ತೆಕ್ಕಟ್ಟೆ: ಇತಿಹಾಸ ಪ್ರಸಿದ್ಧ ತೆಕ್ಕಟ್ಟೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ( ಶ್ರೀ ಮಹಾಲಿಂಗೇಶ್ವರ ದೇವಸ್ಥಾನ) ಬ್ರಹ್ಮಕುಂಭಾಭಿಷೇಕ ಹಾಗೂ ಶಯ್ಯೋತ್ಸವ ರಂಗಪೂಜೆಯು ಮಾ.11 ರಂದು ವೇ| ಮೂ| ವಿದ್ವಾನ್ ಹೆರ್ಗ ವೇದವ್ಯಾಸ ಭಟ್ಟರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಈ ಶುಭ ಸಂದರ್ಭದಲ್ಲಿ ದೇಗುಲವನ್ನು ಸಂಪೂರ್ಣ ಹೂವಿನಿಂದ ಅಲಂಕೃತಗೊಳಿಸಲಾಗಿತ್ತು.
ದೇವಳದ ಆಡಳಿತ ಮೊಕ್ತೇಸರ ಟಿ.ರಾಘವೇಂದ್ರ ಹತ್ವಾರ್, ಸೇವಾ ಸಮಿತಿಯ ಅಧ್ಯಕ್ಷ ರಾಮಮೂರ್ತಿ ಪುರಾಣಿಕ್, ದೇವಳದ ಪ್ರಧಾನ ಅರ್ಚಕ ಜನಾರ್ಧನ ಐತಾಳ್ ಹಾಗೂ ಭಕ್ತ ಮೂಹ ಸನ್ನಿಧಿಯಲ್ಲಿ ನೆರದಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಾನಿ ಮ್ಯೂಸಿಕಲ್‌ನ ಕೆ.ನವೀಚಂದ್ರ ಕೊಪ್ಪ ಅವರ ಸಾರಥ್ಯದಲ್ಲಿ ಅದ್ಧೂರಿ ಸಂಗೀತ ರಸಮಂಜರಿ ಕಾರ್ಯಕ್ರಮ ಗಾನ ಲಹರಿ ಹಾಗೂ ಫಿಲ್ಮಿಡ್ಯಾನ್ಸ್ ಸಂಗೀತ ಪ್ರದರ್ಶನಗೊಂಡಿತು.
ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ