ಬೆಂಗಳೂರು: ಕೆಲವರಿಗೆ ಕ್ರಿಕೆಟ್ ನೋಡುವಾಗ ಕಾಮೆಂಟರಿ ಕೇಳುವುದು ಅಂದರೆ ಖುಷಿ. ಕಾಮೆಂಟರಿ ಇಲ್ಲದೆ ಕ್ರಿಕೆಟ್ ನೋಡುವುದು ನೀರಸವೆನಿಸುತ್ತದೆ. ಖ್ಯಾತನಾಮರು ವೀಕ್ಷಣೆ ವಿವರಣೆ ನೀಡುವಾಗ,ಮೈಯೆಲ್ಲಾ ಕಿವಿಯಾಗಿಸಿ ಕುತೂಹಲದಿಂದ ನಾವು ಕ್ರಿಕೆಟ್ ನೋಡುವವರಿದ್ದಾರೆ.
ಒಂದು ತಂಡ ಕಟ್ಟಿಕೊಂಡು, ಅಥವಾ ನಾಲ್ಕೈದು ಜನರಿದ್ದರೂ ನಾವು ಮನೆ ಹತ್ತಿರದ ಮೈದಾನ, ಅಂಗಳ, ಸಣ್ಣ ಜಾಗದಲ್ಲಿ ಕ್ರಿಕೆಟ್ ಆಡುತ್ತಾರೆ. ಶನಿವಾರ, ಭಾನುವಾರ ಆದರೆ ಸಾಕು, ಕ್ರಿಕೆಟ್ ನಲ್ಲಿ ನಾವು ಮಗ್ನರಾಗಿ ಬಿಡುವವರಿದ್ದಾರೆ. ಎಲ್ಲಾ ತಂಡದಲ್ಲೂ ಒಬ್ಬ ಶ್ರೇಷ್ಠ ಆಟಗಾರ, ಬೌಲರ್ ಇದ್ದೇ ಇರುತ್ತಾರೆ. ನಮ್ಮಲ್ಲೇ ಕೆಲ ಸ್ಥಳೀಯ ಪ್ರತಿಭೆಗಳೂ ಇರುತ್ತಾರೆ.
ನಾವು ಆಟ ಆಡುವಾಗ, ನಮ್ಮ ತಂಡದ ಒಬ್ಬ ಪ್ಲೇಯರ್ ಬ್ಯಾಟ್ ಹಿಡಿದು ಕ್ರೀಸ್ ಗಳಿದಾಗ, ಆತನನ್ನು ಶ್ಲಾಘಿಸಿ, ಕಾಮೆಂಟರಿ ಮಾಡುವ ಸ್ನೇಹಿತರನ್ನು ನಾವು ನೋಡಿದ್ದೇವೆ. ಹೀಗೆ ಅರೆ ಇಂಗ್ಲೀಷ್, ಅರೆ ಕನ್ನಡ, ಹಿಂದಿಯಲ್ಲಿ ಕಾಮೆಂಟರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಕಾಮೆಂಟರಿ ಮೂಲಕವೇ ವೈರಲ್ ಆಗಿದ್ದಾನೆ.
ಮನೆಯ ಪಕ್ಕದಲ್ಲಿ ನಾಲ್ಕೈದು ಜನ ಕ್ರಿಕೆಟ್ ಆಡುವಾಗ, ಯುವಕನೊಬ್ಬ ಮೊಬೈಲ್ ಹಿಡಿದುಕೊಂಡು ಆಡುತ್ತಿರುವ ಯುವಕರ ದೃಶ್ಯ ಹಾಗೂ ಅಲ್ಲೇ ನಿಂತಿದ್ದ ವ್ಯಕ್ತಿಗಳಿಬ್ಬರ ದೃಶ್ಯವನ್ನು ಸೆರೆಹಿಡಿದು ಸಂಸ್ಕೃತದಲ್ಲಿ ಪಂದ್ಯದ ವಿವರಣೆಯನ್ನು ಸೊಗಸಾಗಿ ನೀಡಿದ್ದಾರೆ. ಪಂದ್ಯದ ಸಣ್ಣ ವಿಡಿಯೋವನ್ನು ಮಾಡಿದ್ದಾರೆ.
ಲಕ್ಷ್ಮೀ ನಾರಾಯಣ್ ಎನ್ನುವವರು ಟ್ವಟರ್ ನಲ್ಲಿ ಸಂಸ್ಕೃತ ಹಾಗೂ ಕ್ರಿಕೆಟ್ ಎಂದು ಬರೆದುಕೊಂಡು ಈ ವಿಡಿಯೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗಾಗಲೇ ಈ ವಿಡಿಯೋ 2.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಇಂಥ ಸಂಸ್ಕೃತ ಕಾಮೆಂಟರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಬರಬೇಕೆಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರು ಈ ರೀತಿ ಸಂಸ್ಕೃತ ಭಾಷೆಯನ್ನು ಮಾತಾನಾಡಲು ಎಲ್ಲರೂ ಸಾಧ್ಯವಾಗಬೇಕೆಂದು ಬರೆದುಕೊಂಡಿದ್ದಾರೆ.