Advertisement

Politics: 14 ಪತ್ರಕರ್ತರಿಗೆ ಬಹಿಷ್ಕಾರ: ಕಾಂಗ್ರೆಸ್‌, ಜೆಡಿಯು ಭಿನ್ನರಾಗ

12:34 AM Sep 17, 2023 | Team Udayavani |

ಹೊಸದಿಲ್ಲಿ: ವಿಪಕ್ಷಗಳ ಮೈತ್ರಿಕೂಟವು 14 ಮಂದಿ ಟಿವಿ ನಿರೂಪಕರಿಗೆ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಮೈತ್ರಿಕೂಟದಲ್ಲಿರುವ ಎರಡು ಪಕ್ಷಗಳ ನಡುವೆಯೇ ಭಿನ್ನಮತ ತಲೆದೋರಿರುವ ಲಕ್ಷಣ ಗೋಚರಿಸಿದೆ. ಈ ನಿರ್ಧಾರವನ್ನು ಕಾಂಗ್ರೆಸ್‌ ಸಮರ್ಥಿಸಿ ಕೊಂಡರೆ, ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು “ನನ್ನ ಬೆಂಬಲ ಪತ್ರಕರ್ತರಿಗೆ’ ಎಂದು ಘೋಷಿಸಿದ್ದಾರೆ.

Advertisement

ಬಹಿಷ್ಕಾರದ ಬಗ್ಗೆ ನನಗೆ ಮಾಹಿತಿಯಿಲ್ಲ. ನಾನು ಪತ್ರಕರ್ತರನ್ನು ಬೆಂಬಲಿಸುತ್ತೇನೆ. ಎಲ್ಲರೂ ಸಂಪೂರ್ಣ ಸ್ವಾತಂತ್ರ್ಯ ಪಡೆದಿರು ವಾಗ, ಪತ್ರಕರ್ತರೂ ತಮಗಿಷ್ಟ ಬಂದಂತೆ ಬರೆಯುತ್ತಾರೆ. ಅವರನ್ನು ನಿಯಂತ್ರಿಸಲು ಸಾಧ್ಯವೇ? ನಾನು ಯಾವತ್ತಾದರೂ ಹಾಗೆ ಮಾಡಿದ್ದೇನಾ? ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕುಗಳಿವೆ ಎಂದು ನಿತೀಶ್‌ ಹೇಳಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಮಾತನಾಡಿ, “ನಾವು ಪತ್ರಕರ್ತ ರನ್ನು ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ, ಕಪ್ಪುಪಟ್ಟಿಗೆ ಸೇರಿಸಿಲ್ಲ. ಇದು ದ್ವೇಷವನ್ನು ಹಬ್ಬಿಸುವವರ ವಿರುದ್ಧ ನಾವು ನಡೆಸುತ್ತಿರುವ ಅಸಹಕಾರ ಚಳವಳಿ ಅಷ್ಟೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next