Advertisement

ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನ :ಯಕ್ಷಗಾನ ತಾಳಮದ್ದಳೆ

04:27 PM Jul 18, 2018 | |

ಮುಂಬಯಿ: ಬೊರಿವಲಿ ಪಶ್ಚಿಮದ ಜಯರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ ಆಶ್ರಯದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ತವರೂರ ಸುಪ್ರಸಿದ್ಧ ಕಲಾವಿದರಿಂದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ 
ತಾಳಮದ್ದಳೆ  ಜು. 15ರಂದು ಅಪರಾಹ್ನ  ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

Advertisement

ಮಧ್ಯಂತರದಲ್ಲಿ ಜರಗಿದ ಸಭಾಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದ ಮುಂಬಯಿ ಬಂಟ್ಸ್‌ ಸಂಘದ ನೂತನ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ ಇವರು ಮಾತನಾಡಿ, ದಶಕಗಳ ಹಿಂದೆ ಪ್ರೇಕ್ಷಕರ ಚಿಂತೆಯಲ್ಲಿದ್ದ ಯಕ್ಷಗಾನ ಬಯ ಲಾಟಗಳು ಇಂದು ಯುವ ಪ್ರತಿಭೆಗಳ ವಿನೂತನ ಆವಿಷ್ಕಾರದಿಂದ ಕಲಾಭಿಮಾನಿಗಳ ಸಂಖ್ಯೆ ವೃದ್ಧಿಸು ತ್ತಿದೆ. ಬದುಕಿನ ಚಿಂತನೆ-ಮಂಥನಗಳ ಪ್ರತಿಬಿಂಬ ಯಕ್ಷಗಾನವಾಗಿದೆ. ಯುವ ಮಹಿಳಾ ಭಾಗವತೆ ಕಾವ್ಯಾಶ್ರೀ ಅಜೇರು ಇವರ ಲಯ, ಜ್ಞಾನ, ಸಾಹಿತ್ಯದ ಇಂಪಾದ ಕಂಠ, ಸ್ಪಷ್ಟವಾದ ಉಚ್ಛಾರಣೆ, ಒಂದೇ ತಾಳದಲ್ಲಿ ವಿವಿಧ ಮಟ್ಟು, ಪದ್ಯಗಳ ನಡೆ ಬಿಡ್ತಿಗೆ ಮುಕ್ತಾಯಗಳು ಯಕ್ಷಗಾನದ ಘನಸ್ಥಿಕೆಯನ್ನು ಹೆಚ್ಚಿಸಿದೆ. ಯಕ್ಷಗಾನ ಕಂಡ ಅಪೂರ್ವ ತಾರೆ ಕಾವ್ಯಶ್ರೀ ಅಜೇರು ಅವರಿಂದ ಯಕ್ಷಗಾನ ವಿಶ್ವ ವಿಖ್ಯಾತಿಯಾಗಲಿ. ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರ ಅಜೆಕಾರು ಕಲಾಭಿಮಾನಿ ಬಳಗದ ಕಲಾ ಸೇವೆ ಇತರರಿಗೆ ಮಾದರಿ  ಎಂದರು.
ಸಮಾರಂಭದಲ್ಲಿ ಯಕ್ಷಗಾನದ ಯುವ ಪ್ರತಿಭೆ ಭಾಗವತಿಕೆ ಕಾವ್ಯಶ್ರೀ ಅವರನ್ನು ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಆಡಳಿತ ಮೊಕ್ತೇಸರ ಕಣಂ ಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ದಂಪತಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಯೊಂದಿಗೆ ಸಮ್ಮಾನಿಸಿ ಶುಭಹಾರೈಸಿದರು. ಜೀವ ವಿಮೆ ನಿಗಮದ ಅಧಿಕಾರಿ ಅಶೋಕ್‌ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಮಂದಿರದ ವಂಶಸ್ಥ ಸ್ಥಾಪಕ ಆಡಳಿತ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ದಂಪತಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಜಯಪಾಲಿ ಅಶೋಕ್‌ ಶೆಟ್ಟಿ ಸಹಕರಿಸಿದರು.

ಕಲಾಪೋಷಕರಾದ ಶಿವರಾಮ ಜಿ. ಶೆಟ್ಟಿ ದಂಪತಿ, ಕಮಲಾಕ್ಷ ಕಾಮತ್‌ ದಂಪತಿ, ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಅಶೋಕ್‌ ಶೆಟ್ಟಿ, ಸಲಹೆಗಾರ್ತಿ ವಿನೋದಾ ಡಿ. ಶೆಟ್ಟಿ, ಶೈಲಜಾ ಎ. ಶೆಟ್ಟಿ, ಪತ್ತನಾಜೆ ತುಳುಚಿತ್ರದ ನಿರ್ದೇಶಕ ಕಲಾಜಗತ್ತು ವಿಜಯ ಕುಮಾರ್‌ ಶೆಟ್ಟಿ ತೋನ್ಸೆ, ಗಂಗಾಧರ ಕೋಟ್ಯಾನ್‌, ವಿಠಲ್‌ ಪ್ರಭು, ಅಜೆಕಾರು ಬಾಲಕೃಷ್ಣ ಶೆಟ್ಟಿ, ಲೇಖಕ ಚಂದ್ರಹಾಸ ಸುವರ್ಣ, ಪ್ರೇಮನಾಥ್‌ ಶೆಟ್ಟಿ, ಸಿಎ ಶ್ರೀನಿವಾಸ ಪುತ್ರನ್‌, ವೆಂಕಟರಮಣ ತಂತ್ರಿ ಮೊದಲಾದವರನ್ನು ಶ್ರೀ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಕಲಾಪೋಷಕರಾದ ಬಾಲಕೃಷ್ಣ ರೈ, ರಮಾನಾಥ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾ ಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.  ಇದೇ ಸಂದರ್ಭ ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ನಡೆಯಿತು.  ಭಾಗವತರಾಗಿ ಕು| ಕಾವ್ಯಶ್ರೀ ಅಜೇರು, ಚೆಂಡೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು, ಮದ್ದಳೆ
ಯಲ್ಲಿ ಆನಂದ ಶೆಟ್ಟಿ ಇನ್ನ, ಅರ್ಥದಾರಿಗಳಾಗಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ದಿನೇಶ್‌ ಶೆಟ್ಟಿ ಕಾವಳಕಟ್ಟೆ, ಹರೀಶ್‌ ಭಟ್‌ ಬೊಳಂತಿಮೊಗರು, ಶ್ಯಾಮ್‌ ಭಟ್‌ ಪಕಳಕುಂಜ, ಅವಿ ನಾಶ್‌ ಶೆಟ್ಟಿ ಉಬರಡ್ಕ ಉಪಸ್ಥಿತರಿದ್ದರು.  ದಿನೇಶ್‌ ಶೆಟ್ಟಿ ವಿಕ್ರೋಲಿ ಸಹಕರಿಸಿದರು. 

ಸಾಂಪ್ರದಾಯಿಕ ಚೌಕಟ್ಟಿನೊಳಗೆ ಯಕ್ಷಗಾನದ ಕಲಾ ಸೇವೆಗೈಯುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ದಣಿವರಿಯದ ಸಾಧನೆ, ಯಾವುದೇ ರೀತಿಯ ಪ್ರತಿಫಲಾಪೇಕ್ಷತೆ ಇಲ್ಲದೆ ಸುಮಾರು 2 ದಶಕಗಳ ಸೇವೆಯಿಂದ ರಾಮಾಯಣ, ಮಹಾಭಾರತ ಮೊದಲಾದ ಪ್ರಸಂಗಗಳ ಸಮಗ್ರ ಪರಿಚಯ ನಗರ ಮತ್ತು ಉಪನಗರಗಳ ಜನತೆಗೆ ಆಗಿದೆ. ಯಕ್ಷಗಾನ ಬಯಲಾಟ, ತಾಳಮದ್ದಳೆ ಬದುಕಿನ ಚಿಂತನೆಗಳ ಕೋಶವಾಗಿದೆ. ಅಜೆಕಾರು ಕಲಾಭಿಮಾನಿ ಬಳಗದ ಕಲಾಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ
 – ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ (ಮೊಕ್ತೇಸರರು:  ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ಪಶ್ಚಿಮ)

Advertisement
Advertisement

Udayavani is now on Telegram. Click here to join our channel and stay updated with the latest news.

Next