Advertisement

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

09:56 AM May 19, 2024 | keerthan |

ವಿಜಯಪುರ: ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜರುಗಿದೆ.

Advertisement

ಹತ್ಯೆಯಾದ ಯುವಕನನ್ನು 22 ವರ್ಷದ ಕಂಬಾರ ಓಣಿ ನಿವಾಸಿ ರೋಹಿತ್ ಸುಭಾಶ ಪವಾರ ಎಂದು ಗುರುತಿಸಲಾಗಿದೆ.

ಹತ್ಯೆಯ ಬಳಿಕ ರೋಹಿತ್ ಶವವನ್ನು ಎಪಿಎಂಸಿ ಕುರಿ-ಮೇಕೆ ಮಾರುಕಟ್ಟೆ ಪರಿಸರದ ಮುಳ್ಳಿನ ಪೊದೆಯಲ್ಲಿ ಎಸೆಯಲಾಗಿದೆ.

ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಹಾಗೂ ಚಿಪ್ಸ್ ಪಾಕೇಟಗಳು ದೊರೆತಿದ್ದು, ಮದ್ಯ ಸೇವನೆ ಬಳಿಕ ಅಮಲಿನಲ್ಲಿ ಆಪ್ತರೇ ರೋಹಿತ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರೋಹಿತ್ ಸ್ನೇಹಿತನಾದ ಖಾಲೀದ್ ಇನಾಮದಾರ ಎಂಬವ ರೋಹಿತ್ ಕೊಲೆಯಾಗಿದ್ದಾನೆ ಎಂದು ಶನಿವಾರ ತಡರಾತ್ರಿ 2.21ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದ.

Advertisement

ಖಾಲಿದ್ ಕರೆ ಆಧರಿಸಿ ರೋಹಿತ್ ಗಾಗಿ ಹುಡುಕಿದರೂ ಶವ ಪತ್ತೆ ಆಗಿರಲಿಲ್ಲ. ಖಾಲಿದ್ ಮನೆಗೆ ಹೋಗಿ ವಿಚಾರಿಸಿದರೆ ಅಲ್ಲಿಯೂ ಇರಲಿಲ್ಲ. ನಂತರ ಎಪಿಎಂಸಿ ಮಾರುಕಟ್ಟೆ ಪ್ರದೇಶದ ಮೇಕೆ ಮಾರುಕಟ್ಟೆ ಪ್ರದೇಶದಲ್ಲಿ ರೋಹಿತ್ ಶವ ಪತ್ತೆಯಾಗಿದೆ.

ಡಿಎಸ್ಪಿ ಬಸವರಾಜ ಎಲಿಗಾರ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next