Advertisement

ಮಂಚಕ್ಕೆ ಕಟ್ಟಿ ಹಾಕಿ ಸೋದರ ಸಂಬಂಧಿಯನ್ನೇ ಅತ್ಯಾಚಾರಗೈದ 16 ವರ್ಷದ ಬಾಲಕ

09:44 AM Nov 18, 2019 | Mithun PG |

ಗುರುಗ್ರಾಮ: 16 ವರ್ಷದ ಬಾಲಕನೋರ್ವ ತನ್ನ ಸೋದರ ಸಂಬಂಧಿ ಬಾಲಕಿಯೋರ್ವಳನ್ನು ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರಗೈದ ಘಟನೆ ಹರಿಯಾಣ ಗುರುಗ್ರಾಮದ 51 ನೇ ವಲಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಗುರುವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷದ ಸಂತ್ರಸ್ತ ಬಾಲಕಿ ಶುಕ್ರವಾರ ತನ್ನ ಶಾಲಾ ಶಿಕ್ಷಕಿಗೆ ವಿಷಯ ತಿಳಿಸಿದ್ದಾಳೆ. ಆ ಬಳಿಕವಷ್ಟೇ ಪಾಲಕರು ಪೊಲೀಸರು  ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ತಾಯಿಯು ತನ್ನ ಮಗಳನ್ನು ಮನೆಗೆಲಸಕ್ಕೆ ಸಹಾಯ ಮಾಡಲೆಂದು ನಾದಿನಿಯ ಮನೆಗೆ ಕಳುಹಿಸಿದ್ದರು. ಆದರೇ ನಾದಿನಿ ತನ್ನ ಮಗನನ್ನು ಮತ್ತು ಬಾಲಕಿಯನ್ನು ಅಲ್ಲಿಯೇ ಬಿಟ್ಟು ವೈದ್ಯರ ಭೇಟಿಗೆ ತೆರಳಿದ್ದರು. ಈ ವೇಳೆಗೆ ಬಾಲಕ ಆಕೆಯನ್ನು ಮಂಚಕ್ಕೆ ಬಿಗಿಯಾಗಿ ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ.

Advertisement

ಸದ್ಯ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next