Advertisement
ಸುಳ್ಯ ತಾ| ಕಸಬಾ ಗ್ರಾಮದ 17 ವರ್ಷದ ಬಾಲಕ ಶ್ರೀಜಿತ್ ಮೃತಪಟ್ಟಾತ. ಬಾಲಕನಿಗೆ ಹೊಟ್ಟೆ ನೋವೆಂದು ಆ. 12ರಂದು ರಾತ್ರಿ ಪುತ್ತೂರಿನ ಹಳೆ ತಾಲೂಕು ಕಚೇರಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡ್ಯೂಟಿ ಡಾಕ್ಟರ್ ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿ ಕೊಂಡರು. ಆ. 13ರಂದು ಬೆಳಗ್ಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸೂಚಿಸಿ ಸಂಜೆ 6 ಗಂಟೆ ವೇಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಳಿಕ ಐ.ಸಿ.ಯು. ವಾರ್ಡ್‌ಗೆ ಬಾಲಕನನ್ನು ಕರೆತಂದು ಶಸ್ತ್ರಚಿಕಿತ್ಸೆ ಮಾಡಿದ ವಿಚಾರ ತಿಳಿಸಿ ಅನಂತರದ ಚಿಕಿತ್ಸೆ ನೀಡಿದ್ದಾರೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿ ದಲಿತ ಸೇವಾ ಸಮಿತಿಯು ಬಾಲಕನ ಮೃತದೇಹವನ್ನು ಇರಿಸಿ ಧರಣಿಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜೆ. ಶಿವಶಂಕರ್ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮನವೊಲಿಸಿದರು. ಬಳಿಕ ಧರಣಿ ಹಿಂಪಡೆಯಲಾಯಿತು.