ಲಂಡನ್: ಯುನೈಟೆಡ್ ಕಿಂಗ್‌ಡಂನ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ವಿತ್ತ ಸಚಿವ ರಿಷಿ ಸುನಕ್‌ಗೆ ಅಲ್ಲಿನ ಪೊಲೀಸ್ ಇಲಾಖೆ ದಂಡ ವಿಧಿಸುವ ಸಾಧ್ಯತೆಯಿದೆ.
ಈ ಇಬ್ಬರೂ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಮುನ್ನೆಚ್ಚರಿಕಾ ನಿಯಮವನ್ನು ಉಲ್ಲಂಘಿಸಿರುವ ಹಿನ್ನೆಲೆ ದಂಡ ವಿಧಿಸಲಾಗುವುದು ಎನ್ನಲಾಗಿದೆ.
ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ನಡೆಸಲಾಗಿರುವ 12 ಕಾರ್ಯಕ್ರಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ಬೋರಿಸ್ ಜಾನ್ಸನ್ ಅವರ ಕಚೇರಿಯೊಳಗೇ ನಡೆದ ಅವರ ಸರ್‌ಪ್ರೈಸ್ ಬರ್ತ್‌ಡೇ ಪಾರ್ಟಿ ಕೂಡ ಒಂದು ಎನ್ನಲಾಗಿದೆ.
ಇದನ್ನೂ ಓದಿ:ಈಶ್ವರಪ್ಪ ರಾಜೀನಾಮೆ ಕೊಡಲೇಬೇಕು: ಸಿದ್ದರಾಮಯ್ಯ
ಸರ್ಕಾರವೇ ಮಾಡಿರುವ ನಿಯಮವನ್ನು ಸರ್ಕಾರದ ನಾಯಕರೇ ಉಲ್ಲಂಘಿಸಿರುವುದರಿಂದ ಈ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.