Advertisement

ಆಸ್ಟ್ರೇಲಿಯಾ ಗ್ರೂಪ್‌ಗೆ ಭಾರತ ಪ್ರವೇಶ

03:12 PM Jan 20, 2018 | Team Udayavani |

ನವದೆಹಲಿ: ಪರಮಾಣು ಪೂರೈಕೆದಾರರ ಸಮೂಹ (ಎನ್‌ಎಸ್‌ಜಿಗೆ) ಭಾರತ ಪ್ರವೇಶಿಸುವುದಕ್ಕೆ ಪೂರಕವಾಗಿ ಆಸ್ಟ್ರೇಲಿಯಾ ಸಮೂಹಕ್ಕೆ ಭಾರತ ಪ್ರವೇಶ ಪಡೆದಿದೆ. ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಈಗಾಗಲೇ ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಸಮೂಹ
ಹಾಗೂ ವಸ್ಸೇನಾರ್‌ ಅರೇಂಜ್‌ಮೆಂಟ್‌ಗೆ ಸಹಿ ಹಾಕಿದೆ.

Advertisement

ಇದೀಗ ಆಸ್ಟ್ರೇಲಿಯಾ ಸಮೂಹಕ್ಕೆ ಸಹಿ ಹಾಕಿರುವುದರಿಂದ ಎನ್‌ಎಸ್‌ಜಿ ಸೇರ್ಪಡೆ ಸಾಧ್ಯತೆ ಹೆಚ್ಚಾಗಿದೆ. ಆದರೆ ಈ ಹಿಂದಿನ ಪ್ರಯತ್ನಗಳಿಗೆ ಚೀನಾ ತಡೆಯೊಡ್ಡಿತ್ತು. ಉಗ್ರರಿಗೆ ರಾಸಾಯನಿಕ ಹಾಗೂ ಜೈವಿಕ ಶಸ್ತ್ರಾಸ್ತ್ರಗಳು ಅಭಿವೃದ್ಧಿಗೊಳಿಸಲು ಅಥವಾ ಖರೀದಿಸಲು ಅವಕಾಶ
ನೀಡುವುದನ್ನು ತಡೆಯುವ ಉದ್ದೇಶದಿಂದ ರಚಿಸಿಕೊಂಡ ಸಮೂಹವೇ ಆಸ್ಟ್ರೇಲಿಯಾ ಗ್ರೂಪ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next