Advertisement

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

01:18 PM May 13, 2024 | Team Udayavani |

ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಭಾರತೀಯ ಟೆಕ್ ಬ್ರ್ಯಾಂಡ್ ಬೌಲ್ಟ್ (BOULT) ಮೊಟ್ಟ ಮೊದಲ ಸ್ಪೇಸ್ ಟ್ರಾನ್ಸ್ ಫಾರ್ಮಿಂಗ್ ಸೌಂಡ್ ಬಾರ್, ಬಾಸ್ ಬಾಕ್ಸ್ ಸೌಂಡ್ ಬಾರ್ ಗಳನ್ನು ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್ ಹೋಮ್ ಆಡಿಯೊ ಕ್ಷೇತ್ರಕ್ಕೆ ಕಾಲಿಟ್ಟಿದೆ.

Advertisement

BOULT ನ BassBox ಪ್ರೀಮಿಯಂ ಧ್ವನಿ ಗುಣಮಟ್ಟವನ್ನು ನೀಡುತ್ತದೆ. 120 ಮತ್ತು 180 RMS ಸೌಂಡ್ ಔಟ್ ಪುಟ್ ನ ಎರಡು ಮಾದರಿಯಲ್ಲಿ ಲಭ್ಯವಿದೆ.

BOULT BassBox X120 ಎರಡು ಸೌಂಡ್ ಡ್ರೈವರ್ ಗಳನ್ನು ಹೊಂದಿದೆ ಮತ್ತು 120 RMS ನ ಆಡಿಯೊ ಔಟ್ ಪುಟ್ ನೊಂದಿಗೆ ಹಾಗೂ BOULT BassBox X180 ನಾಲ್ಕು ಸೌಂಡ್ ಡ್ರೈವರ್ ಗಳನ್ನು ಹೊಂದಿದ್ದು, ದೊಡ್ಡ ಕೋಣೆಗೆ ಸೂಕ್ತವಾಗಿದೆ. ಈ ಸೌಂಡ್ ಬಾರ್ ಡೀಪ್ ಬಾಸ್ ಗಾಗಿ ವೈರ್ಡ್ ಸಬ್ ವೂಫರ್ ಅನ್ನು ಒಳಗೊಂಡಿದೆ.  ಮೂವಿ, ಮ್ಯೂಸಿಕ್, ನ್ಯೂಸ್ ಮೂರು EQ ಮೋಡ್ ಹೊಂದಿದೆ.

ಬೌಲ್ಟ್ ಬಾಸ್ ಬಾಕ್ಸ್ ಎಕ್ಸ್ 120 ಮಾದರಿ 4,999 ರೂ.ಗೆ ಹಾಗೂ ಬಾಸ್ಬಾಕ್ ಎಕ್ಸ್ 180 ಮಾದರಿ 5,999 ರೂ.ಗೆ www.boultaudio.com and Flipkart.com ನಲ್ಲಿ ಲಭ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next