀ ಭೂತಬಲಿ, ನೃತ್ಯ ಬಲಿ, ರಾಜಾಂಗಾಣ ಪ್ರಸಾದ ನಡೆಯಿತು.

ಕಾರ್ಯಕ್ರಮದಂಗವಾಗಿ ಪೇಟೆ ಶ್ರೀ ವೆಂಕಟ್ರಮಣ ಮಹಿಳಾ ಭಜನಾ ಮಂಡಳಿಯಿಂದ ಕುಣಿತ ಭಜನೆ, ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕೂಡ್ಲು ಮತ್ತು ಬಳಗದಿಂದ ಭಕ್ತಿಗಾನ ಸುಧಾ, ನಡೆಯಿತು.

ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸನ್ನಿಧಿಯು ಜನಸಾಗರದಿಂದ ತುಂಬಿ ತುಳುಕಿತ್ತು. ಎತ್ತ ನೋಡಿದರೂ ಭಕ್ತರ ದಂಡೇ ಕಂಡು ಬರುತ್ತಿತ್ತು. ಭಕ್ತರು ದೇವರ ದರ್ಶನ ಸಹಿತ ಬ್ರಹ್ಮಕಲಶಾಭಿಷೇಕವನ್ನು ಕಣ್ತುಂಬಿಕೊಂಡರು, ಭಕ್ತರ ಹಸಿವನ್ನು ನೀಗಿಸುವ ದೃಷ್ಟಿಯಿಂದ ಪ್ರಸಾದ ರೂಪವಾಗಿ ಬೆಳಗ್ಗೆ ಸಂಜೆ ಉಪಾಹಾರ, ಮಧ್ಯಾಹ್ನ-ರಾತ್ರಿ ಅನ್ನಪ್ರಸಾದ ನೀಡಲಾಯಿತು.ಸಮಾರೋಪದಂದು ಸಂಜೆ ಸಮಾರೋಪ ಸಮಾರಂಭ, ರಾತ್ರಿ ಕೊಲ್ಲಂ ತಪಸ್ಯದಿಂದ “ಶ್ರೀ ಭೂತನಾಥಂ’ ಎನ್ನುವ ಮಲಯಾಳ ನಾಟಕ ಪ್ರದರ್ಶನಗೊಂಡಿತು. ಮಾ.17 ರಂದು ಬೆಳಗ್ಗೆ ರುದ್ರ ಹೋಮ ಸಂಕಲ್ಪ, ರುದ್ರ ಹೋಮ ಪೂರ್ಣಾಹುತಿ, ಮಧ್ಯಾಹ್ನ ‌ ಅನ್ನಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next