Advertisement
2017ರಿಂದ ಸಲ್ಲಿಕೆಯಾದ ಅರ್ಜಿ ಗಳಲ್ಲಿ 1,55,927 ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ಅನು ಮೋದಿಸುವಂತೆ ಈಗಾಗಲೇ ಸರಕಾರ ಆದೇಶಿಸಿದೆ. ಈ ಪೈಕಿ 68 ಸಾವಿರ ಬಿಪಿಎಲ್ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದ್ದು, ಉಳಿದ 1,53,319 ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸಿ ತೀರ್ಮಾನಿಸುವಂತೆ ಸೂಚಿಸಲಾಗಿದೆ.
ಸ್ಥಳ ಪರಿಶೀಲನೆ ನಡೆಸಿ 2017ರಿಂದ 2023ರ ಜನವರಿ ತನಕ 40,58,238 ಅರ್ಜಿ ಸ್ವೀಕರಿಸ ಲಾಗಿದೆ. ಇವು ಗಳಲ್ಲಿ 27,47,118 ಅರ್ಜಿಗಳನ್ನು ಅನು ಮೋದಿಸ ಲಾಗಿದೆ. 10,02,174 ಅರ್ಜಿ ತಿರಸ್ಕರಿಸಲಾಗಿದೆ. 37,49,292 ಅರ್ಜಿ ವಿಲೇವಾರಿಯಾಗಿದ್ದು, 3,09,246 ಬಾಕಿ ಇವೆ. ಖಚಿತ ಪಡಿಸಲು ಸ್ಥಳ ಪರಿಶೀಲನೆ
ಸರಕಾರ ನಿಗದಿಪಡಿಸಿರುವ ನಾಲ್ಕು ಮಾನದಂಡಗಳ ಆಧಾರದಲ್ಲಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿ ಸಿರುವವರ ಸ್ಥಳ ಪರಿಶೀಲನೆ ಮಾಡಿ ಅರ್ಜಿಗಳು ಬಿಪಿಎಲ್ ವ್ಯಾಪ್ತಿಗೆ ಒಳಪಡದೆ ಇದ್ದಲ್ಲಿ ಎಪಿಎಲ್‌ಗೆ ಶಿಫಾರಸು ಮಾಡಬೇಕು, ಸ್ಥಳ ಪರಿಶೀಲನೆ ಸಂದರ್ಭ ಅರ್ಜಿದಾರರು ಜಂಟಿ ಕುಟುಂಬವೇ, ಜಂಟಿ ಕುಟುಂಬ ದಿಂದ ಪ್ರತ್ಯೇಕವಾಗಲು ಅರ್ಜಿ ಸಲ್ಲಿಸ ಲಾಗಿದೆಯೇ ಎಂದು ತಿಳಿಯಬೇಕು, ಈಗಾಗಲೇ ಬೇರೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಯಾಗಿದೆಯೇ ಎನ್ನುವುದನ್ನು ಪರಿ ಶೀಲಿಸುವುದು, ಎಪಿಎಲ್ ಕಾರ್ಡ್ ಹೊಂದಿದ್ದರೂ ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸೂಚನೆ ನೀಡಲಾಗಿದೆ.
Related Articles
ಈಗಾಗಲೇ ಪತ್ತೆಯಾದ ಅನರ್ಹರು ಮತ್ತೆ ಅರ್ಜಿ ಸಲ್ಲಿಸಿದ್ದರೆ ಬಿಪಿಎಲ್ ಕಾರ್ಡ್ ನೀಡ ದಂತೆ ನಿರ್ದೇಶಿಸ ಲಾಗಿದೆ. ಸರಕಾರಿ ನೌಕರರು, ನಿವೃತ್ತ ನೌಕರರು, ಕಂಪೆನಿ ಉದ್ಯೋಗಿಗಳು, ವ್ಯಾಪಾರಸ್ಥರು, ದೊಡ್ಡ ಭೂ ಹಿಡುವಳಿದಾರರು ಸರಕಾರದ ಇತರ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿದ್ದರೆ ತಿರಸ್ಕರಿಸುವಂತೆ ಸೂಚಿಸಲಾಗಿದೆ.
Advertisement
ಪ್ರತೀ ಆಹಾರ ನಿರೀಕ್ಷಕರು/ಶಿರಸ್ತೇದಾರರು ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿದಾರರು ಅದಕ್ಕೆ ಅರ್ಹರೇ / ಅನರ್ಹರೇ ಎಂಬ ಅಂಕಿಅಂಶ ತಯಾರಿಸಿ ವರದಿ ಸಲ್ಲಿಸುವಂತೆ ಸೂಚಿಸ ಲಾಗಿದೆ. ಅರ್ಹತೆ ಹಾಗೂ ಅನರ್ಹತೆ ಬಗ್ಗೆ ವರದಿ ಮಾತ್ರ ಸಲ್ಲಿಸಲು ಅವಕಾಶ ನೀಡಿದ್ದು, ಯಾವುದೇ ಹೊಸ ಪಡಿತರ ಚೀಟಿಯನ್ನು ಆನ್‌ಲೈನ್‌ನಲ್ಲಿ ಮಂಜೂರು ಮಾಡುವಂತಿಲ್ಲ.– ಎಂ. ಕನಗವಲ್ಲಿ, ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಬೆಂಗಳೂರು -ಕಿರಣ್ ಪ್ರಸಾದ್ ಕುಂಡಡ್ಕ