Advertisement
ರಹಸ್ಯ: ಇಸ್ಪೀಟ್ ಪ್ಯಾಕಿನಿಂದ ಯಾವುದಾದರೂ ಇಪ್ಪತ್ತು ಕಾರ್ಡುಗಳನ್ನು ತೆಗೆದುಕೊಂಡು ಒಂದರ ಬೆನ್ನಿಗೆ ಇನ್ನೊಂದು ಕಾರ್ಡಿನ ಬೆನ್ನನ್ನು ಅಂಟಿಸಿ. ಆಗ ನಿಮಗೆ ಎರಡೂ ಬದಿಯಲ್ಲಿ ಬೇರೆ ಬೇರೆ ಮುಖವಿರುವ ಹತ್ತು ಕಾರ್ಡುಗಳು ಸಿಗುತ್ತವೆ. ಇಸ್ಪೀಟ್ ಪ್ಯಾಕಿನ ಮೇಲ್ಭಾಗದಲ್ಲಿ ಈ ಹತ್ತು ಕಾರ್ಡುಗಳನ್ನು ಮೊದಲೇ ಇಟ್ಟಿರಬೇಕು. ಮ್ಯಾಜಿಕ್ ಮಾಡುವಾಗ ಮೇಲಿನ ಹತ್ತು ಕಾರ್ಡುಗಳನ್ನು ಎಣಿಸಿ ತೆಗೆಯಿರಿ. ಎಣಿಸುವಾಗ ಕಾರ್ಡಿನ ಇನ್ನೊಂದು ಬದಿ ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಒಂದೊಂದೇ ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿ ನೆನಪಿಟ್ಟುಕೊಳ್ಳಲು ಹೇಳಿದ ಬಳಿಕ ನಿಮ್ಮ ಕೈಯಲ್ಲಿರುವ ಕಾರ್ಡುಗಳ ಗುಂಪನ್ನು ಶಫಲ್(ಮಿಕ್ಸ್) ಮಾಡುವ ನೆಪದಲ್ಲಿ ಉಪಾಯವಾಗಿ ಉಲ್ಟಾ ಮಾಡಿ. ನಂತರ ಒಂದೊಂದೇ ಕಾರ್ಡನ್ನು ಪ್ರೇಕ್ಷಕರಿಗೆ ತೋರಿಸಿದಲ್ಲಿ ಮೊದಲು ನೋಡಿದ ಯಾವುದೇ ಕಾರ್ಡು ಇರುವುದಿಲ್ಲ. ಯಾರೇ ಆದರೂ ಈ ನಿಮ್ಮ ಅದ್ಭುತ ಮ್ಯಾಜಿಕ್ ಟ್ರಿಕ್‌ಗೆ ದಂಗಾಗದಿರಲು ಸಾಧ್ಯವಿಲ್ಲ.