Advertisement

16 ತಾಸುಗಳ ಕಾರ್ಯಾಚರಣೆ: ಬೋರ್‌ ವೆಲ್‌ಗೆ ಬಿದ್ದಿದ್ದ ಬಾಲಕನ ರಕ್ಷಣೆ

05:55 AM Feb 21, 2019 | udayavani editorial |

ಪುಣೆ : ಜಿಲ್ಲೆಯ ಅಂಬೇಗಾಂವ್‌ ತೆಹಶೀಲ್‌ನ ಗ್ರಾಮವೊಂದರಲ್ಲಿ 200 ಅಡಿ ಆಳದ ಬೋರ್‌ ವೆಲ್‌ ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು ಹದಿನಾರು ತಾಸುಗಳ ಸುದೀರ್ಘ‌ ಕಾರ್ಯಾಚರಣೆಯಲ್ಲಿ ಮೇಲೆತ್ತಿ ಪಾರುಗೊಳಿಸಲಾಗಿದೆ.

Advertisement

ಬಾಲಕನು ರಸ್ತೆ ನಿರ್ಮಾಣ ಕಾರ್ಮಿಕರೊಬ್ಬರ ಪುತ್ರ ಎಂದು ತಿಳಿದು ಬಂದಿದೆ. ಬಾಲಕನನ್ನು ಮೇಲಕ್ಕೆತ್ತಿ ರಕ್ಷಿಸುವ ಕಾರ್ಯಾಚರಣೆಯು ನಿನ್ನೆ ಬುಧವಾರ ಸಂಜೆ ಆರಂಭಗೊಂಡಿತ್ತು. ಎನ್‌ಡಿಆರ್‌ಎಫ್ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು. 

ಬಾಲಕನು ಬುಧವಾರ ಸಂಜೆ 4.45ರ ಸುಮಾರಿಗೆ ಬೋರ್‌ ವೆಲ್‌ ಪಕ್ಕದಲ್ಲೇ ಆಡಿಕೊಂಡಿದ್ದಾಗ ಆಕಸ್ಮಿಕವಾಗಿ ಬಾಯಿ ತೆರೆದುಕೊಂಡಿದ್ದ ಬೋರ್‌ ವೆಲ್‌ ಗೆ ಬಿದ್ದಿದ್ದ. ಆ ಸಂದರ್ಭದಲ್ಲಿ ಆತನ ತಂದೆ ರಸ್ತೆ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರು. ಪಾರುಗೊಳಿಸಲ್ಪಟ್ಟ ಬಾಲಕನು ಆರೋಗ್ಯದಿಂದಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next