Advertisement
ನವದೆಹಲಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್, “ಲಸಿ ಕೆಯ ಎರಡೂ ಡೋಸ್ ಪಡೆಯುವುದು ಅಗತ್ಯ. ಅದರಲ್ಲಿ ಬದಲಾವಣೆ ಇಲ್ಲ. 3ನೇ ಡೋಸ್ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ’ ಎಂದಿದ್ದಾರೆ. ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರಬೇಕು.ಅಕ್ಟೋಬರ್ ಮತ್ತು ನವೆಂಬರ್ ನಿರ್ಣಾಯಕವಾಗಲಿವೆ. ಲಸಿಕೆ ನೀಡುವಿಕೆ ಹೆಚ್ಚಾಗಬೇಕು, ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯಾಗಬೇಕು ಎಂದು ಎಚ್ಚರಿಸಿದ್ದಾರೆ.
ಗಣೇಶೋತ್ಸವ ಮತ್ತು ಸಂಭವನೀಯ ಕೊರೊನಾ ಮೂರನೇ ಅಲೆ ಹಿನ್ನೆಲೆ ಸರಕಾರ ಮತ್ತು ಮನಪಾ ಆಡಳಿತ ಆತಂಕದಲ್ಲಿರುವಾಗ ಇದೀಗ ಬಂದಿರುವ ಸಮೀಕ್ಷೆ ಯೊಂದು ನಿಟ್ಟುಸಿರು ಬಿಡುವಂತಾ ಗಿದೆ. ಮುಂಬಯಿ ಯಲ್ಲಿ ಶೇ.70ರಿಂದ 80ರಷ್ಟು ನಾಗರಿಕರಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ ಎಂಬ ಅಂಕಿ ಅಂಶಗಳು ಸೀರೋ ಸಮೀಕ್ಷೆಯಿಂದ ತಿಳಿದು ಬಂದಿವೆ. ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ವತಿಯಿಂದ ನಗರದಲ್ಲಿ ಐದನೇ ಸೀರೋ ಸಮೀಕ್ಷೆಯನ್ನು ನಡೆಸಿದೆ. 24 ವಾರ್ಡ್ ಗಳಿಂದ 8,000 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಲಸಿಕೆ ಪಡೆದವರು ಮತ್ತು ಲಸಿಕೆ ಪಡೆಯದ ನಾಗರಿಕರನ್ನು ಒಳಗೊಂಡಿದೆ. ಚಿಕ್ಕ ಮಕ್ಕಳನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿಲ್ಲ. ಸಮೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿಗಳ ಪೈಕಿ ಶೇ. 70ರಿಂದ 80ರಷ್ಟು ನಾಗರಿಕರು ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ಕಂಡುಬಂದಿದೆ. ಈ ವಿವರವಾದ ವರದಿಯನು ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ ಸದ್ಯದಲ್ಲೇ ಹೊರಡಿಸುವ ಸಾಧ್ಯತೆಯಿದೆ.