Advertisement
ಧಾರ್ಮಿಕ ಕಾರ್ಯಕ್ರಮವಾಗಿ ಅಶ್ವ ತ್ಥದಡಿ ಗರಡಿಯಲ್ಲಿ ಕಲಶ ಪ್ರತಿಷ್ಠೆ, ರಾತ್ರಿ ಅಗೆಲು ತಂಬಿಲ, ಬೈದರ್ಕಳ ದರ್ಶನದೊಂದಿಗೆ ವಾರ್ಷಿಕ ನೇಮೋತ್ಸಕ್ಕೆ ಚಾಲನೆ ನೀಡಲಾಗಿದ್ದು ಜ. 25 ರಂದು ಬೆಳಗ್ಗೆ ಗರಡಿಯಲ್ಲಿ ಗಣಹೋಮ, ದುರ್ಗಾಪೂಜೆ, ರಾತ್ರಿ ಬೈದರ್ಕಳ ನೇಮೋತ್ಸವ, ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಳ್ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು. ಸುಕುಮಾರ್ ಭಟ್ ಬೈಕಲ ಅವರ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಲಾಯಿತು.
Related Articles
Advertisement
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಲಕ್ಷ¾ಣ್ ಬಿ. ಬೆಳುವಾಯಿ, ಗೌರವ ಕೋಶಾಧಿಕಾರಿ ರಘು ಕೆ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಸದಾಶಿವ ಡಿ. ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಆರ್. ಶೆಟ್ಟಿ, ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ನರ್ಸಪ್ಪ ಕೆ. ಮಾರ್ನಾಡ್, ಕಾರ್ಯದರ್ಶಿ ಜಯರಾಮ ಎಸ್. ಪೂಜಾರಿ, ಟ್ರಸ್ಟಿಗಳಾದ, ವಾಸು ಕೆ. ಪೂಜಾರಿ, ಜಯರಾಮ ಎಸ್. ಪೂಜಾರಿ, ಆನಂದ್ ಜಿ. ಶೆಟ್ಟಿ, ದಿನಕರ್ ಜಿ. ಪವಾರ್, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿ ಜಯರಾಮ ಪೂಜಾರಿ, ಜೊತೆ ಕಾರ್ಯದರ್ಶಿ ಲಿಠಲ ಎಚ್. ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಪೂಜಾರಿ, ಗಣೇಶ್ ಆರ್. ಸುವರ್ಣ, ರಘು ಎಂ. ಬಂಗೇರ, ರಮೇಶ್ ಡಿ. ಕೋಟ್ಯಾನ್, ಮಹಾಬಲ ಉದ್ಯಾವರ, ದಾಮೋದರ ಪುತ್ರನ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂ ಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ. ಪೂಜಾರಿ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದರು. ಅಧ್ಯಕ್ಷ ಶೇಖರ್ ಇಂದು ಸಾಲ್ಯಾನ್ ಸ್ವಾಗತಿಸಿ, ಅತಿಥಿ ಗಳನ್ನು ಪುಷ್ಪಗುಚ್ಚ, ಪ್ರಸಾದವನ್ನಿತ್ತು ಗೌರವಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಬಿ. ಬಂಗೇರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಿತ್ರ-ವರದಿ : ರೋನ್ಸ್ ಬಂಟ್ವಾಳ್