ಯಳಂದೂರು: ಗಂಗಾ ಕಲ್ಯಾಣ ಯೋಜನೆಯಡಿ 2017-18ನೇ ಸಾಲಿನಲ್ಲಿ ಕೊರೆಸಿರುವ ಕೊಳವೆ ಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡದಿರುವ ಸೆಸ್ಕ್ ಕ್ರಮಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸಾಮಾನ್ಯ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 183 ಮಂದಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸೆಸ್ಕ್ನ ಎಇಇ ಸುರೇಶ್‌ಕುಮಾರ್ ಪ್ರತಿ ಕ್ರಿಯಿಸಿ, ಇದಕ್ಕೆ ಹಲವು ನಿಯಮಗಳಿವೆ.
ಇಲಾಖೆ ಯಿಂದ ಗುತ್ತಿಗೆ ಪಡೆದಿರುವ ವ್ಯಕ್ತಿ ಇನ್ನೂ ಕೆಲವು ದಾಖಲೆ ಗಳನ್ನು ನೀಡಿಲ್ಲ. ತಾಂತ್ರಿಕ ತಜ್ಞರ ವರದಿಯನ್ನು ಮೈಸೂ ರಿನ ತಂಡ ಬಂದು ಪರಿಶೀಲಿಸಿ ವರದಿ ನೀಡಿದ ಮೇಲೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ವಿವರಿಸಿದರು. ತಾಲೂಕಿನಲ್ಲಿ ಬಿಪಿಎಲ್‌ಗೆ ಅರ್ಜಿ ಸಲ್ಲಿ ಸಿದ್ದ 229 ಕುಟುಂಬಗಳಿಗೂ ಕಾರ್ಡ್ ವಿತರಿಸಲಾಗಿದೆ.
ಇದರೊಂ ದಿಗೆ ಎಪಿಎಲ್ ಅರ್ಜಿದಾರರಿಗೂ 129 ಕಾರ್ಡ್ ವಿತರಿಸಲಾಗಿದೆ. ಇನ್ನೂ ಮೂವರಿಗೆ ನೀಡಿದರೆ ಇದೂ ಪೂರ್ಣಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು. ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜು ಮಾತನಾಡಿ, ಸರ್ಕಾರಿ ಆದೇಶ ಬಂದ ನಂತರ ಪಶುಭಾಗ್ಯ ಹಾಗೂ 240 ಮಂದಿಗೆ ಕೋಳಿಗಳನ್ನು ವಿತರಿಸಲಾಗುವುದು, ಜನಪ್ರತಿನಿಧಿಗಳು ಈ ಬಗ್ಗೆ ಪಟ್ಟಿ ನೀಡುವಂತೆ ಮನವಿ ಮಾಡಿದರು
. ಸಭೆಯಲ್ಲಿ ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಭಾಗ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಸಿದ್ದರಾಜು, ಶಾರದಾಂಬಾ, ಮಲ್ಲಾಜಮ್ಮ, ಮಣಿ, ಪದ್ಮಾವತಿ ಇಒ ರಾಜು ಇತರರಿದ್ದರು.