Advertisement

ಅರ್ಧ ಸ್ವತ್ತನ್ನು ದಾನ ಮಾಡಲಿರುವ ಬಿ.ಆರ್‌.ಶೆಟ್ಟಿ

09:25 AM Jun 02, 2018 | Harsha Rao |

ನ್ಯೂಯಾರ್ಕ್‌: ಇತ್ತೀಚೆಗಷ್ಟೇ ಬಿಲ್‌ ಗೇಟ್ಸ್‌ ಮತ್ತು ವಾರೆನ್‌ ಬಫೆಟ್‌ರಂತಹ ಶತಕೋ ಟ್ಯಧಿಪತಿಗಳು ತಮ್ಮ ಸಂಪತ್ತನ್ನು ದತ್ತಿ ಕಾರ್ಯಕ್ಕಾಗಿ ಬಳಸುವುದನ್ನು ಆರಂಭಿಸಿದ ಬಳಿಕ ಈಗ ದಕ್ಷಿಣ ಕನ್ನಡ ಮೂಲದ ಉದ್ಯಮಿ ಬಿ.ಆರ್‌. ಶೆಟ್ಟಿ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ತನ್ನ ಒಟ್ಟು ಸ್ವತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ಮೊತ್ತವನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿಟ್ಟಿದ್ದಾರೆ. ಎನ್‌ಎಂಸಿ ಹೆಲ್ತ್‌ ಹಾಗೂ ಫಿನಾಬಿಎಲ್‌ಆರ್‌ ಎಂಬ ಕಂಪೆನಿಗಳನ್ನು ಶೆಟ್ಟಿ ಹೊಂದಿದ್ದಾರೆ. ಎನ್‌ಎಂಸಿ ಹೆಲ್ತ್‌ ಅಡಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿದ್ದು, 13ಕ್ಕೂ ಹೆಚ್ಚು ದೇಶಗಳಲ್ಲಿ ಆಸ್ಪತ್ರೆಗಳಿವೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೇಂದ್ರವಾಗಿರಿಸಿಕೊಂಡು ಭಾರತ, ಈಜಿಪ್ಟ್ ಹಾಗೂ ನೇಪಾಲದಲ್ಲೂ ಇವರ ವಿವಿಧ ಉದ್ಯಮವಿದೆ. ಅಷ್ಟೇ ಅಲ್ಲದೆ ಹಲವು ಶಿಕ್ಷಣ ಸಂಸ್ಥೆಗಳಿಗೂ ಅವರು ಹಣಕಾಸು ನೆರವು ನೀಡಿದ್ದಾರೆ.

Advertisement

ತಮ್ಮ ಎಷ್ಟು ಸಂಪತ್ತನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿರಿಸಿದ್ದಾರೆ ಎಂಬುದನ್ನು ಶೆಟ್ಟಿ ಬಹಿರಂಗಗೊಳಿಸಿಲ್ಲ. ಆದರೆ ಇತ್ತೀಚೆಗೆ ಫೋಬ್ಸ್ì ನಿಯತಕಾಲಿಕೆ ಪಟ್ಟಿ ಮಾಡಿದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಶೆಟ್ಟಿ ಆಸ್ತಿಯನ್ನು 27 ಸಾವಿರ ಕೋಟಿ ರೂ. ಎಂದು ಉಲ್ಲೇಖೀಸಿತ್ತು. ಹೀಗಾಗಿ 13,500 ಕೋಟಿ ರೂಪಾಯಿಯನ್ನು ದಾನಕ್ಕಾಗಿ ಮೀಸಲಿರಿಸುವ ಸಾಧ್ಯತೆ ಇದೆ. ಗಿವಿಂಗ್‌ ಪ್ಲೆಡ್ಜ್ ಎಂಬ ಅಭಿಯಾನವನ್ನು ಆರಂಭಿಸಲಾಗಿದ್ದು, ಇತ್ತೀಚೆಗೆ 14 ಉದ್ಯಮಿಗಳು ಈ ಪಟ್ಟಿಗೆ ಸೇರಿದ್ದಾರೆ. ತಮ್ಮ ಅರ್ಧಕ್ಕಿಂತಲೂ ಹೆಚ್ಚಿನ ಸ್ವತ್ತನ್ನು ದಾನ ದತ್ತಿಗಳಿಗಾಗಿ ಮೀಸಲಿಡಬೇಕು ಎಂಬುದೇ ಗಿವಿಂಗ್‌ ಪ್ಲೆಡ್ಜ್ನ ಧ್ಯೇಯವಾಗಿದೆ. ಭಾರತೀಯ ಮೂಲದ ಶಮ್‌ಶೀರ್‌ ಶಬೀನಾ ವಯಲಿಲ್‌ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಯುಎಇ ಮೂಲದ ವಿಪಿಎಸ್‌ ಹೆಲ್ತ್‌ಕೇರ್‌ನ ಸಂಸ್ಥಾಪಕರಾಗಿದ್ದು, ಅಮಾನತ್‌ ಹೋಲ್ಡಿಂಗ್ಸ್‌ ಎಂಬ ಶಿಕ್ಷಣ ಹಾಗೂ ಆರೋಗ್ಯ ಸೇವೆ ಹೂಡಿಕೆ ಕಂಪೆನಿಯ ಉಪಾಧ್ಯಕ್ಷರೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next