Advertisement
ಟಿ20 ನೋಡಲು ಹೆಚ್ಚು ಇಷ್ಟಇತ್ತೀಚಿನ ವರ್ಷಗಳಲ್ಲಿ ವಿಶ್ವಕ್ಕೆ ಟಿ20 ಕೂಟ ಪರಿಚಯಗೊಂಡ ಬಳಿಕ ಏಕದಿನ, ಟೆಸ್ಟ್ ಕ್ರಿಕೆಟ್‌ನ ಬಲ ಕುಸಿಯುತ್ತಾ ಹೋಯಿತು. ಭಾರತದಲ್ಲಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್), ವಿಂಡೀಸ್‌ನಲ್ಲಿ ಕೆರಿಬಿಯನ್ ಲೀಗ್, ಪಾಕಿಸ್ತಾನದಲ್ಲಿ ಪಾಕ್ ಸೂಪರ್ ಲೀಗ್, ಬಾಂಗ್ಲಾದಲ್ಲಿ ಬಾಂಗ್ಲಾ ಕ್ರಿಕೆಟ್ ಲೀಗ್, ಆಸ್ಟ್ರೇಲಿಯದಲ್ಲಿ ಬಿಗ್‌ಬಾಷ್ ಟಿ20, ಹೀಗೆ ಸಾಲು…ಸಾಲು… ಕೂಟಗಳು ವಿಶ್ವಕ್ಕೆ ಪರಿಚಿತಗೊಂಡು ಯಶಸ್ವಿಯಾಗಿ ಆಯೋಜನೆಗೊಂಡಿವೆ. ಟಿ20 ಬರುವ ಮೊದಲು ಏಕದಿನ ಕ್ರಿಕೆಟ್ ಕೂಟವನ್ನೇ ಕಾದು ನೋಡುತ್ತಿದ್ದವರು ಇದೀಗ 50 ಓವರ್‌ಗಳ ಸುದೀರ್ಘ ಕ್ರಿಕೆಟ್ ಕೂಟವನ್ನು ನೋಡಲು ಇಚ್ಛಿಸುತ್ತಿಲ್ಲ. ನಮಗೆ ಏಕದಿನ ಕ್ರಿಕೆಟ್ ಕೂಟಕ್ಕಿಂತ ಕಡಿಮೆ ಸಮಯದಲ್ಲಿ ಮುಗಿಯುವ, ಏಕದಿನ, ಟೆಸ್ಟ್‌ಗಿಂತ ಹೆಚ್ಚು ರೋಚಕತೆ ಇರುವ ಟಿ20 ನೋಡಲು ಇಷ್ಟ ಎನ್ನುತ್ತಾರೆ. ಇದೆಲ್ಲ ಕಾರಣಗಳು ಪರೋಕ್ಷವಾಗಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕೂಟದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಸಾಂಪ್ರದಾಯಿಕ ಟೆಸ್ಟ್ ಕೂಟವನ್ನು ವೀಕ್ಷಿಸಲು ಈಗ ಜನರೇ ಸ್ಟೇಡಿಯಂ ಕಡೆಗೆ ಬರುತ್ತಿಲ್ಲ. ಒಂದು ಪಂದ್ಯದ ಫಲಿತಾಂಶಕ್ಕಾಗಿ ಕನಿಷ್ಠ ಎಂದರೂ 3 ದಿನ ಕಾಯಲೇ ಬೇಕು, ಹೀಗೇ ಮುಂದುವರಿದರೆ ಮುಂದೊಂದು ದಿನ ಟೆಸ್ಟ್ ಕೂಟವನ್ನೇ ನಿಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಟೆಸ್ಟ್ ಕೂಟದಲ್ಲಿ ಕೆಲವೊಂದು ಬದಲಾ ವಣೆ ಮಾಡಿ. ಹೊಸತನದೊಂದಿಗೆ ಟೆಸ್ಟ್ ನಡೆಸಬೇಕು ಎನ್ನುವ ಒತ್ತಾಯ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಿದೆ.• ಚುಟುಕು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆ ನೀಡಿರಬಹುದು. ಆದರೆ ಮೂಲ ಕೂಟಗಳ ಜನಪ್ರಿಯತೆಯನ್ನು ಕಸಿದಿದೆ ಎಂದರೆ ತಪ್ಪಾಗಲಾರದು. ಟಿ20 ಭರಾಟೆಯಿಂದಾಗಿ ಇಂದು ಟೆಸ್ಟ್, ಏಕದಿನ ಕೂಟಗಳು ಮಂಕಾಗಿ ನಡೆಯುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
Related Articles
ವಿಶ್ವಕಪ್ ಕೂಟಕ್ಕೆ ಇಂಗ್ಲೆಂಡ್ ಹಾಗೂ ವೇಲ್ಸ್ ವಿಶ್ವಕಪ್ ಕೂಟಕ್ಕೆ ಆಯೋಜನೆ ಆತಿಥ್ಯ ಪಡೆದುಕೊಂಡಿದೆ. ಯಶಸ್ವಿಯಾಗಿ ಕೂಟವನ್ನು ಆಯೋಜಿಸಲು ಸಂಘಟಕರು ಪಣತೊಟ್ಟರೂ ಮಳೆರಾಯ ಅವಕಾಶ ನೀಡುತ್ತಿಲ್ಲ.
Advertisement
ಇಂಗ್ಲೆಂಡ್‌ನಲ್ಲಿ ಮಳೆಗಾಲ ಆರಂಭವಾಗಿದೆ. ಮಳೆ ಸುರಿಯುತ್ತಿದೆ. ಇದರಿಂದ ವಿವಿಧ ಪಂದ್ಯಗಳ ಮೇಲೆ ಹೊಡೆತ ಬಿದ್ದಿದೆ. ಜೂ.7ರಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಬ್ರಿಸ್ಟಲ್‌ನಲ್ಲಿ ಆಯೋಜನೆಗೊಂಡಿತ್ತು. ಆದರೆ ದಿನವಿಡೀ ಸುರಿದ ಮಳೆಯಿಂದ ಪಂದ್ಯ ಒಂದೂ ಎಸೆತ ಕಾಣದಂತೆ ರದ್ದಾಯಿತು. ಜೂ.10ರಂದು ಸೌಥಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ನಡುವೆ ಪಂದ್ಯ ಆರಂಭವಾಗಿ ದಕ್ಷಿಣ ಆಫ್ರಿಕಾ 29 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಲಾರಂಭಿಸಿತು, ಕೊನೆಗೂ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಉಭಯ ತಂಡಗಳಿಗೆ 1-1 ಅಂಕ ಹಂಚಲಾಯಿತು. ಮರು ದಿನವೇ (ಜೂ.11) ಬಾಂಗ್ಲಾ-ಶ್ರೀಲಂಕಾ ನಡುವಿನ ಪಂದ್ಯ ಕೂಡ ಮಳೆಗೆ ಬಲಿಯಾಯಿತು. ಒಟ್ಟಾರೆ 3 ಪಂದ್ಯಗಳು ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. ನಡೆದ ಕೆಲವು ಪಂದ್ಯಗಳಿಗೂ ಮಳೆ ಅಡ್ಡಗಾಲು ಹಾಕಿತ್ತು. ಇದರಿಂದಾಗಿ ಕ್ರೀಡಾಂಗಣದ ಕಡೆಗೆ ಹೆಚ್ಚಿನ ಜನ ಬಂದಿಲ್ಲ. ಒಟ್ಟಾರೆ ಐಸಿಸಿ ವಿಶ್ವಕಪ್ ಆಯೋಜನೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಳೆಗೂ ಮುನ್ನ ಅಥವಾ ನಂತರದ ದಿನಗಳಲ್ಲಿ ಕೂಟ ಆಯೋಜಿಸಿದ್ದರೆ ಜನರನ್ನು ಹೆಚ್ಚು ಕರೆತರಬಹುದಿತ್ತು.