Advertisement
ಬೋರ್ನ್ವಿಟಾದಲ್ಲಿ ಸಕ್ಕರೆ ಪ್ರಮಾಣ ಮಿತಿಗಿಂತ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ಆಯೋಗ ನಡೆಸಿದ ತನಿಖೆಯ ಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯೋಗವು ಭಾರತದ ಆಹಾರ, ಗುಣಮಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಿತ್ತು.
ಬೋರ್ನ್ವಿಟಾ “ಹೆಲ್ತ್ ಡ್ರಿಂಕ್’ ಅಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಗಳಲ್ಲಿ “ಹೆಲ್ತ್ ಡ್ರಿಂಕ್’ ಎಂಬ ವ್ಯಾಖ್ಯಾನವೇ ಇಲ್ಲ
ಕಾಯ್ದೆಯಲ್ಲಿ ಇಲ್ಲದ ಅಂಶಗಳನ್ನು ಇದೆ ಎಂದು ಬಿಂಬಿಸಿ ಮಾರಾಟ ಮಾಡುವುದು ಅಪರಾಧ.
ಹೀಗಾಗಿ ಇ-ಕಾಮರ್ಸ್ ವೇದಿಕೆಗಳಲ್ಲಿ ಬೋರ್ನ್ ವಿಟಾವನ್ನು “ಹೆಲ್ತ್ ಡ್ರಿಂಕ್’ ವಿಭಾಗದಲ್ಲಿ ಮಾರುವಂತೆ ಇಲ್ಲ ಎಂದು ಆದೇಶ