Advertisement

ಕೆರೆ ಹಾವಿನೊಂದಿಗೆ ಮೂರು ವರ್ಷದ ಬಾಲಕನ ಆಟ : ವಿಡಿಯೋ ವೈರಲ್

12:32 PM Jan 12, 2022 | Team Udayavani |

ಕುಷ್ಟಗಿ: ಮೂರು ವರ್ಷದ ಬಾಲಕ ಇಮ್ರಾನ್, ಕೆರೆ ಹಾವಿನೊಂದಿಗೆ ಅಂಜಿಕೆ ಅಳುಕಿಲ್ಲದೇ ಆಟವಾಡಿರುವ ವಿಡಿಯೋ ವೈರಲ್ ಆಗಿದೆ.

Advertisement

ಕುಷ್ಟಗಿ ಸಂತ ಶಿಸುನಾಳ ಷರೀಫ್ ನಗರ ಕಾಲೋನಿಯ ಹಾವಾಡಿಗ, ಬುಧವಾರ ಬೆಳಗ್ಗೆ 1ನೇ ವಾರ್ಡ್ ಕೃಷ್ಣಗಿರಿ ಕಾಲೋನಿಯ ಮಾಜಿ ಪುರಸಭೆ ಸದಸ್ಯ ನಾಗರಾಜ ಮೇಲಿನಮನಿ ಅವರ ಮನೆಯ ಬಳಿ, ಕೆರೆ ಹಾವು ಕಾಣಿಸಿಕೊಂಡಿದೆ.

ಕೂಡಲೇ ಸ್ನೇಕ್ ಸ್ನೇಹಿ ಚಾಂದ್ ಪಾಷಾ ಅವರು ಆಗಮಿಸಿ ಕೆರೆ ಹಾವನ್ನು ಸುರಕ್ಷಿತವಾಗಿ ಹಿಡಿದು ನಂತರ ಮನೆಗೆ ತಂದಿದ್ದಾರೆ.

ಮನೆಯಲ್ಲಿ ಅವರ ಮಗ, ಮೂರು ವರ್ಷದ ಇಮ್ರಾನ್ ಹಾವನ್ನು ಹಿಡಿದು ಆಟವಾಡಿ ನಂತರ ಬಿಟ್ಟಿದ್ದಾನೆ. ಇದನ್ನು ಚಾಂದ್ ಪಾಷಾ ಮೋಬೈಲ್ ವಿಡಿಯೋ ಮಾಡಿದ್ದು ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏನು ಅರಿಯದ ಬಾಲಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಬಿಜೆಪಿಗೆ ಶಾಕ್‌; ಪಂಚರಾಜ್ಯಗಳಲ್ಲಿ ಪಕ್ಷಾಂತರ ಪರ್ವ

Advertisement
Advertisement

Udayavani is now on Telegram. Click here to join our channel and stay updated with the latest news.

Next