Advertisement

Smartwatch ಬೌಲ್ಟ್ ಮಿರಾಜ್: ಹೀಗಿದೆ ನೋಡಿ ಈ ಸ್ಮಾರ್ಟ್ ವಾಚ್!

11:03 PM Feb 08, 2024 | Team Udayavani |

ಭಾರತೀಯ ಬ್ರಾಂಡ್ ಬೌಲ್ಟ್ ಕೈಗೆಟುಕುವ ದರದ ಗುಣಮಟ್ಟದ ಸ್ಮಾರ್ಟ್ ವಾಚ್ ಗಳನ್ನು ಹೊರತರುತ್ತಿದೆ. ಅದರ ಇತ್ತೀಚಿನ ಸ್ಮಾರ್ಟ್ ವಾಚ್ ಬೌಲ್ಟ್ ಮಿರಾಜ್. ಇದರ ದರ ಫ್ಲಿಪ್ ಕಾರ್ಟ್ ನಲ್ಲಿ 1799 ರೂ. ಇದೆ.

Advertisement

ಇದು ಕಪ್ಪು, ಸ್ಟೀಲ್ ಮತ್ತು ಗೋಲ್ಡ್ ಕಲರ್ಗಳಲ್ಲಿ ಲಭ್ಯವಿದೆ. ಇದರ ಸ್ಟ್ರಾಪ್ ಸಾಂಪ್ರದಾಯಿಕ ವಾಚ್ ಗಳಂತೆ ಲೋಹದ ಚೈನ್ ಹೊಂದಿದೆ. ಹಾಗಾಗಿ ಇದನ್ನು ನಮ್ಮ ಕೈ ಅಳತೆಗೆ ಹೊಂದಿಸಲು ಕೆಲ ಲಿಂಕ್ ಗಳನ್ನು ತೆಗೆಸಬೇಕಾಗುತ್ತದೆ. ಚೈನ್ ಲಿಂಕ್ ಗಳನ್ನು ತೆಗೆಯಲು ಬಾಕ್ಸ್ ನಲ್ಲಿ ಉಪಕರಣ ಕೊಡಲಾಗಿದೆ. ಆದರೆ ಅದರಲ್ಲಿ ಅಷ್ಟು ಸುಲಭವಾಗಿ ತೆಗೆಯಲಾಗುವುದಿಲ್ಲ. ವಾಚ್ ರಿಪೇರಿ ಅಂಗಡಿಗೆ ಹೋಗಿ ಚೈನ್ ಅನ್ನು ನಮಗೆ ಬೇಕಾದ ಅಳತೆಗೆ ಸರಿಪಡಿಸಿಕೊಳ್ಳಬಹುದು.

ಬೌಲ್ಟ್ ಮಿರಾಜ್ ಸ್ಮಾರ್ಟ್ ವಾಚ್ ನಲ್ಲಿನ 1.39-ಇಂಚಿನ HD ಡಿಸ್ಪ್ಲೇ, ಮೆಟಾಲಿಕ್ ಶೆಲ್ ಹೊಂದಿದೆ. ಈ ಡಿಸ್ಪ್ಲೇ ಉತ್ತಮ ಸ್ಪರ್ಶ ಪ್ರತಿಕ್ರಿಯೆಯನ್ನು ನೀಡುತ್ತದೆ. 500 ನಿಟ್ಗಳ ಗರಿಷ್ಠ ಹೊಳಪು ಹೊಂದಿದೆ. ಡಿಸ್ ಪ್ಲೇ ಬಿಸಿಲಲ್ಲೂ ನೀಟಾಗಿ ಕಾಣುತ್ತದೆ. ವಾಚಿನ್ ಶೆಲ್ನ ಬಲಭಾಗದಲ್ಲಿ ಮೂರು ಗುಂಡಿಗಳಿವೆ. ಟಾಪ್ ಬಟನ್ ಅನ್ನು ಒತ್ತುವುದರಿಂದ ನೀವು ಎಲ್ಲಿದ್ದರೂ ಹೋಮ್ ಸ್ಕ್ರೀನ್ ಗೆ ಕೊಂಡೊಯ್ಯುತ್ತದೆ. ಸ್ಟ್ಯಾಂಡ್ಬೈನಲ್ಲಿರುವಾಗ ಗಡಿಯಾರದ ಡಿಸ್ ಪ್ಲೇ ಅನ್ನು ಚಾಲನೆಗೊಳಿಸಲು ಒತ್ತಬಹುದು. ವಾಚ್ನಲ್ಲಿ ಸ್ಪೋರ್ಟ್ ಮೋಡ್ಗಳನ್ನು ಪ್ರವೇಶಿಸಲು ಕೆಳಗಿನ ಬಟನ್ ಅನ್ನು ಬಳಸಬಹುದು. ಮಧ್ಯದ ಬಟನ್ ಕೂಡ ತಿರುಗುವ ಕೀ ಆಗಿದ್ದು, ಇದನ್ನು ಮೆನುವಿನ ಮೂಲಕ ಸ್ಕ್ರಾಲ್ ಮಾಡಲು ಅಥವಾ ವಿವಿಧ ಗಡಿಯಾರ ಫೇಸ್ ಗಳನ್ನು ಬದಲಾಯಿಸಲು ಬಳಸಬಹುದು. ಈ ಬಟನ್ ಅನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ವಾಯ್ಸ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಬಹುದು. ಶೆಲ್ನ ಎಡಭಾಗದಲ್ಲಿ ಯಾವುದೇ ಬಟನ್ ಇಲ್ಲ. ಶೆಲ್ ಅನ್ನು ತಿರುಗಿಸಿದಾಗ, ಫಲಕದ ಮಧ್ಯದಲ್ಲಿ ವಿವಿಧ ಆರೋಗ್ಯ ಮಾನಿಟರ್ಗಳು ಮತ್ತು ಎರಡೂ ತುದಿಯಲ್ಲಿ ಸ್ಪೀಕರ್ ಮತ್ತು ಮೈಕ್ರೊಫೋನ್ ಕಂಡುಬರುತ್ತದೆ.

ಈ ಸ್ಮಾರ್ಟ್ ವಾಚ್ನಲ್ಲಿ ನೀರು ನಿರೋಧಕಕ್ಕೆ IP67 ರೇಟಿಂಗ್ ಹೊಂದಿದೆ. ಇದರರ್ಥ ಸ್ಮಾರ್ಟ್ ವಾಚ್ 1 ಮೀ ವರೆಗೆ ನೀರು ನಿರೋಧಕವಾಗಿದೆ. ವಾಚ್ ಅನ್ನು ಆರಂಭ ಮಾಡಲು, ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ BoultFit ಅನ್ನು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ಅದರ ಜೊತೆ ವಾಚ್ ಅನ್ನು ಲಿಂಕ್ ಮಾಡಿ ಸಂಪರ್ಕಗೊಳಿಸಬೇಕು. ಇದು ಬ್ಲೂಟೂತ್ 5.3 ಅನ್ನು ಬೆಂಬಲಿಸುತ್ತದೆ ಮತ್ತು 10ಮೀವರೆಗೆ ವ್ಯಾಪ್ತಿ ಹೊಂದಿದೆ.

ಮಾರುಕಟ್ಟೆಯಲ್ಲಿನ ಹೆಚ್ಚಿನ ಆರೋಗ್ಯ ಟ್ರ್ಯಾಕರ್ಗಳಂತೆ, ಬೌಲ್ಟ್ ಮಿರಾಜ್ ನಿಮ್ಮ ರಕ್ತದ ಆಮ್ಲಜನಕದ ಮಟ್ಟ, ಹೃದಯ ಬಡಿತ ಟ್ರ್ಯಾಕ್ ಮಾಡುತ್ತದೆ. . SpO2 ಮತ್ತು ಹೃದಯ ಬಡಿತದ ಮಾಪನಗಳು ನಿಖರವಾಗಿವೆ, ಈ ಸ್ಮಾರ್ಟ್ ವಾಚ್ನಿಂದ ಮೂಲಭೂತ ಹಂತದ ಎಣಿಕೆ ಮತ್ತು ಹೈಕ್ ಟ್ರ್ಯಾಕಿಂಗ್ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಸ್ಮಾರ್ಟ್ ವಾಚ್ ಸಂಗ್ರಹಿಸಿದ ಹಂತ ಮತ್ತು ದೂರದ ಡೇಟಾ ಅತ್ಯಂತ ವಿಶ್ವಾಸಾರ್ಹವಾಗಿದೆ. ಇದು ಫುಟ್ಬಾಲ್, ಟೆನಿಸ್, ಯೋಗ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 120 ಕ್ಕೂ ಹೆಚ್ಚು ಕ್ರೀಡೆಗಳು ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್ ಮಾಡಬಹುದು.

Advertisement

ಬೌಲ್ಟ್ ಸ್ಮಾರ್ಟ್ ವಾಚ್ ಬಜೆಟ್ ವಿಭಾಗದಲ್ಲಿದ್ದರೂ ಅದರ ಅಪ್ಲಿಕೇಶನ್ ಬೆಂಬಲವು ಸಮರ್ಥವಾಗಿದೆ. ಹೆಚ್ಚಿನ ಎಂಟ್ರಿ ಲೆವೆಲ್ ಸ್ಮಾರ್ಟ್ವಾಚ್ ಗ ಳು ಇದರಲ್ಲಿ ದುರ್ಬಲವಾಗಿವೆ. ಅಪ್ಲಿಕೇಷನ್ ಸ್ಮಾರ್ಟ್ ವಾಚ್ ಮೂಲಕ ಸಂಗ್ರಹಿಸಲಾದ ಆರೋಗ್ಯ ಮತ್ತು ಫಿಟ್ನೆಸ್ ಡೇಟಾವನ್ನು ಒದಗಿಸುತ್ತದೆ. ನಿಮ್ಮ ಪ್ರಗತಿ ವರದಿಗಳನ್ನು ನೀವು ಸರಳ ಗ್ರಾಫ್ಗಳ ರೂಪದಲ್ಲಿ ವೀಕ್ಷಿಸಬಹುದು. 300 ಕ್ಕೂ ಹೆಚ್ಚು ವಾಚ್ ಫೇಸ್ ಗಳನ್ನು ಆಪ್ ಮೂಲಕ ಬದಲಿಸಿಕೊಳ್ಳಬಹುದು.

ಮಿರಾಜ್ ಬಜೆಟ್ ಸ್ಮಾರ್ಟ್ವಾಚ್ ಆಗಿದ್ದರೂ, ಆಲ್ ವೇಸ್ ಆನ್ ಡಿಸ್ಪ್ಲೇ ಮತ್ತು ಅಡಾಪ್ಟೇಬಲ್ ಬ್ರೈಟ್ನೆಸ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ ಪ್ಲೇ ಆಫ್ ಆಗಿದ್ದಾಗ ಸಕ್ರಿಯಗೊಳಿಸುವ ರೈಸ್ ಟು ವೇಕ್ ವೈಶಿಷ್ಟ್ಯವು ಸ್ಮಾರ್ಟ್ ವಾಚ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಬೌಲ್ಟ್ ಮಿರಾಜ್ ನೀಡುವ ಸಾಫ್ಟ್ವೇರ್ ಅನುಭವವು ತೃಪ್ತಿಕರವಾಗಿದೆ. ಬ್ಲೂಟೂತ್ ಕರೆ ವಾಚ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಒಳಾಂಗಣದಲ್ಲಿ ಕರೆ ಗುಣಮಟ್ಟವು ತೃಪ್ತಿಕರವಾಗಿದೆ.ಸ್ಮಾರ್ಟ್ ವಾಚ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತದೆ. ಹೆಚ್ಚು ಬಳಕೆ ಮಾಡಿದಾಗಲೂ ಕಡಿಮೆ ಎಂದರೆ, 6 ದಿನಗಳವರೆಗೆ ಬಾಳಿಕೆ ಬರುತ್ತದೆ. ಒಟ್ಟಾರೆಯಾಗಿ 1,799 ರೂ. ಬೆಲೆಯಲ್ಲಿ, ಬೌಲ್ಟ್ ಮಿರಾಜ್ ಅದರ ವರ್ಗದಲ್ಲಿ ಉತ್ತಮ ಸ್ಮಾರ್ಟ್ ವಾಚ್ ಗಳಲ್ಲಿ ಒಂದಾಗಿದೆ.

– ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next