Advertisement
ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಜೀತ್ ರಾವೆಲ್ ಬದಲಿಗೆ ಟಾಮ್ ಬ್ಲಿಂಡೆಲ್ ತಂಡದಲ್ಲಿ ಸೇರಿಕೊಂಡಿದ್ದಾರೆ. ಅಪಾಯಕಾರಿ ಬೌಲ್ಟ್ ಪಕ್ಕೆಲುಬು ಗಾಯದಿಂದಾಗಿ ಮೊದಲ ಟೆಸ್ಟ್ ಆಡಿರಲಿಲ್ಲ. ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 296 ರನ್ನುಗಳಿಂದ ಸೋತಿತ್ತು.ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡುವ ಸಲು ವಾಗಿ ಬೌಲ್ಟ್ ನೆಟ್‌ನಲ್ಲಿ ಕಠಿನ ಅಭ್ಯಾಸ ನಡೆಸಿದ್ದರಲ್ಲದೇ ದೈಹಿಕ ಕ್ಷಮತೆ ಸಾಧಿಸಲು ಯಶಸ್ವಿಯಾಗಿದ್ದರು.
ನ ಮೊದಲ ದಿನ 75 ಸಾವಿರ ಪ್ರೇಕ್ಷಕರು ಸೇರುವ ನಿರೀಕ್ಷೆಯಿದೆ. ಟಾಮ್‌ದ್ವಯರು ಆರಂಭಿಕರು
ಫಾರ್ಮ್ನಲ್ಲಿ ಇರದ ರಾವೆಲ್ ಬದಲಿಗೆ ತಂಡಕ್ಕೆ ಮರಳಿದ ಟಾಮ್ ಬ್ಲಿಂಡೆಲ್ ಅವರು ಟಾಮ್ ಲಾಥಂ ಜತೆಗೂಡಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಾಯಕ ಕೇನ್ ವಿಲಿಯಮ್ಸನ್ ದೃಢಪಡಿಸಿದ್ದಾರೆ. ಹೆಚಾjಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಬ್ಲಿಂಡೆಲ್ ಪರಿಸ್ಥಿತಿಗೆ ಒಗ್ಗಿಕೊಂಡು ಆಡಲು ಪ್ರಯತ್ನಿಸಬೇಕು ಮತ್ತು ಅವರು ತನ್ನ ನೈಜ ಆಟ ಆಡುವ ನಿಟ್ಟಿನಲ್ಲಿ ಆರಂಭಿಕನಾಗಿ ಆಡಲು ನಿರ್ಧರಿಸಲಾಗಿದೆ ಎಂದು ವಿಲಿಯಮ್ಸನ್ ತಿಳಿಸಿದರು.
Related Articles
ಮೊದಲ ಟೆಸ್ಟ್ ಗೆದ್ದ ಹುಮ್ಮಸ್ಸಿನಲ್ಲಿರುವ ಆಸ್ಟ್ರೇಲಿಯ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಕದನಕ್ಕಾಗಿ ಐವರು ವೇಗಿಗಳನ್ನು ಇಳಿಸುವ ಬಗ್ಗೆ ಆಲೋಚನೆ ಮಾಡುತ್ತಿದೆ. ಕೊನೇ ಕ್ಷಣದಲ್ಲಿ ಇದರಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಇದೆ ಎಂದು ನಾಯಕ ಟಿಮ್ ಪೈನ್ ಹೇಳಿದ್ದಾರೆ.
Advertisement
ಕಳೆದ ಎರಡು ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಈ ಪಿಚ್ ಜೀವರಹಿತವಾಗಿ ವರ್ತಿಸಿತ್ತು. ಇಲ್ಲಿ 20 ವಿಕೆಟ್ ತೆಗೆಯುವುದು ಸ್ವಲ್ಪಮಟ್ಟಿಗೆ ಕಷ್ಟ. ಇಷ್ಟು ಮಾತ್ರವಲ್ಲದೇ ಈ ತಿಂಗಳಲ್ಲಿ ನಡೆದ ಶೇಫೀಲ್ಡ್ ಫೀಲ್ಡ್ ಪಂದ್ಯದ ವೇಳೆ ಪಿಚ್ ಅಪಾಯಕಾರಿಯಾಗಿ ವರ್ತಿಸಿದ್ದ ಕಾರಣ ಪಂದ್ಯ ರದ್ದುಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಪಿಚ್ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೈನ್ ಹೇಳಿದ್ದಾರೆ. ಒಂದು ವೇಳೆ ಐವರು ವೇಗಿಗಳೊಂದಿಗೆ ಕಣಕ್ಕೆ ಇಳಿದರೆ ಕ್ವೀನ್ಸ್ ಲ್ಯಾಂಡಿನ ಸೀಮರ್ ಮೈಕಲ್ ನೆಸೆರ್ ಟೆಸ್ಟ್ ಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ.