Advertisement

ಸರಕಾರಿ ಉದ್ಯೋಗಿಗಳು ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಿ, ತಪ್ಪಿದಲ್ಲಿ ಕ್ರಮ

04:28 PM Jun 12, 2020 | sudhir |

ಬೆಂಗಳೂರು : ಬಿಪಿಎಲ್ ಕಾರ್ಡ್ ಪಡೆದು ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯುವ ಸರಕಾರಿ ನೌಕರರು ಕೂಡಲೇ ತಮ್ಮ ಬಿಪಿಎಲ್ ಕಾರ್ಡನ್ನು ಹಿಂತಿರುಗಿಸಿ ಇಲ್ಲದಿದ್ದಲ್ಲಿ ತಮ್ಮ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದಾರೆ.

Advertisement

ಈಗಾಗಲೇ ಕೆಲವು ಸರಕಾರಿ ಅಧಿಕಾರಿಗಳು, ನಿಗಮ ಮಂಡಳಿಯ ಅಧಿಕಾರಿಗಳು ಮತ್ತು ನೌಕರರು ಹಾಗೂ ಅವರನ್ನು ಅವಲಂಬಿಸದ ಕುಟುಂಬ ವರ್ಗದವರು ಸರಕಾರ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು ಸರಕಾರ ವಿತರಿಸುವ ಪಡಿತರ ಮತ್ತು ಇನ್ನಿತರ ಸರಕಾರಿ ಸೇವೆಗಳನ್ನು ಪಡೆಯುತ್ತಿರುವ ಕುರಿತು ಗಮನಕ್ಕೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು ಇದನ್ನು ಒಬ್ಬ ಸರಕಾರಿ ನೌಕರನಾಗಿ ಉಪಯೋಗಿಸುವುದು ಅಕ್ಷಮ್ಯ ಅಪರಾಧ ಅದೂ ಅಲ್ಲದೆ ಒಬ್ಬ ಸರಕಾರಿ ಅಧಿಕಾರಿ ಅಥವಾ ನೌಕರ ಸರಕಾರದ ವೇತನ ಭತ್ಯೆಯನ್ನು ಪಡೆಯುವುದರಿಂದ ಯಾವ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಆದುದರಿಂದ ಸರಕಾರಿ ಅಧಿಕಾರಿಗಳು ಅಥವಾ ನೌಕರರು ಯಾರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಿರೋ ಈ ಆದೇಶದ ಒಂದು ತಿಂಗಳ ಒಳಗಾಗಿ ತಮ್ಮಲಿರುವ ಬಿಪಿಎಲ್ ಕಾರ್ಡುಗಳನ್ನು ಆಹಾರ ನಾಗರಿಕ ಸರಬರಾಜು ಅಥವಾ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಹಿಂತಿರುಗಿಸಬೇಕು ಎಂದು ಆದೇಶಿಸಿದೆ, ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next