Advertisement

ಬೊರಿವಲಿ ಮಹಿಷ ಮರ್ದಿನಿ ದೇವಸ್ಥಾನ: ನವರಾತ್ರಿ ಉತ್ಸವಕ್ಕೆ ಚಾಲನೆ

06:36 PM Oct 01, 2019 | Suhan S |

ಮುಂಬಯಿ, ಸೆ. 30: ಬೊರಿವಲಿ ಪಶ್ಚಿಮದ ವಜೀರ ನಾಕಾದ, ಶ್ರೀ ಕ್ಷೇತ್ರ ಜೈರಾಜ್‌ ನಗರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ 30ನೇ ವಾರ್ಷಿಕ ನವರಾತ್ರಿ ಮಹೋತ್ಸವ ಸೆ. 29ರಂದು ಪ್ರಾರಂಭಗೊಂಡಿದ್ದು, ಅ. 8ರವರೆಗೆ ವಿವಿಧ  ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಸೆ. 29 ರಂದು ಬೆಳಗ್ಗೆ 7.30ರಿಂದ ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ತನು ತಂಬಿಲ, ದೇವತಾ ಪ್ರಾರ್ಥನೆ, ಗಣಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಪ್ರಧಾನ ಹೋಮ, ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ, ಸಂಜೆ 5ರಿಂದ ಶ್ರೀ ವಿಟಲ ಭಜನಾ ಮಂಡಳಿ ಮೀರಾರೋಡ್‌ ಇವರಿಂದ ಭಜನೆ, ಮಹಾಪೂಜೆ, ನವರಾತ್ರಿ ಪೂಜೆ, ಮಂಟಪ ರಂಗಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು ದಿನಪೂರ್ತಿ ನಡೆದ ಪೂಜಾ ಕೈಂಕರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು.

ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರ ವಂಶಸ್ಥರಾದ ಶ್ರೀಮತಿ ಮತ್ತು ಶ್ರೀ ಜಯರಾಜ್‌ ಶ್ರೀಧರ ಶೆಟ್ಟಿ, ಆಡಳಿತ ಮೊಕ್ತೇಸರ ಶ್ರೀಮತಿ ಮತ್ತು ಶ್ರೀ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ, ಮೊಕ್ತೇಸರ ಶ್ರೀಮತಿ ಜಯಪಾಲಿ ಎ. ಶೆಟ್ಟಿ ಹಾಗೂ ಅರ್ಚಕ ವೃಂದದವರು, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶ್ರೀ ಮಹಿಷ ಮರ್ದಿನಿ ಭಜನಾ

ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಅ.1 ರಿಂದ ಅ. 7ರವರೆಗೆ ರಾತ್ರಿ 7.30ರಿಂದ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವರಿಂದ ಭಜನೆ, ಮಹಾಪೂಜೆ, ನವರಾತ್ರಿ ಪೂಜೆ, ಮಂಟಪ ರಂಗಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸೆ. 30ರಂದು ಸಂಜೆ 4ರಿಂದ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಬೊರಿವಲಿ  ಇವರಿಂದ ಭಜನೆ, ಅ. 1ರಂದು ಸಂಜೆ 4ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬೊರಿವಲಿ ಮತ್ತು ಶ್ರೀ ಮದ್ವೇಶ ಭಜನಾ ಮಂಡಳಿ ಸಾಂತಾಕ್ರೂಜ್‌ ಪೂರ್ವ ಇವರಿಂದ ಭಜನೆ, ಅ.2 ರಂದು ಸಂಜೆ 4ರಿಂದ ಶ್ರೀ ಅಮ್ರಿಣಿ ಭಜನಾ ಮಂಡಳಿ ಮತ್ತು ಶ್ರೀಮತಿ ಚಂದ್ರಿಕಾ ಭಟ್‌ ಮತ್ತು ಬಳಗದವರಿಂದ ಭಜನೆ, ಅ. 3ರಂದು ಸಂಜೆ 4ರಿಂದ ಸಂಧ್ಯಾ ಪಿಶೋಡಿ ಬಳಗದ ಶಾರದಾ ಮ್ಯೂಸಿಕಲ್‌ ವತಿಯಿಂದ ಮತ್ತು ಸುಂದರಿ ಗೋಪಾಲ್‌ ಕೃಷ್ಣನ್‌ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅ. 4ರಂದು ಸಂಜೆ 4.30ರಿಂದ ಸಾರ್ವಜನಿಕ ಶ್ರೀ ದುರ್ಗಾನಮಸ್ಕಾರ ಪೂಜೆ, ತೀರ್ಥ ಪ್ರಸಾದ ವಿತರಣೆ, ಅ. 5ರಂದು ಸಂಜೆ 4.30ರಿಂದ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯಿಂದ ಭಜನಾ ಕಾರ್ಯಕ್ರಮ, ಅ. 6 ರಂದು ಬೆಳಗ್ಗೆ 9.30ರಿಂದ ಸಾರ್ವಜನಿಕ ಚಂಡಿಕಾಯಾಗ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ. ಅ. 7ರಂದು ರಾತ್ರಿ 9.30ರಿಂದ ಸಾರ್ವಜನಿಕ ಮಹಾರಂಗ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ, ಅ. 8ರಂದು ಬೆಳಗ್ಗೆ 9.30 ರಿಂದ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯವರಿಂದ ಭಜನೆ, ತುಲಾಭಾರ ಸೇವೆ, ದಸರಾ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದ್ದು, ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಇದೇ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಶ್ರೀ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

 ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next