Advertisement

ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಪರಿತಪಿಸುತ್ತಿರುವ 150 ಬೋವಿಕುಟುಂಬಗಳು

12:49 PM Apr 27, 2020 | keerthan |

ಗಂಗಾವತಿ: ಕೋವಿಡ್-19 ರೋಗವನ್ನು ಹತೋಟಿಗೆ ತರಲು ಕೇಂದ್ರ ಸರಕಾರ ಜಾರಿ ಮಾಡಿರುವ ಲಾಕ್ ಡೌನ್ ನಿಂದಾಗಿ ನಗರದ 34ನೇ ವಾರ್ಡ್ ವಡ್ಡರ ಓಣಿಯಲ್ಲಿರುವ 150 ಭೋವಿ ಕುಟುಂಬದವರು ದಿನನಿತ್ಯದ  ಅಗತ್ಯ ವಸ್ತುಗಳಿಗಾಗಿ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಲ್ಲಿಯ ಕುಟುಂಬಗಳು ಕಲ್ಲು ಹೊಡೆದು ಜೀವನ ಸಾಗಿಸಬೇಕಿದ್ದು ಕರ್ಪ್ಯೂ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ.

Advertisement

ಮೂರು ದಿನಕ್ಕೊಮ್ಮೆ ಅರ್ಧಲೀಟರ್ ಕೆಎಂಎಫ್ ನಂದಿನಿ ಹಾಲಿನ ಪಾಕೇಟ್ ನೀಡಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಿಂದ ಒಬ್ಬರಿಗೆ 10ಕೆಜಿ ಅಕ್ಕಿ ಮಾತ್ರ ನೀಡಿದ್ದು ಅಡುಗೆ ಮಾಡಲು ಕಾರ ಉಪ್ಪು ಬೇಳೆ ಇನ್ನೂ ಅಗತ್ಯ ವಸ್ತುಗಳಿಲ್ಲದೆ ತೊಂದರೆ ಆಗಿದೆ. ವಾರ್ಡ್ ನಲ್ಲಿ ಅನಧಿಕೃತ 09 ಮದ್ಯದ ಅಕ್ರಮ ಅಂಗಡಿಗಳಿದ್ದು ಕರ್ಪ್ಯೂ ಸಂದರ್ಭದಲ್ಲಿಯೂ ಮದ್ಯದ ಮಾರಾಟ ಭರ್ಜರಿ ಮಾರಾಟವಾಗುತ್ತಿದೆ. ಜನರಿಗೆ ಊಟ ಮಾತ್ರ ಸಿಗುತ್ತಿಲ್ಲ.

ಆಕ್ರೋಶ: ಲಾಕ್ ಡೌನ್ ನಿಂದಾಗಿ ಕಳೆದ ಒಂದು ತಿಂಗಳಿಂದ ಜೀವನಕ್ಕೆ ಬೇಕಾಗುವ ಅಗತ್ಯ ವಸ್ತುಗಳಿಲ್ಲದೆ ಕೊರತೆ ಅನುಭವಿಸಲಾಗುತ್ತಿದ್ದು ಜನಪ್ರತಿನಿಧಿಗಳು ಸಂಘಸಂಸ್ಥೆಗಳ ಮುಖಂಡರು ಹಾಗು ಜನಪ್ರತಿನಿಧಿಗಳು ಇಲ್ಲಿಗೆ ಬಂದಿಲ್ಲ. ಹಿಂದುಳಿದ ಭೋವಿ ವಡ್ಡರ ಜನಾಂಗದವರೇ ಹೆಚ್ಚಿದ್ದು ಕರ್ಪ್ಯೂ ಹಿನ್ನೆಲೆಯಲ್ಲಿ ಕಲ್ಲು ಹೊಡೆದು ಜೀವನ ನಡೆಸಲು ಕಂದಾಯ ಅರಣ್ಯ ಪೊಲೀಸ್ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಭೋವಿ ಜನಾಂಗದ ಯುವ ಮುಖಂಡರಾದ ಮಲ್ಲೇಶ ಭೋವಿ ರಾಮು ಭೋವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next