Advertisement

ಬಾಕ್ಸಿಂಗ್‌: ನೀರಜ್‌ ಫೈನಲಿಗೆ

01:06 AM Aug 03, 2019 | Team Udayavani |

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ ಅಲೆಸ್ಸಿಯಾ ಮೆಸಿಯಾನೊ ಅವರನ್ನು ಅಮೋಘ ಹೋರಾಟದಲ್ಲಿ ಕೆಡಹಿ ಆಘಾತಗೊಳಿಸಿದ ಹಾಲಿ ಇಂಡಿಯಾ ಓಪನ್‌ ಚಿನ್ನ ವಿಜೇತ ನೀರಜ್‌ ಅವರು ರಶ್ಯದಲ್ಲಿ ಸಾಗುತ್ತಿರುವ ಮಗೊಮೆದ್‌ ಸಲಮ್‌ ಉಮಖಾನೊವ್‌ ಮೆಮೊರಿಯಲ್‌ ಬಾಕ್ಸಿಂಗ್‌ ಕೂಟದ ಫೈನಲ್‌ ಹಂತಕ್ಕೇರಿದರು.

Advertisement

57 ಕೆ.ಜಿ. ವಿಭಾಗದಲ್ಲಿ ಮೆಸಿಯಾನೊ ಅವರನ್ನು 3-2 ಅಂತರದಿಂದ ರೋಮಾಂಚಕವಾಗಿ ಕೆಡಹಿದ ನೀರಜ್‌ ಫೈನಲಿಗೇರಿದರಲ್ಲದೇ ಕಡಿಮೆಪಕ್ಷ ಬೆಳ್ಳಿಯ ಪದಕ ಗೆಲ್ಲುವುದನ್ನು ಖಚಿತಪಡಿಸಿದರು.

ಇಬ್ಬರೂ ಬಾಕ್ಸರ್‌ಗಳು ತೀವ್ರ ಪೈಪೋಟಿಯಿಂದ ಹೋರಾಡಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಹಲವು ನಿಖರ ಪಂಚ್‌ಗಳಿಂದಾಗಿ ನೀರಜ್‌ ಈ ಹೋರಾಟವನ್ನು ಗೆಲ್ಲಲು ಯಶಸ್ವಿಯಾದರು.

ಈ ಮೊದಲು ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಗೌರವ್‌ ಸೋಲಂಕಿ ಮತ್ತು 2019ರ ಇಂಡಿಯಾ ಓಪನ್‌ ಬೆಳ್ಳಿ ವಿಜೇತ ಗೋವಿಂದ್‌ ಸಹಾನಿ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಸೋಲಂಕಿ ರಶ್ಯದ ಮಾಕ್ಸಿಮ್‌ ಚೆರ್ನಿಶೆವ್‌ ಅವರನ್ನು 3-2 ಅಂತರದಿಂದ ಕೆಡಹಿದರೆ ಗೋವಿಂದ್‌ ಅವರು ತಜಿಕಿಸ್ಥಾನದ ಶೆರ್ಮುಖಾಮ್ಮದ್‌ ರುಸ್ತಮೋವ್‌ ಅವರನ್ನು ಸೋಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next