Advertisement
ಹೆಣ್ಣಿನಂತೆ ಅಭಿನಯಿಸುವುದು ಒಬ್ಬ ಪುರುಷನಿಗೆ ನಿಜಕ್ಕೂ ಕಷ್ಟದ ಮಾತೇ. ಆ ನೋಟ, ಮುಗ್ಧತೆ, ಕಣ್ಣಾಳದ ಪ್ರೀತಿ, ನಾಚಿಕೆ, ವೈಯ್ನಾರ- ಇವೆಲ್ಲವುಗಳನ್ನು ತುಂಬಿಕೊಂಡು, ಮುಖಭಾವ ಹೊಮ್ಮಿಸುವುದು ಸವಾಲೇ ಸರಿ. ಆದರೆ, ಬಳ್ಳಾರಿ ಜಿÇÉೆಯ ಸಿರುಗುಪ್ಪದ ಬಲಕುಂದಿ ಬಸವರಾಜ್ ಅವರಿಗೆ ಇದು ಸುಲಭ. ಕೂಚಿಪುಡಿ ನೃತ್ಯ ಪ್ರಕಾರದಲ್ಲಿ ಅವರು ಸ್ತ್ರೀ ವೇಷ ಧರಿಸಿ, ಅಂಥ ಮುಗ್ಧತೆ ಹೊರಹೊಮ್ಮಿಸುತ್ತಾರೆ. ಸ್ತ್ರೀ ವೇಷಧಾರಿ ಪುರುಷ ಎಂದು ಒಂದಿಂಚೂ ಸಂಶಯ ಮೂಡದ ಹಾಗೆ ನರ್ತಿಸುವುದು ಬಸವರಾಜು ವಿಶೇಷತೆ.
Related Articles
19ನೇ ವಯಸ್ಸಿನಿಂದ ನೃತ್ಯ ಪ್ರದರ್ಶನ ಆರಂಭಿಸಿದ ಇವರು, ದೇಶ- ವಿದೇಶ ಸೇರಿದಂತೆ ಸುಮಾರು 800ಕ್ಕೂ ಅಧಿಕ ಪ್ರದರ್ಶಗಳನ್ನು ನೀಡಿದ್ದಾರೆ.
Advertisement
ಕನ್ನಡಿ ಮುಂದೆ ನಿಂತು ತಮ್ಮ ಅಲಂಕಾರವನ್ನು ತಾವೇ ಮಾಡಿಕೊಳ್ಳುವಾಗ ಸ್ತ್ರೀಯರೂ ನಾಚುವುದುಂಟು. ಕೇವಲ ಒಂದು ತಾಸಿನಲ್ಲಿ ಅಲಂಕಾರ ಮುಗಿಸುತ್ತಾರೆ. ತಮ್ಮ ನೃತ್ಯದ ಬಟ್ಟೆಗಳನ್ನು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ನಾಟ್ಯ ಕೌಮುದಿ ಪ್ರಶಸ್ತಿ, ನಾಟ್ಯ ತೇಜಸ್ವಿನಿ, ಕರ್ನಾಟಕ ನಾಟ್ಯಸಿರಿ, ನಾಟ್ಯ ಮಯೂರಿ ಪ್ರಶಸ್ತಿಗೆ ಇವರು ಭಾಜನರು.
– ಪ್ರಕಾಶ್ ಕೆ.ನಾಡಿಗ್, ತುಮಕೂರು