Advertisement

ಕೊಳವೆ ಬಾವಿ ಕೊರೆಸಲು ಅನುಮತಿ ಕಡ್ಡಾಯ : ಹಿರಿಯ ಭೂವಿಜ್ಞಾನಿಗೆ ಅರ್ಜಿ ಸಲ್ಲಿಸಲು ಸೂಚನೆ

11:24 AM Sep 03, 2020 | sudhir |

ರಾಮನಗರ: ಜಿಲ್ಲೆಯಲ್ಲಿ ಹೆಚ್ಚು ಅಂತರ್ಜಲ ಬಳಸುವ ತಾಲೂಕುಗಳೆಂದು ಗುರುತಿಸಲಾಗಿರುವ ರಾಮನಗರ ಮತ್ತು
ಕನಕಪುರ ತಾಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಇಲ್ಲವೇ ತೆರೆದ ಬಾವಿ ಕೊರೆಸಲು ಅನುಮತಿ ಪಡೆದುಕೊಳ್ಳುವುದನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಡ್ಡಾಯಗೊಳಿಸಿದೆ.

Advertisement

ಅಂತರ್ಜಲ ಸಂಪನ್ಮೂಲ ಮೌಲೀಕರಣದ ಅನುಸಾರ ಜಿಲ್ಲೆಯಲ್ಲಿ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಹೆಚ್ಚು ಅಂತರ್ಜಲದ ಬಳಕೆಯಾಗುತ್ತಿದೆ. ಹೀಗಾಗಿ ಈ ಎರಡೂ ತಾಲೂಕುಗಳಲ್ಲಿ ಹೊಸದಾಗಿ ಕೊಳವೆ ಬಾವಿ ಇಲ್ಲವೇ ತೆರೆದ ಬಾವಿ ಕೊರೆ ಸಲು ರಾಮನಗರ ಜಿಲ್ಲಾ ಪ್ರಾಧಿಕಾರದಿಂದ ಅನುಮತಿ ಕಡ್ಡಾಯವಾಗಿದೆ.

ನೋಂದಣಿ: ಈಗಾಗಲೇ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಕೊಳವೆ ಇಲ್ಲವೇ ತೆರೆದ ಬಾವಿ ಹೊಂದಿರುವವರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ, ಹೊಸದಾಗಿ ಕೊಳವೆ ಬಾವಿ ಇಲ್ಲವೇ ತೆರೆದ ಬಾವಿ ಕೊರೆಸಲು ಇಚ್ಚಿಸುವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಇಲ್ಲದೆ ಕೊರೆ ಯಿಸಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಮಿತಿ ತಿಳಿಸಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ಅಂತರ್ಜಲ ನಿರ್ದೇಶನಾಲಯ, ನಂ.102, 3ನೇ ಕ್ರಾಸ್‌, 1ನೇ ಬ್ಲಾಕ್‌, ಉತ್ತರ ಬಡಾವಣೆ, 1ನೇ ಫೇಸ್‌, ರತ್ನಾಕರ ಬ್ಯಾಂಕ್‌ ಪಕ್ಕ, ಬಿ.ಎಂ.ರಸ್ತೆ,
2ನೇ ಮಹಡಿ, (ರಾಯಲ್‌ಎನ್ ಫೀಲ್ಡ್ ಶೋರೂಂ ಮೇಲ್ಭಾಗ), ರಾಮ ನಗರ-562159. ಕಚೇರಿ ದೂ.080-2727 3397 ಇಲ್ಲಿ ಸಂಪರ್ಕಿಸ ಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಭೂವಿಜ್ಞಾನಿ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂತರ್ಜಲ ಕಚೇರಿ
ಹಿರಿಯ ಭೂವಿಜ್ಞಾನಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next