ಮುಂಬಯಿ: ಶನಿದೇವರು ಎಂದರೆ ನಮ್ಮನ್ನು ಶಿಕ್ಷಿಸುವವರು ಹಾಗೂ ರಕ್ಷಿಸುವವರೂ ಆಗಿದ್ದಾರೆ. ಮೊದಲು ನಮ್ಮನ್ನು ಪರೀಕ್ಷಿಸಿ ಕಷ್ಟ ಕೊಟ್ಟರೂ ಕೊನೆಗೆ ನಮ್ಮ ರಕ್ಷೆಯನ್ನು ಮಾಡುತ್ತಾರೆ. ಶನಿದೇವರು ಮನುಷ್ಯನಲ್ಲಿನ ಅಹಂಕಾರವನ್ನು ಹೊಡೆದೊಡಿಸಿ ಸನ್ಮಾರ್ಗವನ್ನು ತೋರಿಸುತ್ತಾರೆ. ಬದುಕಿನಲ್ಲಿ ಮನುಷ್ಯನಿಂದ ಎರಡು ಬಾರಿ ಏಳುವರೆ ಶನಿಕಾಟದ ಸಮಯ ಬರುತ್ತದೆ. ಈ ಸಮಯ ಕಳೆದ ಬಳಿಕ ಅಗ್ನಿಗೆ ಚಿನ್ನವನ್ನು ಸಪರ್ಪಿಸಿದಾಗ ಅದು ಹೇಗೆ ಶುದ್ಧವಾಗುತ್ತದೋ ಅದೇ ರೀತಿಯಲ್ಲಿ ನಮ್ಮಲ್ಲಿನ ಅಹಂಕಾರ ದೂರವಾಗಿ ಶರೀರ ಶುದ್ಧವಾಗುತ್ತದೆ. ಶನಿದೇವರನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿದರೆ, ಧರ್ಮ ಮಾರ್ಗದಲ್ಲಿ ಮುನ್ನಡೆದರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಮರೋಲ್ ಶ್ರೀ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಾಜೇಶ್ ಸಾಮಗ ಅವರು ನುಡಿದರು.
ಬೊರಿವಲಿ ಶ್ರೀ ಶನಿಮಹಾತ್ಮ ಪೂಜಾ ಮಿತ್ರ ಮಂಡಳಿಯ 15 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು 43 ನೇ ವಾರ್ಷಿಕ ಶ್ರೀ ಶನಿಗ್ರಂಥ ಪಾರಾಯಣದ ಸಂದರ್ಭದಲ್ಲಿ ಆಶೀರ್ವಚನ ನೀಡಿ ಅವರು ಅನುಗ್ರಹಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಮಂದಿರದ ಪ್ರಧಾನ ಅರ್ಚಕ ಪೆರ್ಡೂರು ಶ್ರೀ ವಿಷ್ಣು ಅಡಿಗ ಅವರ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಶನಿಶಾಂತಿ, ನವಕ ಕಲಶ ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ, ಮಹಾಪೂಜೆ, ಶನಿದೇವರ ಕಲಶ ಪ್ರತಿಷ್ಠಾಪನೆ, ರಂಗಪೂಜೆ, ಇತ್ಯಾದಿ ನೆರವೇರಿತು. ಪೂಜಾ ಕೈಂಕರ್ಯದಲ್ಲಿ ಬಾಲಕೃಷ್ಣ ಭಟ್, ಸದಾಶಿವ ಭಟ್, ರಾಜೇಶ್ ಸಾಮಗ ಅವರು ಸಹಕರಿಸಿದರು.
ಸುಮಾರು ಮೂರು ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ಆನಂತರ ಮಂಡಳಿಯ ಸದಸ್ಯರಿಂದ ಸಂಪೂರ್ಣ ಶ್ರೀ ಶನಿಗ್ರಂಥ ಪಾರಾಯಣ ನೆರವೇರಿತು. ವಾಚಕರಾಗಿ ನಾಗೇಶ್ ಕರ್ಕೇರ, ದಾಮೋದರ ತಿಂಗಳಾಯ, ಸೀತಾರಾಮ ಸನಿಲ್, ಕೃಷ್ಣ ಅಮೀನ್, ಅರ್ಥ ವಿವರಣೆಯಲ್ಲಿ ಕೇಶವ್ ಕಾಂಚನ್, ಗಿರಿಧರ ಸುವರ್ಣ, ಗೋವರ್ಧನ್ ಸುವರ್ಣ ಅವರು ಸಹಕರಿಸಿದರು. ಕು| ಪೂಜಾ ದೇವಾಡಿಗ ಅವರಿಂದ ಸ್ಯಾಕೊÕಫೋನ್ ವಾದನ ನಾಡೆಯಿತು. ಭುವಾಜಿಯಾಗಿ ಗಿರೀಶ್ ಕರ್ಕೇರ ಅವರು ಸಹಕರಿಸಿದರು.
ಮಂದಿರದ ಅಧ್ಯಕ್ಷ ಗೋವರ್ಧನ ಸುವರ್ಣ, ಉಪಾಧ್ಯಕ್ಷ ಸಂಜೀವ ಸಾಲ್ಯಾನ್, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್ ಕರ್ಕೇರ, ಕೋಶಾಧಿಕಾರಿ ಕೇಶವ ಕಾಂಚನ್, ಜತೆ ಕೋಶಾಧಿಕಾರಿ ಗಿರೀಶ್ ಕರ್ಕೇರ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮೋನಪ್ಪ ತಿಂಗಳಾಯ, ತಿಮ್ಮಪ್ಪ ಕೋಟ್ಯಾನ್, ರಘುನಾಥ್ ಸಾಲ್ಯಾನ್, ದಾಮೋದರ ತಿಂಗಳಾಯ, ಸುಧಾಕರ ಸನಿಲ್, ಅಮಿತಾ ಪುತ್ರನ್, ಗಿರಿಧರ ಸುವರ್ಣ, ಕೃಷ್ಣ ಅಮೀನ್, ದೇವೇಂದ್ರ ಸುರತ್ಕಲ್ ಹಾಗೂ ಸದಸ್ಯರುಗಳಾದ ವಿನೋದ್ ಸಾಲ್ಯಾನ್, ಗೋಪಾಲ್ ಪುತ್ರನ್, ಗಂಗಾಧರ ಸುವರ್ಣ, ರಾಮ ಸುವರ್ಣ, ಸೀತಾರಾಮ ಸನಿಲ್, ದಿವಾಕರ ಗೌಡ, ದಿನೇಶ್ ಕೋಟ್ಯಾನ್, ಮೋಹನ್ ಪೂಜಾರಿ, ಶಿವರಾಮ್ ಅಂಚನ್, ಮಹಿಳಾ ಸದಸ್ಯೆಯರು, ಪರಿಸರದ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮಂದಿರದ ಹಿರಿಯ ಸದಸ್ಯರುಗಳಾದ ತಿಮ್ಮಪ್ಪ ಕೋಟ್ಯಾನ್ ಮತ್ತು ಸೀತಾರಾಮ ಸನಿಲ್ ದಂಪತಿಗಳನ್ನು ಗೌರವಿಸಲಾಯಿತು. ಶ್ರೀ ಶನಿದೇವರಿಗೆ ಬೆಳ್ಳಿಯ ಪೀಠ, ಆಯುಧವನ್ನು ಸರ್ಪಿಸಿದ ದಾನಿ ಹಾಗೂ ಮಂದಿರದ ದಿವಾಕರ ಗೌಡ ದಂಪತಿಯನ್ನು ಗೌರವಿಸಲಾಯಿತು.