Advertisement

ಟಿಕ್ ಟಾಕ್ ವಿಡಿಯೋ ಮಾಡಿ ಶಾಂತಿ ಕದಡಲು ಯತ್ನಿಸಿದ ಯುವಕನಿಗೆ ಧರ್ಮದೇಟು

02:07 PM Apr 06, 2020 | keerthan |

ಬೆಳಗಾವಿ/ಬೈಲಹೊಂಗಲ: ಕೋವಿಡ್-19 ಭೀತಿ ಮಧ್ಯೆ ಟಿಕ್ ಟಾಕ್ ವಿಡಿಯೋ ಮಾಡಿ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಯುವಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದು, ನಂತರ ಪೊಲೀಸರು ವಶಕ್ಕೆ ಪಡೆದು ಈತನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Advertisement

ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ಮೀರಾಸಾಬ್ ಸಾಧಿಕ ನೇಸರಗಿ (20) ಎಂಬ ಯುವಕನನ್ನು ಗ್ರಾಮ ಪಂಚಾಯಿತಿಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ಚಪ್ಪಲಿಯಿಂದ ಥಳಿಸಿದ್ದಾರೆ.

‌ದೇಶನೂರ ಗ್ರಾಮದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿತ್ತು.‌ಗಲಾಟೆ ನಿಯಂತ್ರಿಸಲು ಹಾಗೂ ಗ್ರಾಮದಲ್ಲಿ ಶಾಂತಿ ನೆಲೆಸಲು ಪೊಲೀಸರು‌‌ ಶಾಂತಿ ಸಭೆ ನಡೆಸಿದ್ದರು. ನಂತರ ಪೊಲೀಸರು ಪಥಸಂಚಲನ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು. ‌ಇದರ ವಿಡಿಯೋ ಮಾಡಿಕೊಂಡಿದ್ದ ಯುವಕ ಮೀರಾಸಾಬ್ ಪೊಲೀಸರ ಅವಹೇಳನಕಾರಿಯಾಗಿ ಟಿಕ್‌ಟಾಕ್ ವಿಡಿಯೋ ಸಿದ್ಧಪಡಿಸಿದ್ದನು.‌ ಇದನ್ನು ಅಪ್ ಲೋಡ್ ಮಾಡುತ್ತಿದ್ದಂತೆ ಗಮನಿಸಿದ ಗ್ರಾಮಸ್ಥರು ಯುವಕನನ್ನು ಗ್ರಾಮ ಪಂಚಾಯತ್ ಗೆ ಎಳೆದುಕೊಂಡು ತಂದಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷ ದೀಪಕ ಪಾಟೀಲ ಎದುರೇ ಯುವಕನಿಗೆ ಗ್ರಾಮದ‌ ಕೆಲವರು ಚಪ್ಪಲಿಯಿಂದ ಹೊಡೆದಿದ್ದಾರೆ. ಯುವಕನಿಂದಲೇ ಟೆಕ್ ಟಾಕ್ ನಲ್ಲಿರುವ ವಿಡಿಯೋ ಡಿಲಿಟ್ ಮಾಡಿಸಿ ಸಾರ್ವಜನಿಕವಾಗಿ ಕ್ಷಮೆ ಕೋರಿದ ಬಳಿಕ ಯುವಕನನ್ನು ಮನೆಗೆ ಕಳಿಸಿದ್ದಾರೆ.  ಇದು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next