Advertisement

ಮತ ಖರೀದಿ ಮಾಡುವವರನ್ನು ಬಹಿಷ್ಕರಿಸಿ; ನ್ಯಾ.ಗೋಪಾಲಗೌಡ

06:24 PM Jul 07, 2022 | Team Udayavani |

ಕೋಲಾರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರನ್ನು ಹಣಕ್ಕೆ ಕೊಂಡುಕೊಳ್ಳುವವರನ್ನು ಚುನಾವಣೆ ವ್ಯವಸ್ಥೆಯಿಂದ ಬಹಿಷ್ಕರಿಸುವಂತ ಆಂದೋಲನವನ್ನು ಕೋಲಾರದಿಂದ ಆರಂಭಗೊಳಿಸಿ ದೇಶಾದ್ಯಂತ ಮಾಡಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ವಿ.ಗೋಪಾಲಗೌಡ ತಿಳಿಸಿದರು.

Advertisement

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸ್ವಾಭಿಮಾನಿ ಕೋಲಾರ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣೆಯ ವ್ಯವಸ್ಥೆಯಲ್ಲಿ ಮತಗಳನ್ನು ಸರಕು ಮಾಡಿಕೊಂಡು ಜನರಿಗೆ ಹಣ ಹಂಚಿ ಖರೀದಿಸುತ್ತಿರುವ ರಾಜಕಾರಣಿಗಳು ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಪರ್ಸೆಂಟೇಜ್‌ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವರ್ಗಾವಣೆಯಲ್ಲಂತೂ ಕೋಟ್ಯಂತರ ರೂ. ಹರಿದಾಡುತ್ತಿದೆ. ಎಸಿಪಿ, ಎಸ್‌ಐ, ತಹಶೀಲ್ದಾರ್‌, ಉಪನೋಂದಣಾಧಿಕಾರಿ, ಜಿಲ್ಲಾಧಿಕಾರಿಗಳು ಶಾಸಕರಿಗೆ, ಮಂತ್ರಿಗಳಿಗೆ ಕೋಟ್ಯಂತರ ಹಣ ನೀಡಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಧಿ ಕಾರಿಗಳು ಜನರಿಂದ ಹಣ ಹೀರುತ್ತಾರೆ. ಇಡೀ ಸಮಾಜ ಲಂಚಮಯವಾಗಿದೆ. ಜೈಲಿನಲ್ಲಿರಬೇಕಾದವರು ಹೊರಗಿದ್ದಾರೆ. ಖುಲಾಸೆ ಆಗಬೇಕಾದವರು ಜೈಲಿನಲ್ಲಿದ್ದಾರೆ
ಇದು ನಮ್ಮ ಸಮಾಜದ ನಿಜವಾದ ವ್ಯವಸ್ಥೆ ಎಂದರು.

ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ. ಅವರು ಹೇದರ ಕೂಡದು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು ಎಂದರು. ಸಮಾನ ಮನಸ್ಕರ ಸಂಘಟನೆಯ ಮುಖಂಡರಾದ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸ್ವಾಭಿಮಾನಿ ಕೋಲಾರ ಆಂದೋಲನದ ಮೂಲಕ ಭ್ರಷ್ಟ ರಹಿತವಾದ ಚುನಾವಣಾ ವ್ಯವಸ್ಥೆ ಬೇಕೆಂಬ ಕೂಗು ಕೋಲಾರದಿಂದಲೇ ಆರಂಭವಾಗುತ್ತಿರುವುದಕ್ಕೆ ಕಾರಣ ಕೋಲಾರದ ಜನ ಮೂಲತಃ ಸ್ವಾಭಿಮಾನಿಗಳಾಗಿರುವುದೇ ಕಾರಣ ಎಂದರು.

ಮುಖಂಡ ಶ್ರೀಕೃಷ್ಣ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ಹಣ ಪಡೆದವರನ್ನು ಮತ್ತು ನೀಡಿದವರನ್ನು ಮತದಾರರ ಪಟ್ಟಿಯಿಂದಲೇ ವಜಾಗೊಳಿಸುವಂತ ಕಾನೂನು ಜಾರಿಯಾಗಬೇಕೆಂದರು.

Advertisement

ಮುಖಂಡ ಯಲವಾರ ಸೊಣ್ಣೇಗೌಡ, ಪತ್ರಕರ್ತ ಕೆ.ಎಸ್‌ ಗಣೇಶ್‌, ಜನವಾದಿ ವಿ.ಗೀತಾ ಮಾತನಾಡಿದರು. ಡಾ.ಉದಯಕುಮಾರ್‌, ಜೆಪಿ ವೇದಿಕೆ ದಯಾನಂದ್‌, ರೆಡ್‌ಕ್ರಾಸ್‌ ಛೇರ್ಮನ್‌ ಗೋಪಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್‌ ಬಾಬು, ಅಬ್ಬಣಿ ಶಿವಪ್ಪ, ಗಾಂ ಧಿನಗರ ನಾರಾಯಣಸ್ವಾಮಿ, ಟಿ.ವಿಜಿಕುಮಾರ್‌, ವಕೀಲ ಸತೀಶ್‌, ಮಂಜುನಾಥ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next