Advertisement

ಪುಷ್‌ ಅಪ್‌ ಮಾಡಿ ಫಿಟ್ನೆಸ್ ಸಾಬೀತು ಪಡಿಸಿದ ಯುಕೆ ಪ್ರಧಾನಿ

12:23 PM Jun 30, 2020 | sudhir |

ಲಂಡನ್‌: ಇಡೀ ವಿಶ್ವವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಕೋವಿಡ್‌-19 ವಿವಿಧ ದೇಶಗಳ ಜನರು ಮತ್ತು ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಹೊಂಚು ಹಾಕುತ್ತಿದೆ. ಆದರೆ ಸಾಕಷ್ಟು ಜನರು ಮುಂಜಾಗ್ರತ ಕ್ರಮ ಕೈಗೊಂಡು ಕೊರೊನಾವನ್ನು ಒದ್ದೊಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಕೂಡ ಹೊರತಾಗಿಲ್ಲ.
ಈ ಹಿನ್ನಲೆಯಲ್ಲಿ ತಾನು ಆರೋಗ್ಯ ಮತ್ತು ಫಿಟ್‌ ಆಗಿದ್ದೇನೆ ಎಂದು ದೃಢಪಡಿಸಲು ಬೋರಿಸ್‌ ಜಾನ್ಸನ್‌ ಪುಷ್‌ ಅಪ್‌ ಮಾಡಿರುವುದು ಸುದ್ದಿಯಾಗಿದೆ.

Advertisement

ಎಪ್ರಿಲ್‌ ತಿಂಗಳಲ್ಲಿ ಕೋವಿಡ್‌-19 ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಪ್ರಧಾನಿ ಬೋರಿಸ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಇದೀಗ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೋಂಕಿನಿಂದ ಗುಣಮುಖರಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪುಷ್‌ ಅಪ್‌ ಮಾಡಿ ತೋರಿಸುವ ಮೂಲಕ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ಸಾಬೀತುಪಡಿಸಿದ್ದಾರೆ.

ಇನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೂ ಇದೇ ರೀತಿ ಮೇಲೆದ್ದು ಬರಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅವರು ತಿಳಿಸಿದ್ದು, ಪ್ರಧಾನಿಯ ಈ ಪುಷ್‌ ಅಪ್‌ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಯುಕೆ ಪಾಲಿಗೆ ವಿಪತ್ತು
ಕೋವಿಡ್ ವೈರಸ್‌ ಬಿಕ್ಕಟ್ಟು ಯುನೈಟೆಡ್‌ ಕಿಂಗ್‌ಡಂ ಪಾಲಿಗೆ ವಿಪತ್ತಾಗಿ ಪರಿಣಮಿಸಿದೆ. ಆದರೆ ಈ ಪ್ರಕರಣದ ಸಂಬಂಧ ನಾವು ತೆಗೆದುಕೊಂಡಿರುವ ತಪ್ಪು ನಿರ್ಧಾರಗಳ ಬಗ್ಗೆ ತನಿಖೆ ನಡೆಸಲು ಇದು ಸರಿಯಾದ ಸಮಯವಲ್ಲ ಎಂದು ಯುಕೆ ಪ್ರಧಾನಮಂತ್ರಿ ಬೋರಿಸ್‌ ಜಾನ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ಇದು ನಮ್ಮ ಪಾಲಿಗೆ ಒದಗಿಬಂದ ವಿಪತ್ತು ಎಂದು ಜಾನ್ಸನ್‌ ಟೈಮ್ಸ್‌ ರೇಡಿಯೊಗೆ ತಿಳಿಸಿದರು. ಕೋವಿಡ್ ಉಂಟುಮಾಡಿದ ಅನಿರೀಕ್ಷಿತ ಹೊಡೆತವು ದುಃಸ್ವಪ್ನವೆಂದು ತಿಳಿಯೋಣ. ಈ ಹೊಡೆತದಿಂದ ಜನರು ಆಘಾತಕ್ಕೆ ಒಳಗಾಗಿರುವುದು ನಿಜ ಎಂದವರು ತಿಳಿಸಿದರು. ಯುಕೆಯಲ್ಲಿ ಇಷ್ಟರವರೆಗೆ 3,12,000 ಮಂದಿಗೆ ಸೋಂಕು ತಗಲಿದ್ದು 43,600 ಮಂದಿ ಮೃತಪಟ್ಟಿದ್ದಾರೆ.
ಪ್ರಯಾಣಿಕರಿಗೆ ನಿರ್ಬಂಧ ತೆರವು ಕಡಿಮೆ ಅಪಾಯವಿರುವ ದೇಶಗಳಿಂದ ಬರುವ  ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್‌ ನಿಯಮ ತೆರವುಗೊಳಿಸಲು ಯುಕೆ ಯೋಚಿಸು ತ್ತಿದೆ. ಮುಂದಿನ ವಾರ ಈ ಬಗ್ಗೆ ಯುಕೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ.

Advertisement

ಕ್ವಾರಂಟೈನ್‌ ಬದಲು ಯುಕೆ ಸರಕಾರ ಟ್ರಾಫಿಕ್‌ ಲೈಟ್‌ ನಿಯಮ ಜಾರಿ ಮಾಡಲಿದೆ. ಈ ನಿಯಮದಂತೆ ಸೋಂಕಿನ ಪ್ರಮಾಣದ ಆಧಾರದಲ್ಲಿ ದೇಶಗಳನ್ನು ಜೋಡಿಸ ಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next