Advertisement

ಬಾಲಕ ನೀರು ಪಾಲು: ಮುಂದುವರಿದ ಶೋಧ ಕಾರ್ಯ

11:23 AM Oct 14, 2019 | Suhan S |

ಕಲಾದಗಿ: ಸ್ನಾನ ಮಾಡಲು ತೆರಳಿದ ಬಾಲಕ ಕಾಲುವೆಯಲ್ಲಿ ನೀರುಪಾಲಾದ ಘಟನಾ ಸ್ಥಳಕ್ಕೆ ಬಾಗಲಕೋಟೆ ತಹಶೀಲ್ದಾರ್‌ ಎಂ.ಬಿ. ನಾಗಠಾಣ ಭೇಟಿ ನೀಡಿ ಅಗ್ನಿ ಶಾಮಕ ಅಧಿಕಾರಿಗಳಿಂದ ಮಾಹಿತಿ ಪಡೆದರು.

Advertisement

ಘಟಪ್ರಭಾ ನದಿಯಿಂದ ಕಳಸಕೊಪ್ಪ ಕೆರೆಗೆ ನೀರು ತುಂಬಿಸುವ ಜಾಕ್‌ವೆಲ್‌ ಪಂಪ್‌ಹೌಸ್‌ ಬಳಿಯ ಕಾಲುವೆಯಲ್ಲಿ ಬಾಲಕ ಶನಿವಾರ ಮಧ್ಯಾಹ್ನ ನೀರು ಪಾಲಾಗಿದ್ದ. ಬಾಲಕನಿಗಾಗಿ ಕಾಲುವೆ ನೀರಿನಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ಮೀನುಗಾರರು ತೆಪ್ಪದ ಸಹಾಯದೊಂದಿಗೆ ಪಾತಾಳ ಗರಡಿ ನೀರಲ್ಲಿ ಬಿಟ್ಟು ಕಳೆದೆರಡು ದಿನದಿಂದ ಶೋಧ ನಡೆಯುತ್ತಿದ್ದು, ರವಿವಾರವೂ ನಡೆದ ಕಾರ್ಯಾಚರಣೆಯಲ್ಲಿ ಬಾಲಕ ಪತ್ತೆಯಾಗಿಲ್ಲ.

ಕಲಾದಗಿಯ ಮೀನುಗಾರರು ಎರಡು ದಿನದಿಂದ ಬಾಲಕನಿಗಾಗಿ 40 ಅಡಿ ಆಳದ ಕಾಲುವೆಯಲ್ಲಿ ದಣಿವರಿಯದೇ ಶೋಧ ಕಾರ್ಯ ನಡೆಸಿದ್ದು, ಮಂಜೂರ ಅಹಮ್ಮದ್‌ ಮುಜಾವರ್‌, ಯಾಶಿನ್‌ ಸೊಲ್ಜರ್‌, ಹಸನಸಾಬ ಬರಮೈ, ಹಸನಸಾಬ ಮುಜಾವರ್‌ ನಿರಂತರ ಅಗ್ನಿ ಶಾಮಕ ಸಿಬ್ಬಂದಿಯೊಂದಿಗೆ ಶೋಧ ಕಾರ್ಯ ನಡೆಸಿದರು.

ಕಾಲುವೆ ನೀರಿನಲ್ಲಿ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದರೆ, ಇತ್ತ ಬಾಲಕನ ತಂದೆ ಯಾಶೀನ್‌ ಮಕಾನದಾರ ಕಾಲುವೆ ಬಳಿ ಬಂಡೆ ಮೇಲೆ ಕುಳಿತು ಮಗನಿಗಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಬಾಗಲಕೋಟೆ ಗ್ರೇಡ್‌-2 ತಹಶೀಲ್ದಾರ್‌ ಎಂ.ಆರ್‌. ಭಜಂತ್ರಿ, ಉಪತಹಶೀಲ್ದಾರ್‌ ಪಿ.ಬಿ. ಸಿಂಗ್ರಿ, ಗ್ರಾಮ ಲೆಕ್ಕಾಧಿಕಾರಿ ಎ.ವಿ. ಸೂರ್ಯವಂಶಿ, ಪೊಲೀಸ್‌ ಎಎಸೈ ವೈ. ಎಂ. ನಡುವಿನಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next